‘ರಾಷ್ಟ್ರೀಯ ಕ್ರೀಡಾ ದಿನ’ದ ಆಚರಣೆ

ವಿದ್ಯಾಗಿರಿ: ಕ್ರೀಡೆಯಲ್ಲಿ ಶ್ರದ್ಧೆಯಿಂದ ಮುಂದುವರೆದಾಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ದರ್ಜೆಗೆ ಏರಲು ಸಾಧ್ಯ. ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಕೆ.ವಿ ಶೆಣೈ ತಿಳಿಸಿದರು.
ಆಳ್ವಾಸ್ ಕಾಲೇಜಿನ ಪುಟ್ಟಣ್ಣ ಕಣಗಾಲ್ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಕ್ರೀಡಾ ದಿನ’ದ ವಿಶÉೀಷವಾಗಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ದುಡಿಮೆ, ವೇತನ ಇವೆಲ್ಲದರ ಜೊತೆಗೆ ಪ್ರಮಾಣ ಪತ್ರವು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಪುಸ್ತಕ ಜ್ಷಾನವನ್ನು ಪಡೆಯುವುದರ ಜೊತೆಗೆ, ಸಾಮಾಜಿಕ ಜ್ಞಾನವನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಸಾಮಾಜಿಕ ಜ್ಞಾನವು ಎಲ್ಲಾ ಸಂದರ್ಭದಲ್ಲೂ ಉಪಯುಕ್ತವಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಬೇಕು. ಅಷ್ಟೇ ಅಲ್ಲದೆ, ಗ್ರಂಥಾಲಯಕ್ಕೆ ಹೋಗಿ ಅಲ್ಲಿರುವ ಪುಸ್ತಕಗಳನ್ನು ಓದಬೇಕು ಆಗ ಮಾತ್ರ ನಮ್ಮಲ್ಲಿ ಜ್ಞಾನ ವೃದ್ಧಿ ಸಾಧ್ಯ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೋ ಬಾಲಕೃಷ್ಣ ಶೆಟ್ಟಿ ಮಾತನಾಡಿ ‘ನಾವು ಏನು ಮಾಡುತ್ತೇವೆ ಎಂದು ದೃಢವಾಗಿ ನಿರ್ಧರಿಸಿದರೆ ಸಾಕು ಆಗ ನಾವು ಅದನ್ನು ಸಾಧಿಸಿಯೇ ಸಾಧಿಸುತ್ತೇವೆ. ಒಳ್ಳೆಯ ರೀತಿಯಲ್ಲಿ ಯೋಚಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಜಯಪ್ರಕಾಶ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಆನಂದ ಮೇಲು ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin