ಅಂತರ್ ಕಾಲೇಜು ಖೋ-ಖೋ: ಆಳ್ವಾಸ್ ಕಾಲೇಜುಗಳ ಪಾರಮ್ಯತೆ

ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜು ವಾಮದಪದವು ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವದ್ಯಾನಿಲಯ ಮಟ್ಟದ ಮಹಿಳೆಯರ ಖೋ-ಖೋ ಪಂದ್ಯಾಟವು ಆಯೋಜಿಸಲಾಗಿದ್ದು. ಮಂಗಳೂರು ವಿಶ್ವವಿದ್ಯಾನಿಲಯ ಹಲವು ಕಾಲೇಜುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಈ ಬಾರಿಯು ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾಲೇಜುಗಳು ಪ್ರಾಬಲ್ಯವನ್ನು ತೋರಿದೆ, ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡವು ಸತತ 11ನೇ ಬಾರಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ “ಶ್ರೀ.ಹೆಚ್.ವಿ.ಕಮಲೇಶ್ ಪರ್ಯಾಯ ಪಾರಿತೋಷಕವನ್ನು ತನ್ನಲ್ಲೇ ಉಳಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಮೂಡಬಿದಿರೆ ತಂಡವು, ತೃತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವು ಹಾಗೂ ಚತುರ್ಥ ಸ್ಥಾನವನ್ನು ವಿವೇಕಾನಂದ ಕಾಲೇಜು ಪುತ್ತೂರು ತಂಡವು ಪಡೆದುಕೊಂಡುವು. ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಸವಿನಾ (ಅತ್ಯುತ್ತಮ ಸರ್ವಾಗೀಣ ಆಟಗಾರ್ತಿ) ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಸುಧಾ(ಅತ್ಯುತ್ತಮ ಓಟಗಾರ್ತಿ) ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮಪದವಿನ ಶುಭಶ್ರೀ(ಅತ್ಯುತ್ತಮ ಹಿಡಿತಗಾರ್ತಿ) ವೈಯುಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

Highslide for Wordpress Plugin