ಮಂಗಳೂರು ವಿ.ವಿ.: ಮಹಿಳೆಯರ ಹ್ಯಾಂಡಬಾಲ್ ಆಳ್ವಾಸ್‍ಗೆ ಪ್ರಶಸ್ತಿ

 

ದಿನಾಂಕ 07.02.2020ಮತ್ತು 08.02.2020ರಂದು ಸೆಂಟ್‍ಅಲೋಷಿಯಸ್ ಪದವಿ. ಕಾಲೇಜು ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಆಳ್ವಾಸ್‍ನ ಮಹಿಳೆಯರ ಹ್ಯಾಂಡ್‍ಬಾಲ್ ತಂಡವು ಫೈನಲ್‍ನಲ್ಲಿ ಸೆಂಟ್ ಅಲೋಷಿಯಸ್ ಪದವಿ ಕಾಲೇಜ್‍ನ್ನು 16-08 ಅಂಕಗಳ ಅಂತರದಲ್ಲಿ ಸೋಲಿಸಿ, ಆಳ್ವಾಸ್‍ನ ಶ್ವೇತಾ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.
ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರು ಅಭಿನಂದಿಸಿದ್ದಾರೆ.