ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ 12 ವಿದ್ಯಾರ್ಥಿಗಳು ಕಳೆದ ಜೂನ್ ನಲ್ಲಿ ಸಿ. ಎಸ್ ಫೌಂಡೇಶನ್ ಪರೀಕ್ಷೆ ಬರೆದಿದ್ದು, ಅವರಲ್ಲಿ 9 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಯಿಂದ ನಿರಂತರ ತರಬೇತಿ ಪಡೆದು ವೃತ್ತಿಪರ ಕೋರ್ಸ್ಗಳಲ್ಲೂ ಮೇಲುಗೈ ಸಾಧಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪದವಿ ಶಿಕ್ಷಣದ ಜೊತೆಗೆ ಸಿ. ಎಸ್ ಫೌಂಡೇಶನ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಈ ಕೋರ್ಸ್ನ ಮುಂದಿನ ಹಂತದ ಏಕ್ಸಿಕ್ಯೂಟಿವ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ನಮ್ಮ ಸಂಸ್ಥೆಯಲ್ಲಿ ಒದಗಿಸಿರುವ ವೃತ್ತಿಪರ ಕೋರ್ಸಗಳಾದ ಸಿಎ-ಸಿಪಿಟಿ, ಐಬಿಪಿಎಸ್, ಸಿಎಸ್ ಹಾಗೂ ಎಸಿಸಿಎ ಕೋರ್ಸಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪಾಲಕರ ಬೆಂಬಲವನ್ನು ಸದಾ ಸಹಕಾರಿ ಎಂದರು.