ಮಿಜಾರು: ಪ್ರತಿಯೊಬ್ಬರು ತಮ್ಮ ಜೀವನವನ್ನು ತಾವೇ ಕಟ್ಟಿಕೊಂಡಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್ ಹೇಳಿದರು.
ಆಳ್ವಾಸ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗವು ಆಯೋಜಿಸಿದ್ದ “ಟೆಕ್‍ಕ್ರಂಚ್” 2019 ಇಂಟರ್ ಕಾಲೇಜು ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕೆ ಜೀವನದುದ್ದಕ್ಕೂ ಮುಂದುವರಿಯುವ ಪ್ರಕ್ರಿಯೆ. ಆ ಪ್ರಕಿಯೆಯಲ್ಲಿ ಸಮರ್ಪಕವಾಗಿ ತೊಡಗಿಕೊಂಡು, ಉತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಲಕ್ಷಣ. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತೀ ದಿನ ಯಾವ ರೀತಿಯಾಗಿ ತನ್ನನ್ನು ತಾನು ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾನೆ ಎನ್ನುವುದರ ಮೂಲಕ ಆತನ ಭವಿಷ್ಯವು ರೂಪುಗೊಳುತ್ತದೆ. ಅಲ್ಲದೇ ನಮ್ಮ ಜೀವನವನ್ನು ನಾವು ಸುರಕ್ಷಿತವಾಗಿಸಿದಾಗ ಮಾತ್ರ ಸುಂದರ ಮನಸ್ಸು ಮತ್ತು ಬಲವಾದ ಆಲೋಚನೆ ಮೂಡಲು ಸಾದ್ಯ ಎಂದರು.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೋ. ಜಯಂತ್ ಕುಮಾರ್ ರಾಘವ್ ಹಿಂದಿನ ವರ್ಷದ ಕಾರ್ಯಕ್ರಮದ ವರದಿ ನೀಡಿ ವಿದ್ಯಾರ್ಥಿಗಳು ಎಲ್ಲಾ ತಂತ್ರಜ್ಞಾನಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಡೀನ್ ಡಾ. ಪ್ರವೀಣ್ ಜೆ ಹಾಗೂ ವಿದ್ಯಾರ್ಥಿ ಸಂಯೋಜಕ ರಾಕೇಶ್ ಎಮ್ ಆರ್ ಮತ್ತು ಇತರ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.