Alvas Education Foundation

ಆಳ್ವಾಸ್‍ನಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮ

ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಡಾ. ಎನ್ ವಿನಯ್ ಹೆಗಡೆ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ 69ನೇ ಗಣರಾಜ್ಯೋತ್ಸವ ಆಚರಣೆಯು ವಿಜೃಂಭಣೆಯಿಂದ ನೆರವೇರಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಿಟ್ಟೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಎನ್ ವಿನಯ್ ಹೆಗಡೆ,”ಮುಂದಿನ ಭವಿಷ್ಯವಾಗಿರುವ ನೀವೆಲ್ಲರೂ ಸಮಾಜಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಧಾರ್ಮಿಕ ಸಾಮರಸ್ಯ ತರುವಲ್ಲಿ ಶ್ರಮಿಸಬೇಕು. ಸಾಮರಸ್ಯವಿಲ್ಲದೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ” ಎಂದು ಕರೆ ನೀಡಿದರು.
“ನಮ್ಮ ದೇಶ ಒಂದು ಪಥದಲ್ಲಿ ಸುಸ್ಥಿರ ಅಭಿವೃದ್ಧಿ ಹೊಂದುತ್ತಿದ್ದರೂ, ದಿನೇ ದಿನೇ ಜನರಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಶಿಕ್ಷಿತರೆನಿಸಿಕೊಳ್ಳಲು ಪದವಿಯಷ್ಟೇ ಅಲ್ಲ ಉತ್ತಮ ನಡವಳಿಕೆಯೂ ಮುಖ್ಯವಾಗುತ್ತದೆ. ಹಾಗಾಗಿ ಈಗಿನ ಯುವಜನತೆ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
“ಇಲ್ಲಿನ ಮಕ್ಕಳಲ್ಲಿ ಒಂದು ಶ್ರದ್ಧೆ ಇದೆ. ನಿಮ್ಮೆಲ್ಲರ ಶಿಸ್ತಿನಲ್ಲಿ ದೇಶದ ಭವಿಷ್ಯ ಕಾಣುತ್ತಿದೆ. ನಿಮ್ಮ ಅರ್ಪಣಾ ಮನೋಭಾವಕ್ಕೆ ನಾನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಕರ್ನಾಟಕದ ಬೆಂಗಳೂರು, ಮಡಿಕೇರಿ ಸೇರಿದಂತೆ ವಿವಿಧ ಸ್ಥಳಗಳಿಂದ ಆಗಮಿಸಿದ್ದ 1200ಕ್ಕೂ ಅಧಿಕ ಎನ್‍ಸಿಸಿ ಕೆಡೆಟ್ಸ್ ಹಾಗೂ ಸ್ಕೌಟ್ಸ್, ಗೈಡ್ಸ್‍ಗಳ ಅಭೂತಪೂರ್ವ ಪಥಸಂಚಲನಕ್ಕೆ ಗಣರಾಜ್ಯ ಸಂಭ್ರಮ ಸಾಕ್ಷಿಯಾಯಿತು. 180 ಎನ್‍ಸಿಸಿ ಕೆಡೆಟ್ಸ್ ರಾಷ್ಟ್ರಧ್ವಜಕ್ಕೆ ಬಂದೂಕಿ ಸಲಾಮಿ ಸಲ್ಲಿಸಿದರು.
ಧ್ವಜಾರೋಹಣ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.
ಎಲ್ಲವೂ ತ್ರಿವರ್ಣಮಯ
‘ಕೋಟಿ ಕಂಠೋಂಸೇ’ ರಾಷ್ಟ್ರ ಐಕ್ಯತಾ ಗೀತೆಗೆ ನೆರೆದವರೆಲ್ಲಾ ತ್ರಿವರ್ಣ ಧ್ವಜವನ್ನು ಹಾರಿಸಿದರು. 300ಕ್ಕೂ ಅಧಿಕ ವಿದ್ಯಾರ್ಥಿಗಳು ತ್ರಿವರ್ಣದ ಕೊಡೆಯನ್ನು ತಿರುಗಿಸಿದರು. ಇದೇ ವೇಳೆಯಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನ್‍ಗಳನ್ನು ಹಾರಿಬಿಡಲಾಯಿತು.
  • 30000 ಅಧಿಕ ಮಂದಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಾಕ್ಷಿಯಾದರು.
  • ಭಾರತೀಯ ಸೇನೆಯ ಅನೇಕ ನಿವೃತ್ತ ಸೈನ್ಯಾಧಿಕಾರಿಗಳು ಧ್ವಜಾರೋಹಣದಲ್ಲಿ ಭಾಗಿಯಾದರು.
  • ತ್ರಿವರ್ಣದ ಉಡುಪು ಧರಿಸಿದ್ದ ವಿದ್ಯಾರ್ಥಿಗಳು “IಓಆIಂ”  ಎಂಬ ರೂಪನ್ನು ನಿರ್ಮಿಸಿದ್ದರು.

 

Highslide for Wordpress Plugin