ವಿದ್ಯಾಗಿರಿ: ಹಿಂದಿ ಸರಳ, ಸಹಜ, ಸುಂದರ ಭಾಷೆಯಾಗಿದ್ದು, ಈ ಭಾಷೆಯು ಹೆಚ್ಚಿನ ಪ್ರಾದೇಶಿಕ ಭಾಷೆಗಳ ಜೊತೆಗೆ ಬಳಸಲ್ಪಡುವುದರಿಂದ ಸುಲಭವಾಗಿ ಕಲಿಯಲು ಸಾಧ್ಯ ಎಂದು ಎಮ್.ಆರ್.ಪಿ.ಎಲ್ ನ ಹಿರಿಯ ಮ್ಯಾನೇಜರ್ ಡಾ. ಬಿ.ಆರ್ ಪಾಲ್ ತಿಳಿಸಿದರು.
ಆಳ್ವಾಸ್ ಪದವಿ ಕಾಲೇಜಿನ ಹಿಂದಿ ವಿಭಾಗದಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹಿಂದಿ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸ್ವಾತಂತ್ರ್ಯ ಹೊಂದಿದಾಗ ಕೇವಲ ಶೇಕಡಾ 30ರಷ್ಟು ಮಾತ್ರ ಹಿಂದಿ ಭಾಷೆಯನ್ನು ತಿಳಿದಿದ್ದು ಈಗ ಶೇಕಡಾ 75ರಷ್ಟು ಜನ ಈ ಭಾಷೆಯನ್ನು ಮಾತನಾಡುವಷ್ಟು ಬೆಳವಣೆಗೆ ಹೊಂದಿದೆ. 1949 ಸೆಪ್ಟೆಂಬರ್ 14ರಂದು ಸಂವಿಧಾನ ಸಭಾದ ನಿರ್ಣಯದಂತೆ ಹಿಂದಿ ಭಾಷೆಯನ್ನು ದೇಶ ಭಾಷೆಯಾಗಿ ಜಾರಿಗೆ ತರಲಾಯಿತು.
ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಎಲ್ಲಾ ಭಾಷೆಯನ್ನು ಪ್ರೀತಿಸಿದಾಗ ಮಾತ್ರ ಸಂವಹನವನ್ನು ಬೆಳೆಸಿಕೊಳ್ಳುತ್ತೆವೆ. ‘ಉಮಂಗ್’ ನಂತಹ ಹಿಂದಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಳ್ವಾಸ್‍ನಲ್ಲಿ ಹಿಂದಿ ಭಾಷೆಯ ಪ್ರಭಾವವನ್ನು ಹೆಚ್ಚಿಸಿವೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ರಾಜೀವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕಣ್ಮಣಿ ನಿರೂಪಿಸಿದರು. ಅಂಕಿತಾ. ಆರ್. ಶೆಟ್ಟಿ ವಂದಿಸಿದರು.