ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ವಿಷಯ ಎಷ್ಟು ಮುಖ್ಯವೋ ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಜ್ಞಾನ ಅಷ್ಟೇ ಮುಖ್ಯ. ಒಂದು ಕಲೆಯನ್ನು ಅವಲೋಕಿಸಿದಾಗ ಅದರ ಮಹತ್ವ ತಿಳಿಯಲು ಸಾಧ್ಯ. ಕಲೆಯಿಂದ ಮನುಷ್ಯನ ಸರ್ವಾಂಗೀಣ ಬೆಳವಣಿಗೆ ಸಾದ್ಯ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆದ `ಕಲಾರ್ಪಣಾ 2019′ ಸಾಂಸ್ಕೃತಿಕ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಲಾರತ್ನ ಶಂಕರನಾರಾಯಣ ಅಡಿಗ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿದ್ಯೆ ಮತ್ತು ಕಲೆ ಇವೆರೆಡನ್ನು ನಾವೂ ಜೀವಂತಗೋಳಿಸಬೇಕಾದರೆ ನಮ್ಮ ಅವಿರತ ಪ್ರಯತ್ನ ಅಗತ್ಯ ಎಂದರು.
ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡೀಸ್, ಕಲರ್ಪಣ ಸಾಂಸ್ಕ್ರತಿಕ ಸಂಘದ ಸಂಯೋಜಕಿ ಸಹಾಯಕ ಪ್ರಾಧ್ಯಪಕೆ ಸ್ವಾತಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಗೀತಾ ಎನ್.ಎ ನಿರೂಪಿಸಿದರು
ಎರಡು ದಿನಗಳು ನಡೆದ ಕಾರ್ಯಾಗಾರದಲ್ಲಿ ಕಲಾರತ್ನ ಶಂಕರನಾರಾಯಣ್ ಅಡಿಗ `ಹರಿ-ಕಥಾ ರಂಗನೋಟ’ , ವಿದೂಷಿ ವಿಜಯಲಕ್ಷೀ ಕುಂಬ್ಳೆ `ನೃತ್ಯಾಂಜಲಿ’ ಮತ್ತು `ಯೋಗಾಮೃತಮ್’ , ಸತೀಶ್ ಮಡಿವಾಳ ಕಾರ್ಕಳ `ಯಕ್ಷ ಸುಧೆ’ ಮತ್ತು ನಾದಬ್ರಹ್ಮ ವಿದ್ವಾನ್ ವಾಸುದೇವ ಭಟ್ ಉಡುಪಿ `ನಾದವೈಭವಮ್’ ವಿಷಯಗಳನ್ನು ಪ್ರಸ್ತುತಪಡಿಸಿದರು.