ಆಳ್ವಾಸ್‍ನ 33 ವಿದ್ಯಾರ್ಥಿಗಳು NDAಗೆ ಆಯ್ಕೆ

ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ NDA ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‍ನ 33 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪುಣೆಯ ಕಡಕ್‍ವಾಸ್ಲದಲ್ಲಿರುವ NDA ತರಬೇತಿ ಸಂಸ್ಥೆಯಲ್ಲಿ B.Tech ಅಥವಾ B.Sc. ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ NDA ಪರೀಕ್ಷೆಗೆ ದೇಶಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 7,904 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶ್ರೀನಿವಾಸ್ ಎನ್., ನಿರಂಜನ್ ಎಸ್. ಪಟ್ಟನ್‍ಶೆಟ್ಟಿ, ಲೋಹಿತ್ ಎಂ. ಎಸ್., ಮೊಹಮ್ಮದ್ ಅರ್ಶ್ ವೈ, ನಂದೀಶ ಕೆ., ಪಿ. ಎಸ್. ರವೀಂದ್ರ , ವರುಣ್ ತೇಜ್ ವೈ.ಡಿ., ಹರ್ಷ ವಿ, ಅಮೋಘ ಪ್ರಭು, ಸುಜಿತ್ ಡಿ, ಗಗನ್ ಕೆ., ಶ್ರೀವಾಸ್ತ ಎನ್. ಎಸ್, ಶ್ರೇಯಾಂಕ್ ಶ್ರೀಧರ್ ಶೆಟ್, ಹರೀಶ್ ಆರ್. ನಂದನಿ, ಬಾಲಾಜಿ ನಾಯ್ಡು ವಿ., ಪ್ರಜ್ವಲ್ ಎಂ., ಗುರುಪ್ರಸಾದ್ ನಿರ್ವಾನಿ ಕಬಡಗಿ, ಶ್ಯಾಮ್ ವಿಠಲ್ ಅಮಾಠೆ, ನಿತಿನ್ ಎಸ್, ಮನೋಜ್ ಪಿ. ಎಂ., ಅರುಣ್ ಕೆ.ಎಂ, ಶರಣ್ ಎ. ಪಟೀಲ್, ರವಿಕಿರಣ್ ಬರಾಗಿ, ಅಕ್ಷಯ್ ಕುಮಾರ್ ನಲಟವಾಡ್, ಹರ್ಷ ವೈ . ಶಿಹೋರ, ಮಹೇಶ್ ಎಂ. ಕಂಪಲಿ, ಪ್ರಶಾಂತ್ ಎಸ್. ಶಟ್ಟರಗಿ, ಸಂತೋಷ್ ಎಸ್. ಮುಡೆನೂರ್, ಶಶಿಧರ್ ಗೌಡ ಕೆ. ಎಂ, ಶಿವಕುಮಾರ್ ಹಾಲನಗಲಿ, ಚಿನ್ಮಯ್ ಎಸ್. ನಡಿಗಿರ್, ಪ್ರಮತ್ ಪಿ. ಮೂಗಿ, ಸುಹಾನ್ ಜೆ. ಬಂಗೇರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ನಡೆಯುವ SSB (Service Selection Board) ಸುತ್ತಿಗೆ ಭಾಗವಹಿಸುವ ಅರ್ಹತೆ ಪಡೆದಿರುತ್ತಾರೆ. 900 ಅಂಕಗಳಿಗೆ ನಡೆಯುವ ಈ ಕಠಿಣ ಪರೀಕ್ಷೆಯಲ್ಲಿ 300 ಅಂಕಗಳಿಗೆ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗಿರುವ ದೊಡ್ಡ ಸವಾಲು. ನಮ್ಮ ಸಂಸ್ಥೆಯಲ್ಲಿ ಇದಕ್ಕಾಗಿ ನಡೆದ ನಿರಂತರ ಭೋಧನೆ, ಸೇನಾ ಅಧಿಕಾರಿಗಳ ವಿಶೇಷ ಉಪನ್ಯಾಸ ಹಾಗೂ ಮಾದರಿ ಪರೀಕ್ಷೆಗಳು ಈ ಯಶಸ್ಸಿಗೆ ಕಾರಣವಾಗಿದೆ.
ಸಂಸ್ಥೆಯ ಅಧ್ಯಕ್ಷರು ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲರಾದ ರಮೇಶ್ ಶೆಟ್ಟಿ ಹಾಗೂ ಸಂಯೋಜಕರುಗಳಾದ ಅಶ್ವಥ್ ಎಸ್.ಎಲ್ ಮತ್ತು ಗಣನಾಥ ಶೆಟ್ಟಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

 

Highslide for Wordpress Plugin