ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾದ ತರಬೇತಿ ನೀಡುವ ಉದ್ದೇಶದಿಂದ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಭಾಗಿತ್ವದಲ್ಲಿ `ಆಪ್ಲಿಕೇಶನ್ಸ್ಆಫ್ ಪೈಥಾನ್ ಪ್ರೋಗ್ರಾಮಿಂಗ್ಇನ್ಡೇಟಾಅನಾಲಿಟಿಕ್ಸ್ಆ್ಯಂಡ್ ಮಷಿನ್ ಲರ್ನಿಂಗ್ಸ್-ರಿಸರ್ಚ್ ಪರ್ಸ್ಪೆಕಟಿವ್’ ಎರಡು ದಿನದ ರಾಷ್ಟ್ರೀಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕಲಿಯುವಿಕೆಯು ನಿರಂತರವಾಗಿದೆ ವಿದ್ಯಾರ್ಥಿಗಳು ಸಿಗುವ ಸಮಯವನ್ನು ಹೊಸತನ್ನು ಕಲಿಯಲು ಮೀಸಲಿಡಬೇಕು. ಪೈಥಾನ್ ಪ್ರೋಗ್ರಾಮಿಂಗ್ ಕಾರ್ಯಗಾರವು ಉನ್ನತ ಶಿಕ್ಷಣಕ್ಕೆ ಮತ್ತು ಬದಲಾಗುತ್ತಿರುವ ತಂತ್ರಜ್ಞಾನಗಳಲ್ಲಿ ನಿರರ್ಗಳತೆ ಪಡೆಯಲು ಉತ್ತಮ ಅವಕಾಶ ಎಂದರು.
ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಇಂಜಿನಿಯರಿಂಗ್ಕಾಲೇಜಿನ ಡಾ.ಮೊಯಿದೀನ್ ಬಾಧುಶಾ ಪೈಥಾನ್ ಪ್ರೋಗ್ರಾಮಿಂಗ್ ಅನ್ವಯಗಳ ಮಾಹಿತಿ ನೀಡಿದರು.
ಕಂಪ್ಯೂಟರ್ ಸಯನ್ಸ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಕೊಟ್ಟಾರಿ, ಡೀನ್ ಡಾ.ಪ್ರವೀಣ್ ಜೆ. ಉಪಸ್ಥಿತರಿದ್ದರು.