ಅಂತರ್ ವಿವಿ ಕ್ರೀಡೆಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ವಿಶೇಷ ಸಾಧನೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆಂಧ್ರ ವಿ.ವಿ ಯಲ್ಲಿ ಮುಕ್ತಾಯಗೊಂಡ ಆಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿ.ವಿ ಸತತ ಆರನೇ ಬಾರಿ ಪ್ರಶಸ್ತಿಯನ್ನು ಪಡೆದುಕೊಂಡು ಡಬಲ್ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದೆ. ಈ ವರೆಗಿನ ಆರು ಬಾರಿಯ ಚಾಂಪಿಯನ್ ತಂಡದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಎಲ್ಲಾ ಹತ್ತು ಮಂದಿ ಆಟಗಾರರು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಉಲ್ಲೇಖನೀಯ.

ಅಖಿಲ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಸತತ 17ನೇ ಬಾರಿ ಲೀಗ್ ಹಂತಕ್ಕೆ ಆಯ್ಕೆಯಾದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಮಂಗಳೂರು ವಿವಿ ಪಾತ್ರವಾಗಿದು,್ದ ಮಂಗಳೂರು ವಿವಿಯು ಅಖಿಲ ಭಾರತ ಅಂತರ್ ವಿ.ವಿ ಬಾಲ್ ಬ್ಯಾಡ್ಮಿಂಟನ್‍ನಲ್ಲಿ 10 ನೇ ಬಾರಿಗೆ ಚಾಂಪಿಯನ್‍ಶಿಪ್‍ನ್ನು ಮುಡಿಗೇರಿಸಿಕೊಂಡಿದೆ. ಈಗಾಗಲೇ ರಾಷ್ಟೀಯ ಸೀನಿಯರ್ ಚಾಂಪಿಯನ್‍ಶಿಪ್ ಹಾಗೂ ರಾಷ್ಟ್ರೀಯ ಫೆಡರೇಶನ್ ಕಪ್ ಚಾಂಪಿಯನ್‍ಶಿಪ್‍ನಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ ಕರ್ನಾಟಕ ತಂಡದಲ್ಲೂ ಹಾಗೂ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ ಮಂಗಳೂರು ವಿ.ವಿ ತಂಡದಲ್ಲೂ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ ಗಮನಾರ್ಹವಾಗಿದ್ದು, ಮುಂದಿನ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸವಿದೆ. ಕಳೆದ 6 ಬಾರಿ ಮಂಗಳೂರು ವಿ ವಿ ಯು ಚಾಂಪಿಯನ್ ಆದಾಗಲೂ ತಂಡದ ಹಿರಿಯ ಆಟಗಾರ್ತಿ ಜಯಲಕ್ಷ್ಮಿ ತಂಡದ ಖಾಯಂ ಸದಸ್ಯರಾಗಿದ್ದು ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ವಿಜೇತ ತಂಡದ ಎಲ್ಲಾ 10 ಮಂದಿ ಆಟಗಾರರು ಆಳ್ವಾಸ್ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ.

ಈ ವಿಶೇಷ ಸಾಧನೆಗೆ ಸಂಸ್ಥೆಯ ಅದ್ಯಕ್ಷರಾದ ಡಾ. ಮೋಹನ್ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Highslide for Wordpress Plugin