‘ಡಿಜಿಟಲ್ ಮಾರ್ಕೆಟಿಂಗ್’ ಉಪನ್ಯಾಸ

ವಿದ್ಯಾಗಿರಿ:ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಜಾಲತಾಣಗಳನ್ನು ಅವಿರತವಾಗಿ ಬಳಸುತ್ತಿದ್ದಾನೆ. ಪ್ರತಿಯೊಂದು ಆ್ಯಪ್‍ಗಳಿಗೆ ಅದರದೇ ಆದ ಬಳಕೆದಾರರಿರುತ್ತಾರೆ. ಒಟ್ಟಾರೆಯಾಗಿ ವಿಶ್ವದಲ್ಲಿ 2.8 ಮಿಲಿಯನ್ ಆ್ಯಪ್‍ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ ಎಂದು ‘ಡಿಜಿಟಲ್ ತೆನಾಲಿ’ ವೆಬ್‍ಸೈಟ್‍ನ ಸ್ಥಾಪಕ ಮತ್ತು ಸಿ.ಇ.ಓ… ಪೂಜೇಶ್. ಜಿ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಡೆದ ‘ಡಿಜಿಟಲ್ ಮಾರ್ಕೆಟಿಂಗ್’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದು ಆ್ಯಪ್‍ಗಳನ್ನು ಬಳಸುವ ವಿಧಾನಗಳು ವಿಭಿನ್ನವಾಗಿರುತ್ತದೆ. ಅವುಗಳನ್ನು ಅರಿತು ಬಳಸುವುದು ಒಳಿತು ಇಲ್ಲದಿದ್ದಲಿ ತನ್ನನ್ನು ತಾನು ಸಮಸ್ಯೆಗಳಿಗೆ ತೆರೆದುಕೊಂಡಂತಾಗುತ್ತದೆ. ನಾವು ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿದರೆ ಅದರಿಂದ ಅನೇಕ ಉಪಯೋಗಗಳಿವೆ. ಒಂದು ಕಂಪೆನಿಯ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಬಹುಮುಖ್ಯವಾದುದು. ಏಕೆಂದರೆ ಸಮಾಜದಲ್ಲಿ ಕಂಪೆನಿಗಳನ್ನು ಗುರುತಿಸಲು ಅದರ ವಿಸ್ತಾರವನ್ನು ತಿಳಿಸಲು ತುಂಬಾ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ ಹಾಗೂ ಉಪನ್ಯಾಸಕ ಡಾ. ಶ್ರೀನಿವಾಸ್ ಹೊಡೆಯಲ ಉಪಸ್ಥಿತರಿದ್ದರು.

Highslide for Wordpress Plugin