ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದವತಿಯಿಂದ ಪೋಸ್ಟರ್ ನಿರ್ಮಾಣ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದವತಿಯಿಂದ ಪೋಸ್ಟರ್ ನಿರ್ಮಾಣ, ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಒಟ್ಟು 28 ವಿಷಯಗಳಿಗೆ ಸಂಬಂದಪಟ್ಟ ಪೋಸ್ಟರ್‍ಗಳನ್ನು ನಿರ್ಮಾಣ ಮಾಡಿದ್ದರು. ಮುಖ್ಯವಾಗಿ ಸೆಲ್ಪ ಹೆಲ್ಪ ಗ್ರೂಪ್ಸ್, ಐಡಿಬಿಐ, ಸಿಡೋ, ಕೆಎಸ್‍ಎಫ್‍ಸಿ, ಎಂಎಫ್‍ಐ, ಎಸ್‍ಐಡಿಬಿಐ, ಮುದ್ರಾ, ಐಐಈ, ನಾಬಾರ್ಡ ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳು ತಾವು ನಿರ್ಮಿಸಿದ ಪೋಸ್ಟರ್‍ಗಳ ಬಗ್ಗೆ ವಿವರಣೆಯನ್ನು ತೀರ್ಪುಗಾರರ ಮುಂದೆ ನೀಡಿದರು. ತೀರ್ಪುಗಾರರಾಗಿ ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಡಾ ಶೇರ್ಲಿ ಟಿ. ಬಾಬು ಹಾಗೂ ಸವಿತಾ ಸುವರ್ಣ ಆಗಮಿಸಿದ್ದರು.
ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಪ್ರಥಮ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರೆನಿಟಾ ಪಿಂಟೋ ಹಾಗೂ ರಕ್ಷಾ ಜೈನ್ ಪಡೆದುಕೊಂಡರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪವನ್ ಕಿರಣಕೆರೆ ಮಾರ್ಗದರ್ಶನದಲ್ಲಿ ಜರುಗಿದ್ದು, ಪ್ರಗತಿ ಶೆಟ್ಟಿ ಸ್ವಾಗತಿಸಿ, ಶಿಫಾಲಿ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ರಕ್ಷಾ ಶೆಟ್ಟಿ ವಂದಿಸಿ, ರೇನಿಟಾ ಪಿಂಟೋ ನಿರ್ವಹಿಸಿದರು. ದಾಖಲೀಕರಣ ವಿಭಾಗದ ಫ್ಲೇಮಿಂಗ್ ಮತ್ತು ಸುಶ್ಮಿತಾ ಹಾಗೂ ವಿಭಾಗದ ಉಪನ್ಯಾಸಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Highslide for Wordpress Plugin