ಆಳ್ವಾಸ್ ಕಾಲೇಜಿಗೆ 25 ರ್ಯಾಂಕ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ 2019ರ ಸಾಲಿನಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್ ಕಾಲೇಜು ಒಟ್ಟು 25 ರ್ಯಾಂಕ್ ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲೇ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ.

ಒಟ್ಟು 25 ರ್ಯಾಂಕ್‍ಗಳಲ್ಲಿ 7 ಪ್ರಥಮ, 6 ದ್ವಿತೀಯ, 6 ತೃತೀಯ, ನಾಲ್ಕನೇ ರ್ಯಾಂಕ್ 1, ಆರನೇ ರ್ಯಾಂಕ್ 1, ಏಳನೇ ರ್ಯಾಂಕ್ 1, ಒಂಬತ್ತನೇ ರ್ಯಾಂಕ್ 1 ಹಾಗೂ ಹತ್ತನೇ ರ್ಯಾಂಕ್ 2 ಗಳಿಸಿದೆ.

ಬಿಕಾಂನ ಆರುಷಿ ಸಿ.ಎ. (ಶೇ.96), ಬಿಎಸ್ಸಿ ಎಫ್‍ಎನ್‍ಡಿಯ ಸ್ವಸ್ತಿ ಸೀತಾರಾಮ್ ಉಪಾಧ್ಯಾಯ (ಶೇ.90.1), ಬಿಎಸ್‍ಡಬ್ಲ್ಯುನ ನಿತ್ಯಾನಂದ (ಶೇ. 88.02), ಎಚ್‍ಆರ್‍ಡಿಯ ಜಸ್ಮಿತಾ ನೇಹಾ ಪಿಂಟೋ (ಶೇ.87.66), ಬಿವಿಎನ ಸುಮಂತ್ ಆಚಾರ್ಯ (ಶೇ.91.26), ಬಿಪಿಎಡ್‍ನ ದಿವ್ಯಶ್ರೀ ಪಿ. (ಶೇ.81.50), ಬಿಎಡ್‍ನ ರೇಖಾ ಬಾಳಿಗ ಬಿ.(ಶೇ.88.63) ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.
ಬಿಎಸ್ಸಿ (ಹೆಚ್‍ಎಸ್)ನ ಮಹಮ್ಮದ್ ಇರ್ಫಾನ್, ಬಿಎಸ್ಸಿ ಎಫ್‍ಎನ್‍ಡಿಯ ಭವಿಕಾ ಕೆ.ಪಿ., ಬಿಎಸ್‍ಡಬ್ಲ್ಯುನ ಗುರುರಾಜ್, ಎಚ್‍ಆರ್‍ಡಿಯ ರಮ್ಸೀನಾ ಇ.ಆರ್, ಬಿವಿಎನ ಪ್ರೀತಿ ಪ್ರಪಕಜೆ, ಬಿಪಿಎಡ್‍ನ ಮಂಜುನಾಥ ದ್ವೀತೀಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.

ಬಿಎನ ಸೋನಿಯಾ ಎಸ್, ಬಿಎಸ್ಸಿ ಎಫ್‍ಎನ್‍ಡಿಯ ಅನುಶ್ರೀ ಕೆ, ಬಿಎಸ್‍ಡಬ್ಲ್ಯುನ ಪ್ರದೀಪ್ ಕುಮಾರ್, ಬಿವಿಎನ ಅಭಿಲಾಷ್ ಹಾಗೂ ಬಿಪಿಎಡ್‍ನ ಚೈತ್ರಾ ಕೆ.ಜೆ. ಹಾಗೂ ಬಿಎಡ್‍ನ ಸುರೇಂದ್ರ ತೃತೀಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.

ಬಿಕಾಂನ ಮಧುರಾ ನಾಲ್ಕನೇ ರ್ಯಾಂಕ್, ಬಿಎಸ್ಸಿಯ ಸಂಪ್ರೀತ್‍ಯ್ಯಬ ಎಂ.ಎಸ್ ಆರನೇ ರ್ಯಾಂಕ್, ಬಿಬಿಎನ ಡಿಸೌಜಾ ಕ್ರಿಸ್ ಸಿರಿಲ್ ಏಳನೇ ರ್ಯಾಂಕ್, ಬಿಕಾಂನ ಸೌಂದರ್ಯ ಎನ್ ಮತ್ತೂರ್ ಒಂಬತ್ತನೇ ರ್ಯಾಂಕ್, ಬಿಎನ ಮಂಜುನಾಥ್ ಶಿವಯ್ಯ ಮಠಪತಿ ಹಾಗೂ ಬಿಕಾಂನ ಸೋನಿಯಾ ಸಮಂತ ಪಿಂಟೋ ಹತ್ತನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ಕುರಿಯನ್ ಹಾಗೂ ಆಳ್ವಾಸ್ ಕಾಲೇಜು ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅಂಧ ವಿದ್ಯಾರ್ಥಿಗಳ ಸಾಧನೆ

ಬಿಎಸ್‍ಡಬ್ಲ್ಯು ಪರೀಕ್ಷೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಪಡೆದ ಗುರುರಾಜ್, ನಿತ್ಯಾನಂದ ಹಾಗೂ ಪ್ರದೀಪ್ ಕುಮಾರ್ ಅಂಧ ವಿದ್ಯಾರ್ಥಿಗಳಾಗಿದ್ದು ಸಾಧನೆಗೆ ದೃಷ್ಟಿಹೀನತೆ ತಡೆಯಲ್ಲ ಎಂಬುದನ್ನು ತೋರಿಸಿದ್ದಾರೆ. ಪಠ್ಯ ವ್ಯಾಸಂಗದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹದಿಂದ ತೊಡಗಿಸಿಕೊಂಡಿರುವ ಈ ಮೂವರು ಐಎಎಸ್ ಆಕಾಂಕ್ಷಿಗಳಾಗಿದ್ದಾರೆ
ಉಪಸ್ಥಿತಿ;
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ,
ಆಳ್ವಾಸ್ ಕಾಲೇಜು ಪ್ರಾಚಾರ್ಯ ಡಾ. ಕುರಿಯನ್
ಆಳ್ವಾಸ್ ಕಾಲೇಜು ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿ.ಆರ್.ಒ ಡಾ| ಪದ್ಮನಾಭ ಶೆಣೈ

Highslide for Wordpress Plugin