ಮೂಡುಬಿದಿರೆ: ಪ್ರತಿಯೊಬ್ಬರು ತಮ್ಮ ತಾಯಿ ಮತ್ತು ತಾಯಿ ಭಾಷೆಯನ್ನು ಪ್ರೀತಿಸಲು ಕಲಿಯಬೇಕು ಎಂದು ಆಳ್ವಾಸ್ ಪದವಿ ಕಾಲೇಜಿನ ಆಡಳಿತ ಅಧಿಕಾರಿ ಪ್ರೋ ಬಾಲಕೃಷ್ಣ ಶೆಟ್ಟಿ ಹೇಳಿದರು.
ಆಳ್ವಾಸ್ ಕಾಲೇಜಿನ ಬಿಎಸ್ಸಿ ಮತ್ತು ಎಂಎಸ್ಸಿ ಕೊನೆಯ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ “ಅಲೋಹ 2019” ಸಮಾರಂಭದಲ್ಲಿ ಮಾತನಾಡಿದರು.
ಪಾಶ್ಚಾತ್ಯ ಭಾಷೆ ಕೇವಲ ಅಧ್ಯಯನಕ್ಕೆ ಸೀಮಿತವಾಗಿದ್ದು ಅದರಲ್ಲಿ ನಮ್ಮತನವನ್ನು ಕಾಣಲು ಸಾಧ್ಯವಿಲ್ಲ. ಅಮ್ಮ ಎನ್ನುವ ಪದ ಮಾತೃ ಭಾಷೆಯಲ್ಲಿ ಉಚ್ಚರಿಸಿದಾಗ ಮಾತ್ರ ಆ ಪದಕ್ಕೆ ಅರ್ಥ ಸಿಗುವುದು ಆದೇ ಆಂಗ್ಲ ಭಾಷೆಯಲ್ಲಿ ಮಮ್ಮಿ ಎಂಬ ಶಬ್ದ ತುಟಿಗಳಿಂದ ಮಾತ್ರ ಬರುವ ಶಬ್ದವಾಗಿದೆ. ಆದ್ದರಿಂದ “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಶ್ಲೋಕದ ಮೂಲಕ ವಿದ್ಯಾರ್ಥಿಗಳಿಗೆ ಮಾತೃ ಹಾಗೂ ಮಾತೃಭಾಷೆಯ ಮಹತ್ವವನ್ನು ತಿಳಿಸಿ, ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ ಆದ್ದರಿಂದ ಅಧ್ಯಯನವನ್ನು ಮುಂದುವರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಬಿಎ ಯತಿಕುಮಾರ್ ಸ್ವಾಮಿ ಗೌಡ ಕೊನೆಯ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಓದುವ ಹವ್ಯಾಸವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬೇಡಿ ಎಂದು ಹೇಳಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಸಿಸುವುದರ ಮೂಲಕ ಉತ್ತಮ ವಿಧೇಯಕಿಯಾಗಿ ಅಮಿತಾ ಟಿಎಸ್ಸ್, ಉತ್ತಮ ಸ್ವಯಂ ಸೇವಕಯಾಗಿ ಶಿನ್ಸಿ ಥಾಮಸ್, ಉತ್ತಮ ಆಲ್‍ರೌಂಡರ್ ಆಗಿ ದುನಿಯ ವಿನೊದ್ ಜಾನ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಷ್ಟೇ ಅಲ್ಲದೆ ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಾಪಕಿ ಜೂಲಿ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಫೆಭಾ ಕಾರ್ಯಕ್ರಮ ನಿರೂಪಿಸಿ ಹರ್ಷಿತಾ ವಂದಿಸಿದರು.