ಸಾಮಾನ್ಯ ವರ್ಗಕ್ಕೂ ಎಟುಕುವಂತಹ “ವೃತ್ತಿಪರ ಕೋರ್ಸ್‍ಗಳು” ಆಳ್ವಾಸ್‍ನಲ್ಲಿ ಆರಂಭ

ಮೂಡಬಿದಿರೆ: ವೃತ್ತಿಪರ ಕೋರ್ಸುಗಳಾದ ಎ.ಸಿ.ಸಿ.ಎ. (ಯು.ಕೆ.) ಮತ್ತು ಸಿ.ಎಮ್.ಎ. (ಯು.ಎಸ್.) ಮುಖ್ಯಸ್ಥರು ಹಾಗೂ ಆಳ್ವಾಸ್ ಕಾಲೇಜಿನ ನಡುವೆ ಇತ್ತೀಚೆಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ” ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ಪ್ರತಿಭಾನ್ವಿತ ಬಡ ವಿದ್ಯಾರ್ಥಿ ಉಚಿತವಾಗಿ ಶಿಕ್ಷಣವನ್ನು ಪಡೆದು ತಮ್ಮ ಪದವಿಯನ್ನು ಗಳಿಸುತ್ತಿದ್ದಾರೆ. ಆ ಹಿನ್ನಲೆಯಲ್ಲಿ ಇಂತಹ ವೃತ್ತಿಪರ ಕೋರ್ಸ್‍ಗಳಾದ ಸಿ.ಎ., ಸಿ.ಎಸ್, ಜೊತೆಗೆ ಈ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಎ.ಸಿ.ಸಿ.ಎ. (ಯು.ಕೆ.) ಮತ್ತು ಸಿ.ಎಮ್.ಎ. (ಯು.ಎಸ್.) ಕೋರ್ಸುಗಳು ಇನ್ನೂ ಹೆಚ್ಚಿನ ಔದ್ಯೋಗಿಕ ಅವಕಾಶವನ್ನು ನೀಡುತ್ತವೆ ಎಂದರು.

ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ಪರವಾಗಿ ಡಾ ಎಂ ಮೋಹನ್ ಆಳ್ವ ಹಾಗೂ ಎ.ಸಿ.ಸಿ.ಎ. (ಯು.ಕೆ)ಯ ದಕ್ಷಿಣ ಭಾರತದ ವ್ಯವಸ್ಥಾಪಕ ಶ್ರೀ ರೋಹನ್ ರಾಜವಂಶಿ, ಸಿ.ಎಫ್.ಒ. ನೆಕ್ಸ್ಟ್ ನ ಸ್ಥಾಪಕ ಸಿ.ಎ. ಜಯ್ ಕುಮಾರ್ ಗೋಯಲ್, ಫ್ಯೂಚರ್ ವಿಷನ್ ನ ಡಾನ್ ಆಂಡ್ರಿವ್ ಡಿಸೋಜಾ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಅಶೋಕ್ ಕೆ. ಜಿ. ಇವರು ಉಪಸ್ಥಿತರಿದ್ದರು.

“ಒಂದು ಉತ್ತಮ ಗುರಿಯನ್ನಿಟ್ಟುಕೊಂಡಿರುವ ಬಂದಿರುವ ವಿದ್ಯಾರ್ಥಿ ಹಾಗೂ ಏನೂ ಉದ್ದೇಶವಿಲ್ಲದೆ ಬರುವ ವಿದ್ಯಾರ್ಥಿಗಿಂತ ಹೇಗೆ ಭಿನ್ನವಾಗಿರುತ್ತಾನೆ? ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಬ್ಬ ವಾಣಿಜ್ಯ ವಿಭಾಗದ ವಿದ್ಯಾರ್ಥಿಯ ಸವಾಲುಗಳೇನು? ವೃತ್ತಿಪರತೆ ಎನ್ನುವುದನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳುವುದು ಹೇಗೆ? ಎನ್ನುವ ಅಂಶಗಳನ್ನಿಟ್ಟುಕೊಂಡು ಹೊಸ ವಿಭಾಗದ ವಿದ್ಯಾರ್ಥಿಗಳನ್ನುದ್ದೇಶಿಸಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಮಾತನಾಡಿದರು.
ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿಭಾಗದ ಡೀನ್ ಪ್ರೋ ಸುರೇಖ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಅಶೋಕ್ ಕೆ. ಜಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಧುರಾ ಪ್ರಾರ್ಥಿಸಿ, ಪುಷ್ಪಲತಾ ಕೆ. ಸ್ವಾಗತಿಸಿ, ನಿಖಿತಾ ಎಂ. ದನ್ಯವಾದ ಸಮರ್ಪಿಸಿ, ಶ್ವೇತ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin