ಜಿಲ್ಲಾಮಟ್ಟದ ಯೋಗಾಸನ ಸ್ವರ್ಧೆ

* ಮೂಡುಬಿದಿರೆ ತಾಲೂಕಿಗೆ ಸಮಗ್ರ ಪ್ರಶಸ್ತಿ * ಆಳ್ವಾಸ್ ಯೋಗಪಟುಗಳ ಸಾಧನೆ

ಮೂಡುಬಿದಿರೆ: ಬೆಳುವಾಯಿ ಮೈನ್ ಕೆಸರುಗದ್ದೆ ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಯೋಗಾಸನ ಸ್ವರ್ಧೆಯಲ್ಲಿ 17 ವರ್ಷದ ಬಾಲಕ, ಬಾಲಕಿಯರ ವಯೋಮಿತಿಯಲ್ಲಿ ಮೂಡಬಿದಿರೆ ತಾಲೂಕು ಸಮಗ್ರ ತಂಡ ಪ್ರಶ್ತಸಿಯನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಆಳ್ವಾಸ್ ಸಾಧನೆ
ಹಾಸನದಲ್ಲಿ ನಡೆಯುವ ವಿಭಾಗಮಟ್ಟದ ಯೋಗಾಸನ ಸ್ವರ್ಧೆಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ 7 ತಾಲೂಕಿನ, ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ  4ಚಿನ್ನ, 5ಬೆಳ್ಳಿ, 2ಕಂಚು ಹಾಗೂ ನವೀನ್ ಯೋಗಕುಮಾರ ಹಾಗೂ ಚೈತಾ ಯೋಗ ಕುಮಾರಿ  ಪ್ರಶ್ತಸಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಪ್ರಾಥಮಿಕ 14ರ ವಯೋಮಿತಿಯ ಬಾಲಕರ  ನವೀನ್ ಪ್ರಥಮ, ರಾಘವೇಂದ್ರ ತೃತೀಯ, ಕಲಾತ್ಮಕ ಸ್ವರ್ಧೆಯಲ್ಲಿ ಸಂಗಮೇಶ್ ಪ್ರಥಮ, ಬಾಲಕಿಯರಲ್ಲಿ ಪ್ರೇಮ ದ್ವೀತಿಯ, ರಿದಮಿಕ್ ಸ್ವರ್ಧೆಯಲ್ಲಿ ವಸುಂಧಾರ ದ್ವೀತಿಯ, ಬಾಲಕರ ವಿಭಾಗಕ್ಕೆ ತಂಡ ಪ್ರಶ್ತಸಿ ದೊರತಿದೆ.
ಪ್ರೌಢಶಾಲಾ 17ರ ವಯೋಮಿತಿಯ ಬಾಲಕರ ಬಸವರಾಜ್ ಪ್ರಥಮ , ಮಾಧನ್ ಕುಮಾರ್ ತೃತೀಯ ಕಲಾತ್ಮಕ ವಿಭಾಗದಲ್ಲಿ ಸಂಜು ಪ್ರಥಮ, ಬಾಲಕಿಯರಲ್ಲಿ ಚೈತ್ರಾ ದ್ವೀತಿಯ, ವಿಮಲಾ ತೃತೀಯ, ಮಾಯವ್ವ ಚತುರ್ಥ, ಕಲಾತ್ಮಕ ವಿಭಾಗದಲ್ಲಿ ವಿಜಯಲಕ್ಷ್ಮಿ ದ್ವೀತಿಯ ಮತ್ತು ರಿದಮಿಕ್ ವಿಭಾಗದಲ್ಲಿ ಹರ್ಷಿಣೀ ದ್ವೀತಿಯ ಹಾಗೂ ಬಾಲಕ, ಬಾಲಕಿಯರ ವಿಭಾಗಗಳಲ್ಲಿ ಸಮಗ್ರ ತಂಡ ಪ್ರಶಸ್ತಿ ಗೆದ್ದಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ, ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೆರಿ (ಆಡಳಿತ) ಮಂಗಳೂರು ದ.ಕ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೆರಿ ಮೂಡಬಿದಿರೆ ಜಂಟಿ ಆಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಆಳ್ವಾಸ್ ಯೋಗಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Highslide for Wordpress Plugin