ವಿದ್ಯಾಗಿರಿ: ಪ್ರತಿಯೊಂದು ಪತ್ರಿಕೆಗಳಲ್ಲಿಯೂ ಅಂಕಣ ಬರಹಗಳು ಪ್ರಮುಖವಾಗಿರುವುದರಿಂದ, ಅವುಗಳು ಮುಖ್ಯ ಪಾತ್ರವಹಿಸುತ್ತವೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಟಿ. ಎನ್. ಖಂಡಿಗೆ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ನಡೆದ “ಅಂಕಣ ಬರಹ ಮತ್ತು ಭಿತ್ತಿ ಪತ್ರಗಳ ಕಾರ್ಯಾಗಾರ”ದಲ್ಲಿ ಮಾತನಾಡಿದರು.
ಸಂವೇದನಾಶೀಲತೆ, ಸೃಜನಶೀಲತೆ, ಚಿಂತನೆ, ದೃಷ್ಟಿಕೋನ, ಭಾಷೆ ಹಾಗೂ ಕಲಾತ್ಮಕತೆಗಳನ್ನು ಅಂಕಣ ಬರಹಗಳು ಒಳಗೊಂಡಿರುತ್ತವೆ. ಆಕರ್ಷಕ ಶೀರ್ಷಿಕೆ ಮತ್ತು ಓದಿಸಿಕೊಂಡು ಹೋಗುವ ಅಂಕಣಗಳು ಜನರ ಮೆಚ್ಚುಗೆಗಳಿಸುತ್ತವೆ. ಅಂಕಣಗಳು ಸ್ವಾನುಭವವನ್ನು ಒಳಗೊಂಡಿದ್ದು, ಮಾನವೀಯತೆ ಹಾಗೂ ಸಮಕಾಲೀನ ಸ್ಪರ್ಶವನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಉಪನ್ಯಾಸಕರುಗಳಾದ ಡಾ.ಯೋಗೀಶ್ ಕೈರೋಡಿ ಮತ್ತು ಡಾ.ಕೃಷ್ಣರಾಜ ಕರಬ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೂಪಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.