ಸ್ಟೂಡೆಂಟ್ ವೆಲ್ಫೆರ್ ಕೌನ್ಸಿಲ್ ‘’ತನುಮನ’’ದ ಉದ್ಘಾಟನೆ

ವಿದ್ಯಾಗಿರಿ: ಭಾವನೆ ಎಂಬುವುದು ವಿವಿಧ ಬಗೆಯ ರುಚಿಯಿದ್ದಂತೆ. ಅಡುಗೆಯೊಂದರಲ್ಲಿ ಉಪ್ಪು, ಹುಳಿ, ಖಾರಗಳು ಎಷ್ಟು ಪ್ರಮುಖವೋ ಹಾಗೆಯೇ ಜೀವನದಲ್ಲಿ ಸಂತೋಷ, ಸಿಟ್ಟು, ಬೇಜಾರುಗಳಂತಹ ಭಾವನೆಗಳು ಮುಖ್ಯವಾಗುತ್ತದೆ ಎಂದು ಮನಶಾಸ್ತ್ರಜ್ಞೆ ಲೆವಿನಾ ನರೋನಾ ತಿಳಿಸಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯಾವುದೇ ಒಂದು ಭಾವನೆಯನ್ನು ತಮ್ಮಲ್ಲಿಯೇ ಅನುಭವಿಸುವುದಕ್ಕಿಂತಲೂ ಇನ್ನೊಬ್ಬರಲ್ಲಿ ಹಂಚಿಕೊಳ್ಳುವುದು ಸೂಕ್ತ. ಮನುಷ್ಯ ಸಿಟ್ಟಾದಾಗ ತನ್ನ ಕೋಪವನ್ನು ತೋರಿಸಿಕೊಳ್ಳತೊಡಗುತ್ತಾನೆ. ವಸ್ತುಗಳನ್ನು ಎಸೆಯುವುದು, ಕಾರಣವಾದ ವ್ಯಕ್ತಿಗೆ ದೈಹಿಕವಾಗಿ ನೋವು ನೀಡುವುದು ಇಂತಹ ಮಾರ್ಗವನ್ನು ಬಳಸಿ ತನ್ನ ಕೋಪವನ್ನು ಹೊರಹಾಕಲು ತೊಡಗುತ್ತಾನೆ. ಕೋಪಗೊಳ್ಳುವುದು ತಪ್ಪಲ್ಲ. ಆದರೆ ಅದನ್ನು ನಿಗ್ರಹಿಸುವುದು ಮುಖ್ಯ ಎಂದರು.
ಕೆಲವೊಮ್ಮೆ ಮನುಷ್ಯನು ದುಃಖಿತನಾದಾಗ ಇತರರು ಅವನನ್ನು ಸಮಾಧಾನ ಪಡಿಸುವಿದಕ್ಕಿಂತ ಆತನಿಗೆ ತನ್ನ ದುಃಖವನ್ನು ಹೊರಹಾಕಲು ಬಿಟ್ಟುಬಿಡಬೇಕು. ಹಾಗೆಯೇ ಮನುಷ್ಯನು ಸಂತೋಷನಾಗಿರಲು ಪ್ರಯತ್ನಿಸುವಾಗ ತನ್ನ ಜೀವನದಲ್ಲಿ ನಡೆದ ಸಿಹಿ ಕ್ಷಣಗಳನ್ನು ಮೆಲುಕು ಹಾಕುವುದು, ಕೆಟ್ಟ ನೆನಪನ್ನು ಮರೆಯಲು ಪ್ರಯತ್ನಿಸುವುದು, ಭವಿಷ್ಯದ ಬಗ್ಗೆ ಹೊಸ ಹೊಸ ಕನಸುಗಳನ್ನು ಕಟ್ಟುವುದು, ಇವುಗಳಿಂದ ಆತ ತನ್ನ ಭಾವನೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂದರು.
ವಿಭಾಗದ ಸ್ಟೂಡೆಂಟ್ ವೆಲ್ಫೆರ್ ಕೌನ್ಸಿಲ್ ‘’ತನುಮನ’’ದ ಹೊಸ ಪ್ರತಿನಿಧಿಗಳು ಕಾರ್ಯಕ್ರಮದ ಆರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ಆ್ಯಂಡ್ರಿ ಪಿಂಟೋ, ಉಪನ್ಯಾಸಕಿ ರೋಜಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಬಾನಾ ನಿಸ್ನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಾರಾ ವಿಜಯ್ ಸ್ವಾಗತಿಸಿ, ಅಲೀನಾ ವಂದಿಸಿದರು.

Highslide for Wordpress Plugin