ಮೂಡುಬಿದಿರೆ: ಮಂಗಳೂರು ವಿ.ವಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಸ್ಟ್ರೀಟ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನ್ ಪ್ರಶಸ್ತಿ ಪಡೆದಿದೆ.
ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ 33 ಪದವಿ ಕಾಲೇಜುಗಳ 150 ಪುರುಷ ಮತ್ತು 78 ಮಹಿಳಾ ಕುಸ್ತಿಪಟುಗಳು ಈ ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ವಿಭಾಗದಲ್ಲಿ 5 ಚಿನ್ನ, 2ಬೆಳ್ಳಿ, 1ಕಂಚು ಹಾಗೂ ಮಹಿಳೆಯರ ವಿಭಾಗದಲ್ಲಿ 9ಚಿನ್ನ, 1ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಹಾಗೂ ನಮ್ಮ ಕಾಲೇಜಿನ 14 ಕುಸ್ತಿ ಪಟುಗಳು ಅಖಿಲ ಭಾರತ ಅಂತರ್ ವಿ.ವಿ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಪುರುಷರ ಒಟ್ಟು 10 ವಿಭಾಗದಲ್ಲಿ ಕುಸ್ತಿ ಪಂದ್ಯಾಟವು ನಡೆದಿದೆ. 57 ಕೆ.ಜಿ ವಿಭಾಗದಲ್ಲಿ ನಾಗಾರಾಜ್ ದ್ವೀತಿಯ , 61 ಕೆ.ಜಿ ವಿಭಾಗದಲ್ಲಿ ಪ್ರಭಾಕರ್ ಪ್ರಥಮ , 70 ಕೆ.ಜಿ ವಿಭಾಗದಲ್ಲಿ ಸಚಿನ್ ದ್ವಿತೀಯ, 74 ಕೆ.ಜಿ ವಿಭಾಗದಲ್ಲಿ ವಿಠಲ್ ಬಸವರಾಜ್ ಪ್ರಥಮ , 79 ಕೆ.ಜಿ ಸೋಮಶೇಖರ್ ಮಲ್ಲಪ್ಪ ಪ್ರಥಮ ಸ್ಥಾನ, 86 ಕೆ.ಜಿ ವಿಭಾಗದಲ್ಲಿ ಚೆನ್ನಬಸವರಾಜ್ ಪ್ರಥಮ ಸ್ಥಾನ, 92 ಕೆ.ಜಿ ವಿಭಾಗದಲ್ಲಿ ಶಂಕರ್‍ಗನಜಿ ಪ್ರಥಮ ಸ್ಥಾನ, 97- 125 ವಿಭಾಗದಲ್ಲಿ ಥೋಮಸ್ ತೃತೀಯ ಸ್ಥಾನ ಪಡೆಯುವುದರ ಮೂಲಕ 12ನೇ ಬಾರಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಮಹಿಳೆಯರ 10 ವಿಭಾಗದಲ್ಲಿ ಕುಸ್ತಿ ಪಂದ್ಯಾಟವು ನಡೆದಿದೆ. 50 ಕೆ.ಜಿ ವಿಭಾಗದಲ್ಲಿ ವಂದನಾ ಪ್ರಥಮ ಸ್ಥಾನ, 53 ಕೆ.ಜಿ ವಿಭಾಗದಲ್ಲಿ ಆಕಾಂಕ್ಷ ಪ್ರಥಮ, 55 ಕೆ.ಜಿ ವಿಭಾಗದಲ್ಲಿ ಭಾರತಿ ಪ್ರಥಮ, 57 ಕೆ.ಜಿ ವಿಭಾಗದಲ್ಲಿ ಸಹನ ಪ್ರಥಮ, 59 ಕೆ.ಜಿ ವಿಭಾಗದಲ್ಲಿ ಡೇಲ್ಫಿವರ್ಗಿಸ್ ಪ್ರಥಮ, 62 ಕೆ.ಜಿ ವಿಭಾಗದಲ್ಲಿ ಅಸ್ನಾ ಸರೀನ್ ಪ್ರಥಮ, 65 ಕೆ.ಜಿ ವಿಭಾಗದಲ್ಲಿ ಪೂಜಿತಬಾಯಿ ದ್ವಿತೀಯ , 68 ಕೆ.ಜಿ ವಿಭಾಗದಲ್ಲಿ ತುಷಾರ ಪ್ರಥಮ ಸ್ಥಾನ, 72 ಕೆ.ಜಿ ವಿಭಾಗದಲ್ಲಿ ಹರ್ಷಿತಾ ಪ್ರಥಮ ಸ್ಥಾನ, 76 ಕೆ.ಜಿ ವಿಭಾಗದಲ್ಲಿ ಅಕ್ಷತಾ ಪ್ರಥಮ ಸ್ಥಾನವನ್ನು ಪಡೆದುಕೊಂಡು ಮಹಿಳೆಯರ ವಿಭಾಗದಲ್ಲೂ 12ನೇ ಬಾರಿ ಚಾಂಪಿಯನ್ ಪ್ರಶಸ್ತಿ ಪಡೆಯುವಂತಾಯಿತು.
ಆಳ್ವಾಸ್ ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.