ವಿದ್ಯಾಗಿರಿ: ಕವಿತೆಗೆ ವಿವಿಧ ರೀತಿಯ ಭಾವ ಹಾಗೂ ಭಾಷೆಯನ್ನು ಸೃಷ್ಟಿಸಬಲ್ಲ ಸಾಮಾಥ್ರ್ಯವಿದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ರಾಮ ಪ್ರಸಾದ್ ಕಾಂಚೋಡು ಹೇಳಿದರು. ಅವರು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 2019-20ನೇ ಸಾಲಿನ ಸಾಹಿತ್ಯ ಸಂಘದ ಬಹುಭಾಷಾ ಕವಿಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಕವಿತೆ ಹುಟ್ಟಬೇಕಾದರೆ ಧ್ಯಾನ ಮಾಡಬೇಕಾಗುತ್ತದೆ. ಅನುಭವವನ್ನು ಅನುಭಾವವಾಗಿಸುವುದೆ ಕವಿತೆ. ಕವಿಯು ಅಚೇತನವಾದುದನ್ನು ಸಚೇತನವಾಗಿಸಬಲ್ಲ ಅದಮ್ಯ ಶಕ್ತಿಯನ್ನು ಹೊಂದಿದ್ದಾನೆ. ವಿದ್ಯಾರ್ಥಿಗಳು ಮೊದಲಿಗೆ ಸದಭಿರುಚಿಯ ಗದ್ಯವನ್ನು ಬರೆಯುವ ಸಾಮಾಥ್ರ್ಯವನ್ನು ಬೆಳೆಸಿಕೊಂಡರೆ ನಂತರದ ದಿನಗಳಲ್ಲಿ ಉತ್ತಮ ಕವಿತೆಗಳಿಗೆ ಜೀವ ತುಂಬಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪತಂಜಲಿ ಹಾರೇಬೈಲು, ಮಾನ್ಸಿ ಕಾವೇರಮ್ಮ, ರೇವತಿ ಸಂಗಮ್, ರೋಹನ್ ನವಲೆ, ದಿಶಾ ರವಿ, ಓಂ ಅಮೋಲ್, ಅಮೃತ ವೈ, ಹರ್ಷಾ ಜೆ ಆಚಾರ್ಯ, ಸಾತ್ವಿಕ್ ರೈ, ಅಂಕಿತಾ ಪೈ, ವಿದ್ಯಾರ್ಥಿಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿನಿ ಮಾನ್ಸಿ ಕಾವೇರಮ್ಮ ನಿರೂಪಿಸಿದರು.