ಆಳ್ವಾಸ್‍ನಲ್ಲಿ ಬೂಟ್ ಕ್ಯಾಂಪ್-ಉಪನ್ಯಾಸ ಸರಣಿ

ಮೂಡುಬಿದಿರೆ: ಅಕ್ಕಿ ಹಾಗೂ ಗೋಧಿ ದೇಶದ ಪ್ರಮುಖ ಬೆಳೆಯಾಗಿದ್ದು, ಬೇಳೆ ಕಾಳುಗಳು ಉತ್ಪಾದನೆ ಅತ್ಯಧಿಕ ಪ್ರಮಾಣದಲ್ಲಿದೆ.  ನಮ್ಮ ದೇಶದಲ್ಲಿ ಖನಿಜ ಹಾಗೂ ಪೋಷಕಾಂಶಗಳ ಕೊರತೆಯಿಂದಾಗಿ ಅತ್ಯಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಅಂಶಗಳು ತರಕಾರಿಗಳು ಹಾಗೂ ಹಣ್ಣುಗಳಲ್ಲಿ ಒಳಗೊಂಡಿರುವುದರಿಂದ ದಿನಕ್ಕೆ 300ಗ್ರಾಂ ತರಕಾರಿ ಹಾಗೂ 150 ಗ್ರಾಂ ಹಣ್ಣನ್ನು ಸೇವಿಸುವುದು ಮಾನವನ ದೈನಂದಿನ ಚಟುವಟಿಕೆಗೆ ಉಪಯುಕ್ತ.  ಆಗಲೇ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ `ಬೂಟ್ ಕ್ಯಾಂಪ್’ನ  ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Highslide for Wordpress Plugin