ಯುತ್‍ಕಾನ್‍ಕ್ಲೇವ್ 2019

ವಿದ್ಯಾಗಿರಿ: ಯಾವುದೇ ವಾಣಿಜ್ಯ ಉದ್ದಿಮೆ ಮಾಡಲುಉತ್ತಮಕೌಟುಂಬಿಕ ಹಿನ್ನಲೆ ಬೇಕಾಗಿಲ್ಲ. ತಮ್ಮ ಕೆಲಸದಕುರಿತಾದ ಸ್ಪಷ್ಟ ನಿಲುವು, ವ್ಯವಹಾರಿಕಜ್ಞಾನ, ಅದಕ್ಕೆತಕ್ಕಂತ ಯೋಜನೆಗಳನ್ನು ರೂಪಿಸುವ ಸಾಮಥ್ರ್ಯಹೊಂದಿದ್ದರೆಉತ್ತಮ ವಾಣಿಜ್ಯಉದ್ದಿಮೆದಾದರನಾಗಹುದುಎಂದುಎನ್ವಿಗರೀನ್ ಬೈಯೋಟೆಕ್ ಪ್ರೈ. ಲಿ ನ ಸಿ.ಇ.ಒ ಅಶ್ವತ್ ಹೆಗ್ಡೆ ಹೇಳಿದರು.

ಇವರು ಆಳ್ವಾಸ್ ಕಾಲೇಜು ಹಾಗೂ ಪುತ್ತೂರಿನಆಕಾಂಕ್ಷಚಾರಿಟೇಬಲ್ ಟ್ರಸ್ಟ್‍ನಜಂಟಿ ಸಹಯೋಗದಲ್ಲಿ ನಡೆದ `ಯುತ್‍ಕಾನ್‍ಕ್ಲೇವ್ 2019’ ನ್ನು ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯಉದ್ದಿಮೆದಾರನಾಗುವುದು ಸಾಮಾನ್ಯ ಕೆಲಸವಲ್ಲ, ಪ್ರತಿಯೊಬ್ಬಉದ್ಯಮಿಯುತನ್ನ ಭವಿಷ್ಯದಕುರಿತು ಸ್ಪಷ್ಟಚಿತ್ರಣ ಹೊಂದಿರಬೇಕು.ಅದಕ್ಕಾಗಿ ಸರಿಯಾದ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು.ತನ್ನಉದ್ಯಮದ ಸಾಧಕ ಬಾಧಕಗಳನ್ನು ಸರಿಯಾಗಿ ಯೋಚಿಸಿ ಹೆಜ್ಜೆಇಡುವುದು ಸೂಕ್ತ. ಆಗ ಯಶಸ್ಸು ವ್ಯಕ್ತಿಯನ್ನು ಹಿಂಬಾಲಿಸುವುದುಎಂದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದಡಾ.ಕುರಿಯನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯುತನ್ನಚೌಕಟ್ಟಿನಿಂದ ಹೊರಬಂದುಚಿಂತಿಸಬೇಕು.ಯಾವುದೇ ವಿಷಯವನ್ನು ವ್ಯಕ್ತಪಡಿಸುವಾಗ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬೇಕು. ಮಾತ್ರವಲ್ಲಯಾವುದೇ ಪ್ರತಿಫಲಾಆಪೇಕ್ಷೆಯಿಲ್ಲದೇ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಆಗ ಮಾತ್ರ ಜಯಗಳಿಸಲು ಸಾಧ್ಯಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಯುವವಿಜ್ಞಾನಿ ಪ್ರತಾಪ್‍ಎನ್. ಎಮ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಸ್ವಸ್ತಿಕ್ ಪದ್ಮ, ಹಾಗೂ `ಹಳ್ಳಿ ಮನೆ ರೊಟ್ಟಿ’ ಯ ಸಂಸ್ಥಾಪಕಿ ಶಿಲ್ಪಾ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿಆಕಾಂಕ್ಷಚಾರಿಟೇಬಲ್ ಟ್ರಸ್ಟ್‍ನ ಮ್ಯಾನೇಜಿಂಗ್‍ಡೈರೆಕ್ಟರ್ ಶ್ರೀಶಾ ಭಟ್ ಉಪಸ್ಥಿತರಿದ್ದರು.ಆಕಾಂಕ್ಷಚಾರಿಟೇಬಲ್ ಟ್ರಸ್ಟ್‍ನ ಸದಸ್ಯೆಯಾದ ಸುಕ್ಷಿತಾಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin