ಪ್ರೊ. ಹರೀಶ್ ಟಿ. ಜಿ. ಬರೆದ ಹುಲಿಕಡ್ಜಿಳ ಕಥಾ ಸಂಕಲನ ಲೋಕಾರ್ಪಣೆ

ಮೂಡುಬಿದಿರೆ: “ಕಥೆ ಓದುಗರನ್ನು ಒಳಗೊಳ್ಳಬೇಕಾದರೆ, ಬರಹಗಾರ ಧ್ಯಾನ ಮಾಡಬೇಕಾಗುತ್ತದೆ” ಎಂದು ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಗಣಪತಿ ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಪ್ರೊ. ಹರೀಶ ಟಿ. ಜಿ. ಯವರ ‘ಹುಲಿಕಡ್ಜಿಳ’ ಕಥಾ ಸಂಕಲನವನ್ನು ಲೋಕಾರ್ಪಣೆಮಾಡಿ ಮಾತನಾಡಿದ ಅವರು, “ತೀರ್ಥಹಳ್ಳಿ ಸಾಹಿತ್ಯಕ್ಕೆ ಹೆಸರುವಾಸಿಯಾದ ತಾಣ. ಒಂದು ಬಗೆಗಿನ ಶಕ್ತಿ ಅಲ್ಲಿ ಇದೆ. ತೀರ್ಥಹಳ್ಳಿಯಲ್ಲಿ ಹುಟ್ಟಿಬೆಳೆದ ಹರೀಶ್ ಅಲ್ಲಿಯ ಸಮಾಜವನ್ನು ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ತೇಜಸ್ವಿಯವರ ಬರವಣಿಗೆಯ ಛಾಪು ಇವರಲ್ಲಿದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯ ಸಂಬಂಧಗಳನ್ನು ನಶಿಸಿಹಾಕುವಂತಹ ಜ್ವಲಂತ ಸ್ಥಿತಿಯನ್ನು ಹುಲಿಕಡ್ಜಿಳ ನಮ್ಮ ಮುಂದಿಡುತ್ತವೆ” ಎಂದರು.

ಪ್ರಾಂಶುಪಾಲ ಡಾ. ಕುರಿಯನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಉಪ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ಭಾಷಾ ಡೀನ್ ಡಾ.ರಾಜೀವ್.ಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಪ್ರೊ. ಹರೀಶ್ ಟಿ. ಜಿ. ಸ್ವಾಗತಿಸಿ, ಕನ್ನಡ ಭಾಷಾ ಮತ್ತು ಸಂಸ್ಕøತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ ಕೃಷ್ಣರಾಜ ಕರಬ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ನಿರೂಪಿಸಿದರು.

Highslide for Wordpress Plugin