‘ಸಸ್ಯ ಸೌರಭ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಮೂಡುಬಿದಿರೆ: ಉಜಿರೆಯ ಎಸ್‍ಡಿಎಂ ಕಾಲೇಜಿನ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಜೈವಿಕ ಪರ್ವ ‘ಸಸ್ಯ ಸೌರಭ’ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಛಾಯಾಗ್ರಾಹಣದಲ್ಲಿ ಅಂಜನ್, ರಸಪ್ರಶ್ನೆಯಲ್ಲಿ ಅನ್ನಪೂರ್ಣ ಎಲ್ ಹಾಗೂ ಚೈತ್ರ ಪ್ರಥಮ ಸ್ಥಾನ, ಶ್ರೀಜಿತ್ ಜಸ್ಟ್ ಎ ಮಿನಿಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಜ್ಞಾನ ವಿಭಾಗದ ಡೀನ್ ರಮ್ಯ ರೈ ಪಿ ಡಿ. ಶ್ಲಾಘಿಸಿದ್ದಾರೆ.

Highslide for Wordpress Plugin
Loading...