ಆಳ್ವಾಸ್‍ನಲ್ಲಿ ಹೋಮಿಯೋಪಥಿ ರಾಷ್ಟ್ರೀಯ ಸಮಾವೇಶ

ಮೂಡುಬಿದಿರೆ: ವೈದ್ಯಕೀಯ ಕ್ಷೇತ್ರದ ಯಾವುದೇ ವಿಭಾಗದಲ್ಲಿ ನೀವು ಆಸಕ್ತರಾಗಿದ್ದು, ನಂಬಿಕೆ ಹಾಗೂ ಶ್ರದ್ಧೆಯಿಂದ ವ್ಯಾಸಂಗ ಮಾಡಿದಲ್ಲಿ ವೃತ್ತಿ ಜೀವನದಲ್ಲಿ ತೃಪ್ತಿ, ಯಶಸ್ಸು ಸಿಗುತ್ತದೆ. ಹಿಂದೆ ಹೊಮಿಯೋಪಥಿ ಸೇರಲು ಹಿಂದೇಟು ಹಾಕುವ ಪರಿಸ್ಥಿತಿಯಿತ್ತು. ಆದರೆ ಈಗ ಹೋಮಿಯೋಪಥಿಗೆ ಆಧ್ಯತೆ ನೀಡಿ ಆಯ್ಕೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ. ಹೊಮಿಯೋಪಥಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಯಾಗಬೇಕು. ಸಂಶೋಧನೆಯಿಂದಾಗಿ ಕ್ಷೇತ್ರದಲ್ಲಿ ಅಪನಂಬಿಕೆಗಳು ದೂರವಾಗುತ್ತದೆ. ವಿದ್ಯಾರ್ಥಿಗಳು ಹೊಮಿಯೋಪಥಿ ಸಂಶೋಧನೆಗೆ ಹೆಚ್ಚಿನ ಗಮನವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಹೋಮಿಯೋಪಥಿ ಕಾಲೇಜು ಮತ್ತು ಭಾರತೀಯ ಹೋಮಿಯೋಪಥಿ ವೈದ್ಯ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಭಾನುವಾರ ನಡೆದ `ಡಿಕೋಡ್’ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ ಅಧ್ಯಕ್ಷ ಡಾ.ಅಜಿತ್ ಕುಮಾರ್ ವಿ.ಕೆ ಅಧ್ಯಕ್ಷತೆವಹಿಸಿದರು.
ಪದಾಧಿಕಾರಿಗಳ ಆಯ್ಕೆ: ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಹರೀಂದ್ರನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಬಿ ಆನಂದ ರಾಮನ್ ಆಯ್ಕೆಯಾದರು. ಡಾ.ಸಿನ್‍ಸೆನ್ ಜೋಸೆಫ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.
ಡಾ.ಅನಿತಾ ಎಸ್. ಸಾಲುಂಕೆ, ಡಾ.ಸಿನ್‍ಸೆನ್ ಸಂಪನ್ಮೂಲ ಜೋಸೆಫ್ ವ್ಯಕ್ತಿಯಾಗಿದ್ದರು.
ಕಾಲೇಜಿನ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಪ್ರವೀಣ್ ರೈ ,ಉಪ ಪ್ರಾಂಶುಪಾಲ ಡಾ.ರೋಶನ್ ಪಿಂಟೋ, ಆಡಳಿತಾಧಿಕಾರಿ ಡಾ.ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು.
ಆಳ್ವಾಸ್ ಹೊಮೀಯೋಪಥಿ ಕಾಲೇಜಿನ ಪ್ರಾಂಶುಪಾಲ, ಸಮ್ಮೇಳನದ ಅಧ್ಯಕ್ಷ ಡಾ.ಪ್ರವೀಣ್ ರಾಜ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಅರುಳ್‍ವನನ್ ಡಾ.ಅರುಲ್ವನನ್ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ಮಂಡಿಸಿದರು. ಕೋಶಾಧಿಕಾರಿ ಡಾ.ಚಂದ್ರನ್ ಆರ್ಥಿಕ ವರದಿ ವಾಚಿಸಿದರು. ಡಾ.ಅರ್ಚನಾ  ಸಿ. ಇಂಗೋಲೆ ಕಾರ್ಯಕ್ರಮ ನಿರೂಪಿಸಿದರು. ಡಾ.ಅವಿನಾಶ್ ವಂದಿಸಿದರು.
ಮುಕ್ತ ಚಟುವಟಿಕೆಯ ವೇದಿಕೆಯಲ್ಲಿ ಡಾ.ವೈ.ಎಂ ಖಾದ್ರಿ ಹಾಗೂ ಡಾ.ಅರ್ಚನಾ ಅವರನ್ನು ಗೌರವಿಸಲಾಯಿತು.
ದುಬೈ, ರಾಜಸ್ಥಾನ, ತಮಿಳುನಾಡು, ಕೇರಳ ಸಹಿತ ವಿವಿಧ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಿದರು.

Highslide for Wordpress Plugin