ಮೂಡಬಿದಿರೆ: ಚೆನೈನಲ್ಲಿ ಜುಲೈ 20 ರಿಂದ 22ರವರಗೆ ನಡೆದಂತಹ ಹನ್ನೊಂದನೆಯ ಸೈಂಟ್ ಜೋಸೆಫ್ ಆಲ್ ಇಂಡಿಯ ಬಾಲ್ ಬ್ಯಾಟ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ನ ಪುರುಷರ ಬಾಲ್ ಬ್ಯಾಡ್ಮಿಂಟನ್ ತಂಡವು ಜಂಟಿ ವಿಜೇತರಾಗಿ ಚಾಂಪಿಯನ್ಶಿಪ್ ಅನ್ನು ಆರು ತಂಡಗಳೊಂದಿಗೆ ಹಂಚಿಕೊಂಡಿತು.
ಪಂದ್ಯಾವಳಿಯನ್ನು ಲೀಗ್ ಕಮ್ ಸೂಪರ್ ಲೀಗ್ ವಿಭಾಗದಲ್ಲಿ ಆಯೋಜಿಸಲಾಗಿದ್ದು, ಒಟ್ಟು ಇಪ್ಪತ್ತನಾಲ್ಕು ತಂಡಗಳು ಭಾಗವಹಿಸಿದ್ದವು. ಕೇರಳದ ಪಯೋನಿರ್ ಸ್ಪೋಟ್ರ್ಸಕ್ಲಬ್, ಟಿಂಡಿವನಮ್ನ ಟಿಬಿಸಿಸಿ, ಇರೋಡ್ನ ಎಸ್.ಬಿ.ಸಿ.ಸಿ, ಚೆಂಗಲ್ಪಟ್ಟುವಿನ ಜೆಜೆ ಬಾಯ್ಸ್, ಬೆಂಗಳೂರಿನ ಕೆನರಾ ಬ್ಯಾಂಕ್ ಹಾಗೂ ಚೆನ್ನೈನ ಸೈಂಟ್ ಜೋಸೆಫ್ಸ್ ಬಿ ತಂಡವನ್ನು ಆಳ್ವಾಸ್ ತಂಡವು ಲೀಗ್ ಕಮ್ ಸೂಪರ್ ಲೀಗ್ ಹಂತದಲ್ಲಿ ಸೋಲಿಸಿತ್ತು. ಕ್ರೀಡಾಕೂಟದ ನಡುವಿನಲ್ಲಿ ಎಡಬಿಡದೆ ಸುರಿದ ಮಳೆಯ ಕಾರಣದಿಂದ ಉಳಿದ ಪಂದ್ಯಗಳನ್ನು ರದ್ದುಗೊಳಿಸಲಾಯಿತು. ಕೊನೆಗೆ ಸಂಘಟಕರು ಅಗ್ರ ಆರು ಸ್ಥಾನದಲ್ಲಿದ್ದಂತಹ ತಂಡವನ್ನು ವಿಜೇತರನ್ನಾಗಿ ಘೋಷಿಸಿದರು. ನಡೆದಂತಹ ಆರು ಪಂದ್ಯಗಳಲ್ಲಿ ಆಳ್ವಾಸ್ ತಂಡವು ಹನ್ನೊಂದು ಅಂಕಗಳನ್ನು ಗಳಿಸಿ ಇತರ ಆರು ತಂಡಗಳೊಂದಿಗೆ ಒಟ್ಟು ಬಹುಮಾನಮೊತ್ತ ರೂ1.25 ಲಕ್ಷವನ್ನು ಸಮನಾಗಿ ಹಂಚಿಕೊಂಡಿತು.
ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಭಿನಂಧಿಸಿದ್ದಾರೆ.