ಜೂನ್ 11, 12 ರಂದು ಇ-ಯಂತ್ರ ರೋಬೊಟಿಕ್ಕ್ಸ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 11, 12ರಂದು ಈ.ಎಲ್.ಎಸ್.ಐ  ಇ-ಯಂತ್ರ ಲ್ಯಾಬ್ ಸೆಟಪ್ಸ್ ಇನಿಸಿಯೇಟಿವ್ ಐ.ಐ.ಟಿ ಮುಂಬೈ  ಇದರ ಸಹಯೋಗದಲ್ಲಿ ನಡೆಯುವ introduction to robotics ಕಾರ್ಯಾಗಾರದಲ್ಲಿ ಈಗಾಗಲೆ ಅನೇಕ ಕಾಲೇಜ್ ಗಳು ಹೆಸರುನೊಂದಾಯಿಸಿಕೊಂಡಿದೆ. 2 ದಿನಗಳ ಕಾರ್ಯಾಗಾರಲ್ಲಿ ರೊಬೋಟಿಕ್ಸ್ ಲ್ಯಾಬ್ ಅಳವಡಿಕೆ ಮತ್ತು ಅದರ ಕಾರ್ಯ ನಿರ್ವಣೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.  ಹಾಗೆಯೆ ಈ ಕಾರ್ಯಕ್ರಮಕ್ಕೆ ಅಗಮಿಸಿದ ಎಲ್ಲಾ ಕಾಲೇಜ್ ಗಳಿಗೆ 2 ರೊಬೋಟ್ ಕಿಟ್ ಗಳನ್ನು ಉಚಿತವಾಗಿ ವಿತರಿದಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಾಗಾರಕ್ಕೆ ಮುಂಚಿತವಾಗಿ ಸೋಮವಾರ ನಡೆದ ಸಭೆಯಲ್ಲಿ ಮುಂಬೈ ಐ.ಐ.ಟಿ  ಕಂಪೂಟರ್  ಸೈನ್ಸ್  ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕವಿ ಆರ್ಯ ಮಂಗಳೂರು ಸುತ್ತಮುತ್ತಲಿನ 15 ಕಾಲೇಜಿನ ಪ್ರಾಂಶುಪಾರರನ್ನು  ಉದ್ದೇಶಿಸಿ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಉಪಸ್ಥಿತರಿದ್ದರು.

Highslide for Wordpress Plugin