ಅನುಭವಗಳ ಅನ್ವೇಷಣೆಯಿಂದ ಸಂತೋಷ ಪಡೆಯಲು ಸಾಧ್ಯ : ಅಕ್ಷರ ದಾಮ್ಲೆ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ವಿಭಾಗದ ಯುನೋಯ ಸ್ಟುಡೆಂಟ್ ಕೌನ್ಸಿಲ್‍ವತಿಯಿಂದ ಸ್ವಾನುಭವ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮನೋಶಾಸ್ತ್ರಜ್ಞ ಹಾಗೂ ಟೆಡೆಕ್ಸ್ ಸ್ಪೀಕರ್ ಅಕ್ಷರ ದಾಮ್ಲೆ ಮಾತನಾಡಿ,  ಮನೋಶಾಸ್ತ್ರಜ್ಞರು ಹಾಗೂ ಮನೋ ಸಲಹೆಗಾರರುಗಳು ತಮ್ಮಲ್ಲಿನ ಆತಂಕ, ಸಮಸ್ಯೆ, ಹಾಗೂ ದೌರ್ಬಲ್ಯಗಳನ್ನು ಮೊದಲು ಸಮರ್ಥವಾಗಿ ಪರಿಹರಿಸಿ ನಂತರ ಇನ್ನೊಬ್ಬರ ಸಮಸ್ಯೆಯನ್ನು ಉಪಶಮನ ಮಾಡುವಲ್ಲಿ ಮುಂದಾಗಬೇಕು. ಇಲ್ಲಾವದಲ್ಲಿ ತಮ್ಮ ಸಮಸ್ಯೆಯಿಂದ ಪ್ರಭಾವಿತರಾಗಿ ತಮ್ಮ ಬಳಿಗೆ ಬರುವ ರೋಗಿಗಳ ಸಮಸ್ಯೆಗಳಿಗೆ ವ್ಯತಿರಿಕ್ತವಾಗಿ ಪರಿಹಾರವನ್ನು ಸೂಚಿಸಬಹುದು. ಆದ್ದರಿಂದ ರೋಗಿಗಳ ಮಾನಸಿಕ ಸಮಸ್ಯೆಯನ್ನು ಮೊದಲು ಸಮರ್ಥವಾಗಿ ಅರ್ಥೈಸಿಕೊಂಡು ಪರಿಹಾರದ ಮಾರ್ಗವನ್ನು ತಿಳಿಸಬೇಕು ಎಂದರು.

ನೆರೆದ ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಹಂತಗಳನ್ನು ಚಿತ್ರ ರೂಪದಲ್ಲಿ ಬಿಡಿಸಲು ಹೇಳಿ ನಂತರ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಹಾಗೂ ಅವರ ಇಷ್ಟದ ಪ್ರಾಣಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಿ ಅವುಗಳ ಮೂಲಕ ಭಾವನೆಯನ್ನು ಅರಿಯುವ ಚಟುವಟಿಕೆ ನೀಡಿ ಸ್ವಾನುಭವದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ದೀಪಾ ಕೊಠಾರಿ, ಉಪನ್ಯಾಸಕಿ ಜೋಸ್ವಿಟಾ ಡೇಸಾ ಹಾಗೂ ಯುನೋಯ ಸ್ಟುಡೆಂಟ್ ಕೌನ್ಸಿಲ್ ಅಧ್ಯಕ್ಷೆ ಸೋನಿಯಾ ಸಲಿ ಉಪಸ್ಥಿತರಿದ್ದರು.

Highslide for Wordpress Plugin