“ವಿದ್ಯಾರ್ಥಿಗಳಿಗೆ ಉತ್ತಮ ಗುರಿ ಅತ್ಯಗತ್ಯ”: ಡಾ.ಎಮ್ ಮೋಹನ್ ಆಳ್ವಾ

ವಿದ್ಯಾಗಿರಿ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ ಭವಿಷ್ಯವನ್ನು ಸಂತೋಷದಿಂದ ಕಳೆಯಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ತಿಳಿಸಿದರು.
ಅವರು ಆಳ್ವಾಸ್ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಿಎ ಫೌಂಡೆಶನ್ ಮತ್ತು ಐಪಿಸಿಯ ಒರಿಯೆಂಟೆಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸದಲ್ಲಿ ಲಾಭ ನಷ್ಟವನ್ನು ನೋಡದೆ ಫಲಿತಾಂಶದ ಕಡೆಗೆ ಗಮನವಿರಬೇಕು. ಅಲ್ಲದೆ ನಮಗೆ ಅಗತ್ಯ ಇರುವ ವಿಷಯಗಳನ್ನು ಅಧ್ಯಯನ ಮಾಡುವುದು ತುಂಬಾ ಫಲಪ್ರದವಾಗುತ್ತದೆ. ಪ್ರತಿಯೊಬ್ಬರು ಬದುಕುವ ರೀತಿ ವಿಭಿನ್ನ, ಅವರ ರೀತಿ ನೀತಿಯನ್ನು ಮೌಲ್ಯಮಾಪನ ಮಾಡುವ ಚಾತುರ್ಯತೆ ಇರಬೇಕು. ಆಗ ಮಾತ್ರ ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿ ಸಾಧನೆ ಮಾಡಲು ಸಾದ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಥಿತಿಯಾಗಿ ಭಾಗವಹಿಸಿದ್ದ ಸಿಕಾಸ್ ಸಂಸ್ಥೆಯ ಅಧ್ಯಕ್ಷರಾದ ಸಿಎ ಪ್ರಸನ್ನ ಶೈಣೈ ಎಮ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದೆ ಸುಖವಾಗಿರಬಹುದು. ಅಲ್ಲದೆ ನಾವು ಕಲಿತ ವಿದ್ಯಾಸಂಸ್ಥೆಗೆ ಚಿರಋಣಿಯಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೋ.ಕುರಿಯನ್, ಆಡಳಿತ ಅಧಿಕಾರಿ ಪ್ರೋ. ಬಾಲಕೃಷ್ಣ ಶೆಟ್ಟಿ, ಮತ್ತು ಸಿಕಾಸ್‍ನ ಸದಸ್ಯರಾದ ಸಿಎ ಅನ್ವೇಷ್ ಶೆಟ್ಟಿ ಉಪಸ್ಥಿತರಿದ್ದರು.

Highslide for Wordpress Plugin