ಮಂಗಳೂರು ವಿ.ವಿ.ಯ ಅಂತರ್ ಕಾಲೇಜು ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ ಆಳ್ವಾಸ್‍ಗೆ ಪ್ರಶಸ್ತಿ

ದಿನಾಂಕ 15.02.2020 ಮತ್ತು 16.02.2020ರಂದು ಮಂಗಳೂರಿನ ರಾಮಕೃಷ್ಣ ಕಾಲೇಜ್‍ನಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ.ಯ.ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್‍ನ ಪುರುಷರ ವಾಲಿಬಾಲ್ ತಂಡವು ಫೈನಲ್‍ನಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜ್ ತಂಡವನ್ನು ಸೋಲಿಸಿ ಚಾಂಪಿಯನಾಗಿ ಹೊರಹೊಮ್ಮಿತು. ಆಳ್ವಾಸ್‍ನ ಗ್ಲೇವನ್ ಅವರು ಉತ್ತಮ ಹೊಡೆತಗಾರ ಹಾಗೂ ಧನುಷ ಅವರು ಉತ್ತಮ ಎತ್ತುಗಾರನಾಗಿ ಹೊರಹೊಮ್ಮಿರುತ್ತಾರೆ.
ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್‍ಆಳ್ವರವರು ಅಭಿನಂದಿಸಿದ್ದಾರೆ.