ವಿದ್ಯಾಗಿರಿ: ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಅನೇಕ ಬದಲಾವಣೆ ಆಗುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಪರ್ಧಾತ್ಮಕವಾಗಲಿದೆ. ಹಾಗಾಗಿ ಪ್ರತಿಯೊಬ್ಬರು ಎಲ್ಲಾ ವಿಷಯದಲ್ಲಿ ಪರಿಣಿತರಾಗಿರಬೇಕು ಎಂದು ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಕೆ.ಎಲ್.ಇ ಯ ಎಸ್.ನಿಜಲಿಂಗಪ್ಪ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಸಾತ್ವಿಕ್ ಹೇಳಿದರು.
ಆಳ್ವಾಸ್ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಸಂಶೋಧನೆಯ ಕುರಿತು ನಡೆಸಲಾದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಸಂಶೋಧನೆಗೆ ಬೇಕಾದ ಪ್ರಶ್ನಾವಳಿಯನ್ನು ಯಾವ ರೀತಿಯಾಗಿ ತಯಾರಿಸುವುದು ಮತ್ತು ಅದನ್ನು ಪರಿಹರಿಸುವ ಮಾರ್ಗಗಳನ್ನು ತಿಳಿದುಕೊಂಡಿರಬೇಕು. ಆಗ ಮಾತ್ರ ಸಂಶೋಧನೆ ಪರಿಪೂರ್ಣ ಆಗಲೂ ಸಾಧ್ಯ ಎಂದರು.
ವಿದೇಶದಲ್ಲಿ ಸಂಶೋಧನೆ ನಡೆಸಲು ಮೊದಲಿಗೆ ಆ ದೇಶದ ಭಾಷೆ ಹಾಗೂ ರೀತಿ ನೀತಿಗಳನ್ನು ತಿಳಿದುಕೊಳ್ಳಬೇಕು. ಯುರೋಪ್, ಫ್ರಾನ್ಸ್, ಇಟಲಿ ಮುಂತಾದ ದೇಶಗಳು ಡಾಕ್ಟರೇಟ್ ಡಿಗ್ರಿಯನ್ನು ಮಾಡಲು ಸೂಕ್ತವಾದ ದೇಶಗಳೆಂದು ಹೇಳಿ ಅಲ್ಲಿಗೆ ತೆರಳಲುವ ಮೊದಲು ಯಾವ ರೀತಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀನೀವಾಸ ಪೆಜತ್ತಾಯ, ಡಾ.ಶ್ರೀನೀವಾಸ್ ಹಾಗೂ ಇನ್ನಿತರ ಉಪನ್ಯಾಸಕರು ಉಪಸ್ಥಿರಿದ್ದರು.