ಮೂಡುಬಿದಿರೆ: ಕಲಿಯುವಂತಹ ಶಿಕ್ಷಣ ಜೀವನಕ್ಕೆ ಪಾಠ ಆಗಬೇಕು. ಕಲಿತ ವಿಷಯಗಳು ಭವಿಷ್ಯವನ್ನು ನಿರ್ಧರಿಸಲು ಅವಕಾಶ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಸಮರ್ಪಕವಾದ ಗುರಿಯೊಂದಿಗೆ ಸಾಧಿಸಬೇಕು ಎಂದು ಮಾಜಿ ವಿಧಾನಸಭಾ ಸದಸ್ಯಕ್ಯಾ.ಗಣೇಶ್ಕಾರ್ಣಿಕ್ ಹೇಳಿದರು.
ಆಳ್ವಾಸ್ ಪದವಿ ಪೂರ್ವಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಶನಿವಾರ
ಪದವಿ ಪೂರ್ವ ವಿಭಾಗದ ವಾಣಿಜ್ಯ ಹಾಗೂ ಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಪರಂಪರೆ ಜೀವನ ಮೌಲ್ಯಗಳನ್ನು ಕೊಡುತ್ತದೆ. ಆದರೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕ ಪ್ರಜ್ಞೆಯ ಕೊರತೆಯಿದೆ. ಹೊರಜಗತ್ತಿನ ವೈಭವಗಳು ಅಂತರಂಗದ ಸೌಂದರ್ಯವನ್ನು ನೀಡದು. ಆದ್ದರಿಂದ ಮೌಲ್ಯಧಾರಿತ ಶಿಕ್ಷಣದೊಂದಿಗೆ ಇತರ ಚಟುವಕೆಗಳಲ್ಲಿ ತೊಡಗಿಕೊಂಡಾಗ ಮಾತ್ರಕೌಶಲ್ಯ ಭರಿತ ಮಾನವ ಸಂಪನ್ಮೂಲ ಸೃಷ್ಠಿಯಾಗುತ್ತದೆ ಎಂದು ಹೇಳಿದರು.
ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಮಾತನಾಡಿ, ಬದುಕಿನ ಪಾಠ ಕಲಿಯಬೇಕಾದರೆ ಹಲವರೊಂದಿಗೆ ಬೆರೆಯಬೇಕು. ತಾವು ಕಲಿಯುವುದರ ಜೊತೆಗೆ ಇತರರಿಂದ ಕಲಿತು ಅವರಿಗೂ ಹೊಸತನ ಕಲಿಸುವಂತಾಗಲು ಸಂಘಗಳ ಅಗತ್ಯವಿದೆ ಎಂದರು.
ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಮಾತನಾಡಿ, ಸ್ಪರ್ಧಾತ್ಮಕಯುಗದಲ್ಲಿ ಪ್ರತಿಯೊಬ್ಬರು ಆರಂಭದಿಂದಲೇ ಮುಂದಿನ ಶಿಕ್ಷಣ ಹಾಗೂ ವೃತ್ತಿಜೀವನದ ಕುರಿತು ಸ್ಪಷ್ಟತೆ ಹೊಂದಿರಬೇಕು. ವಾಣಿಜ್ಯ ಹಾಗೂ ಕಲಾ ಸಂಘದ ಮುಖೇನ ಪಾಠ್ಯೇತರ ಚಟುವಟಿಕೆಗಳನ್ನು ಕಲಿಯುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ವಾಣಿಜ್ಯ ಹಾಗೂ ಕಲಾ ಸಂಘದ ಸಂಯೋಜಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೌಜನ್ಯ ವಂದಿಸಿದರು. ವಿದ್ಯಾರ್ಥಿ ಓಮ್ಅಮೋಲ್ ವಡ್ಗಾವೆ ಕಾರ್ಯಕ್ರಮ ನಿರೂಪಿಸಿದರು.