ಮೂಡುಬಿದಿರೆ: ಪುತ್ತಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಳ್ವಾಸ್ ಕಾಲೇಜಿನ ತೃತೀಯ ಸಮಾಜಕಾರ್ಯ ವಿದ್ಯಾರ್ಥಿಗಳಾದ ಗುರುರಾಜ್, ನಿತಿನ್, ಹಾರ್ದಿಕ್, ಶ್ರೀದರ್ ಹಾಗೂ ನಿತ್ಯಾನಂದ ಮಾಹಿತಿ ಕಾರ್ಯಕ್ರಮವನ್ನು ಸೋಮವಾರ ನಡೆಸಿಕೊಟ್ಟರು.
ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಮದುಮಾಲ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿಧ್ಯಾರ್ಥಿಗಳ ಕಲಿಕೆಯಲ್ಲಿ ಹಾಗೂ ಬೆಳವಣಿಗೆಯಲ್ಲಿ ಪೆÇೀಷಕರ ಪಾತ್ರ ವಿಷಯದ ಕುರಿತು ಮಾತನಾಡಿದರು. ಮಕ್ಕಳದ ಆರೋಗ್ಯದ ಬಗ್ಗೆ ಪೋಷಕರು ಕಾಳಜಿವಹಿಸಬೇಕು. ಮಹಿಳೆಯರು ತಮ್ಮ ಹಕ್ಕಿನ ಬಗ್ಗೆ ಅರಿತು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬಹುದು ಎಂದು ಹೇಳಿದರು.
ಬರೆದಿರುವ ಪುಸ್ತಕಗಳಲ್ಲಿ ಉಳಿದಿರುವ ಖಾಲಿ ಪುಟಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕವನ್ನಾಗಿ ಪರಿವರ್ತಿಸಿ ಅಗತ್ಯ ಇರುವ ವಿಧ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ತೃತೀಯ ವಿಭಾಗದ ವಿದ್ಯಾರ್ಥಿ ಪುನೀತ್ ನಡೆಸಿಕೊಟ್ಟರು. ಪುತ್ತಿಗೆ ಶಾಲೆಯಲ್ಲಿರುವ ಒಂದನೆ ತರಗತಿಯಿಂದ ಏಳನೇ ತರಗತಿಯ ಒಟ್ಟು 37 ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಜಾಯಿಸ್ ಮೊನೀಸ್ ಅಧ್ಯಕ್ಷತೆವಹಿಸಿದರು. ಎಸ್ಡಿಎಂಸಿ ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಕುಶಲ, ಪುತ್ತಿಗೆ ಅಂಗನವಾಡಿ ಕಾರ್ಯಕರ್ತೆ ಗುಣಶೀಲ ಉಪಸ್ಥಿತರಿದ್ದರು.