ಮಂಗಳೂರು ವಿವಿ ಮಟ್ಟದ 39ನೇ ಅಂತರ್ ಕಾಲೇಜು ಕ್ರೀಡಾಕೂಟ

ಮೂಡಬಿದ್ರೆ: ಕ್ರೀಡೆಯೂ ದೈಹಿಕ, ಸಾಮಾಜಿಕ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವುದರ ಜೊತೆಗೆ ವೈಕ್ತಿತ್ತ್ವ ವಿಕಾಸನಗೊಳಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಹಜ. ಅವುಗಳು ಜೀವನ ಪಾಠಕ್ಕೆ ಪೂರಕವಾಗಿರುತ್ತದೆ. ಜತೆಗೆ ಪ್ರೋತ್ಸಾಹಿಸುವ ಗುಣವನ್ನು ಕಲಿಯುತ್ತೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್ ಖಾನ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಇಂಟರ್ ಕಾಲೇಜಿಯೇಟ್ ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನ್ನು ಉದ್ಘಾಟಿಸಿ ಮಾತನಾಡಿದರು.

ಆಳ್ವಾಸ್‍ನ ರಾಷ್ಟ್ರೀಯ ಸಾಧಕ ವಿದ್ಯಾರ್ಥಿಗಳಾದ ಚೈತ್ರಾ ದೇವಾಡಿಗ, ಅಮನ್ ಅರುಣ್, ಮನು ಡಿ.ಪಿ, ಬಸವರಾಜ್ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚ್ಯಾಂಪಿಯನ್‍ಶಿಪ್‍ಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ಅಧ್ಯಾಪಕರ ಸಂಘದ ಅಧ್ಯಕ್ಷ ಜೇಮ್ಸ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ. ಕೆ ಉಪಸ್ಥಿತರಿದ್ದರು.

ಈ ಕ್ರೀಡಾಕೂಟಕ್ಕೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಟ್ಟ 68 ಕಾಲೇಜುಗಳಿಂದ 864 ವಿದ್ಯಾರ್ಥಿಗಳು ಹಾಗೂ 18 ವಿಶೇಷ ಶಾಲೆಗಳಿಂದ ಒಟ್ಟು 270 ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಭಿನ್ನ ಸಾಮಥ್ರ್ಯ ಮಕ್ಕಳ ಪಥಸಂಚಲನದಲ್ಲಿ ಸೈಂಟ್ ಆಗ್ನೇಸ್ ವಿಶೇಷ ಶಾಲೆ ಪ್ರಥಮ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಭಿನ್ನ ಸಾಮಥ್ರ್ಯ ಮಕ್ಕಳ ಹಾಗೂ ಕ್ರೀಡಾಕೂಟದಲ್ಲಿ ಸೈಂಟ್ ಆಗ್ನೇಸ್ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ದ್ವಿತೀಯ ದಿನದ ಅಂತ್ಯಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ಪುರುಷರ ವಿಭಾಗದಲ್ಲಿ:
ಚಿನ್ನ: 09
ಬೆಳ್ಳಿ: 05
ಕಂಚು: 03
ಒಟ್ಟು: 17
ದ್ವಿತೀಯ ದಿನದ ಅಂತ್ಯಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ಮಹಿಳಾ ವಿಭಾಗದಲ್ಲಿ:
ಚಿನ್ನ: 10
ಬೆಳ್ಳಿ: 06
ಕಂಚು: 02
ಒಟ್ಟು: 18

ಆಳ್ವಾಸ್ ಕಾಲೇಜಿಗೆ ಲಭಿಸಿದ ಒಟ್ಟು ಪದಕಗಳು
ಚಿನ್ನ: 19
ಬೆಳ್ಳಿ: 11
ಕಂಚು: 05

ದ್ವಿತೀಯ ದಿನದ ಅಂತ್ಯಕ್ಕೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಾಧಿಸದ ನೂತನ ಕೂಟ ದಾಖಲೆ:
ಪುರುಷರು: 03
ಮಹಿಳೆಯರು: 01
ಒಟ್ಟು: 04

ಪ್ರಥಮ ದಿನದ ಪುರುಷರ ವಿಭಾಗದ ಫೈನಲ್:
1. 20 ಕಿ.ಮೀ ನಡಿಗೆ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಜುನೇದ್ ಪ್ರಥಮ, ಆಳ್ವಾಸ್ ಕಾಲೇಜಿನ ನವೀನ್ ಮಲ್ಲಿಕ್ ದ್ವಿತೀಯ, ಎಸ್.ಡಿ.ಎಮ್ ಕಾಲೇಜಿನ ಪ್ರಶಾಂತ್ ಕುಮಾರ್. ಕೆ.ಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
2. ಹಾಫ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪವನ್ ಕುಮಾರ್ ಪ್ರಥಮ, ಉಡುಪಿ ಎಮ್.ಜಿ.ಎಮ್ ಕಾಲೇಜಿನ ಸಂಗಮೇಶ್. ಹೆಚ್ ದ್ವಿತೀಯ, ಆಳ್ವಾಸ್ ಕಾಲೇಜಿನ ಭೂಪೇಂದ್ರ ಸಿಂಗ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
3. ಸ್ಟೀಪಲ್ ಚೇಸ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಸವರಾಜ್ ಪ್ರಥಮ, ಆಳ್ವಾಸ್ ಕಾಲೇಜಿನ ನವೀನ್ ಮಲ್ಲಿಕ್ ದ್ವಿತೀಯ, ಎಸ್.ಡಿ.ಎಮ್ ಕಾಲೇಜಿನ ಪ್ರಶಾಂತ್ ಕುಮಾರ್. ಕೆ.ಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಥಮ ದಿನದ ಮಹಿಳಾ ವಿಭಾಗದ ಫೈನಲ್:
1. ಸ್ಟೀಪಲ್ ಚೇಸ್ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದೀಕ್ಷಾ ಬಿ ಪ್ರಥಮ, ನಿಟ್ಟೆ ಕಾಲೇಜಿನ ಭೂಮಿಕಾ ದ್ವಿತೀಯ, ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಚೈತ್ರಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
2. ಹಾಫ್ ಮ್ಯಾರಥಾನ್ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಬಿ.ಪೆಡ್ ಕಾಲೇಜಿನ ಶಾಲಿನಿ ಕೆ ಪ್ರಥಮ, ಸುಬ್ರಮಣ್ಯ ಕೆ.ಎಸ್.ಎಸ್ ಕಾಲೇಜಿನ ದಿವ್ಯಶ್ರೀ. ಎನ್ ದ್ವಿತೀಯ, ಆಳ್ವಾಸ್ ಬಿ.ಪೆಡ್ ಕಾಲೇಜಿನ ಸೌಮ್ಯಾ. ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
3. 20ಕಿ. ಮೀ ನಡಿಗೆಯಲ್ಲಿ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಂಧನಾ ಪಾಟಿಲ್ ಪ್ರಥಮ, ಆಳ್ವಾಸ್ ಕಾಲೇಜಿನ ವಂದನಾ ದ್ವಿತೀಯ, ಆಳ್ವಾಸ್ ಕಾಲೇಜಿನ ರೇಷ್ಮಾ. ಪಿ. ವೈ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ದ್ವಿತೀಯ ದಿನದ ಪುರುಷರ ವಿಭಾಗದ ಮೀಟ್ ರೆಕಾರ್ಡ್:
1. ಶೋಟ್‍ಪುಟ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವನಮ್ ಶರ್ಮ(17.43ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದು ಆಳ್ವಾಸ್ ಕಾಲೇಜಿನ ಆಶಿಶ್ ಭಲೋಟಿಯಾ(16.45ಮೀ) ದಾಖಲೆಯನ್ನು ಮುರಿದಿದ್ದಾರೆ.
2. ಹ್ಯಾಮರ್ ಥ್ರೋ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಆಲಿಮ್ ಉದ್ದಿನ್(56.54ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಆಳ್ವಾಸ್ ಕಾಲೇಜಿನ ಸುರೇಂದ್ರ ಕುಮಾರ್(55.88ಮೀ) ದಾಖಲೆಯನ್ನು ಮುರಿದಿದ್ದಾರೆ.
3. ಟ್ರಿಪಲ್ ಜಂಪ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಶಾ ಜಯ್. ಪ್ರದೀಪ್(15.86ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಆಳ್ವಾಸ್ ಕಾಲೇಜಿನ ಕಾರ್ತಿಕ್ ಬಸನಗೊಂಡಪ್ಪ(16.67ಮೀ) ದಾಖಲೆಯನ್ನು ಮುರಿದಿದ್ದಾರೆ.

ದ್ವಿತೀಯ ದಿನದ ಪುರುಷರ ವಿಭಾಗದ ಫೈನಲ್:
1. 10,000 ಮೀ ಓಟ:
ಪ್ರಥಮ: ಶ್ಯಾಮ್, ಆಳ್ವಾಸ್ ಕಾಲೇಜು
ದ್ವಿತೀಯ: ಪವನ್ ಕುಮಾರ್, ಎಸ್.ಡಿ.ಎಮ್ ಕಾಲೇಜು
ತೃತೀಯ: ನಿಶಾಂತ್, ರಾಮಕುಂಜ ಶ್ರೀರಾಮ ಕುಂಜೇಶ್ವರ ಕಾಲೇಜು
2. ಹ್ಯಾಮರ್ ಥ್ರೋ
ಪ್ರಥಮ: ಆಲಿಮ್ ಉದ್ದೀನ್, ಆಳ್ವಾಸ್ ಕಾಲೇಜು
ದ್ವಿತೀಯ: ಪ್ರದೀಪ್ ಕುಮಾರ್, ಆಳ್ವಾಸ್ ಕಾಲೇಜು
ತೃತೀಯ: ಸಚಿನ್ ಕುಮಾರ್ ಸಾಲುಂಕೆ, ಎಸ್.ಡಿ.ಎಮ್ ಕಾಲೇಜು
3. 100ಮೀ ಓಟ:
ಪ್ರಥಮ: ಅಶ್ವಿನ್ ಕೆ. ಪಿ, ಆಳ್ವಾಸ್ ಕಾಲೇಜು
ದ್ವಿತೀಯ: ವಿಘ್ನೇಶ್, ಆಳ್ವಾಸ್ ಕಾಲೇಜು
ತೃತೀಯ: ಸ್ವಸ್ತಿಕ್, ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು
4. ಶೋಟ್ ಪುಟ್:
ಪ್ರಥಮ: ವನಮ್ ಶರ್ಮ, ಆಳ್ವಾಸ್ ಕಾಲೇಜು,
ದ್ವಿತೀಯ: ಆಶಿಶ್ ಭಲೋಟಿಯಾ, ಆಳ್ವಾಸ್ ಬಿ.ಪಿ.ಎಡ್ ಕಾಲೇಜು
ತೃತೀಯ: ಕೇಶವನ್. ಆರ್, ಆಳ್ವಾಸ್ ಕಾಲೇಜು
5. ಟ್ರಿಪಲ್ ಜಂಪ್:
ಪ್ರಥಮ: ಜಯ್ ಶಾ ಪ್ರದೀಪ್ ಆಳ್ವಾಸ್ ಕಾಲೇಜು
ದ್ವಿತೀಯ: ಸನ್ನಿ ಆಂಥೋನಿ ಡಿ ಸೋಜಾ ಮಿಲಾಗ್ರೆಸ್ ಕಾಲೇಜು
ತೃತೀಯ: ಡೇವಿಡ್ ಡಾಗಸ್ ವಾಲ್ಟರ್ ಆಳ್ವಾಸ್ ಕಾಲೇಜು
6. 110ಮೀ ಹರ್ಡಲ್ಸ್:
ಪ್ರಥಮ: ದೇಬಾರ್ಜುನ್ ಮರ್ಮು, ಆಳ್ವಾಸ್ ಕಾಲೇಜು,
ದ್ವಿತೀಯ: ವರ್ಚಸ್ ಬಿ. ಶೆಟ್ಟಿ, ಎಸ್.ಡಿ.ಎಮ್ ಕಾಲೇಜು ಮಂಗಳೂರು
ತೃತೀಯ: ನಿಶಾಂತ್, ಸೈಂಟ್ ಫಿಲೋಮಿನಾ ಪುತ್ತೂರು
7. ಹೈ ಜಂಪ್:
ಪ್ರಥಮ:
ದ್ವಿತೀಯ:
ತೃತೀಯ:
8. ಡಿಸ್ಕಸ್ ಥ್ರೋ:
ಪ್ರಥಮ: ವನಮ್ ಶರ್ಮಾ, ಆಳ್ವಾಸ್ ಕಾಲೇಜು
ದ್ವಿತೀಯ: ಜಗನ್ನಾಥ್, ಆಳ್ವಾಸ್ ಕಾಲೇಜು
ತೃತೀಯ: ಸುಮಂತ್ ಪೂಜಾರಿ, ನಿಟ್ಟೆ
9. 400 ಮೀ ಒಟ:
ಪ್ರಥಮ: ಗೌರಿ ಶಂಕರ್, ಆಳ್ವಾಸ್ ಕಾಲೇಜು
ದ್ವಿತೀಯ: ರೋಹನ್. ಡಿ. ಕುಮಾರ್, ಎಸ್.ಡಿ.ಎಂ.ಬಿ.ಎಮ್ ಕಾಲೇಜು
ತೃತೀಯ: ಫಾತಿಮ್ ಅನ್ಸಾರಿ, ಆಳ್ವಾಸ್ ಕಾಲೇಜು
10. 1500ಮೀ ಓಟ:
ಪ್ರಥಮ: ಅಜಿತ್ ಕುಮಾರ್, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ನಿರ್ಮಿತ್, ಆಳ್ವಾಸ್ ಕಾಲೇಜು ಮೂಡಬಿದ್ರೆ
ತೃತೀಯ: ದಿನೇಶ್, ಎಸ್.ಡಿ.ಎಮ್ ಉಜಿರೆ

ದ್ವಿತೀಯ ದಿನದ ಮಹಿಳೆಯರ ವಿಭಾಗದ ಮೀಟ್ ರೆಕಾರ್ಡ್:
1. ಡಿಸ್ಕಸ್ ಥ್ರೋ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ನಿಧಿರಾಣಿ (45.59ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ನಂತೂರು ಪದವ್ ಕಾಲೇಜಿನ ಪ್ರಿಯಾಂಕಾ ಜೆ. ಎಸ್ (41.89ಮೀ) ದಾಖಲೆಯನ್ನು ಮುರಿದಿದ್ದಾರೆ.

ದ್ವಿತೀಯ ದಿನದ ಮಹಿಳೆಯರ ವಿಭಾಗದ ಫೈನಲ್:
1. 10,000 ಮೀ
ಪ್ರಥಮ: ಚೈತ್ರಾ ದೇವಾಡಿಗ, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ದಿವ್ಯಶ್ರೀ, ಕೆ.ಎಸ್.ಎಸ್ ಕಾಲೇಜು ಸುಬ್ರಮಣ್ಯ,
ತೃತೀಯ: ಶಾಲಿನಿ. ಕೆ.ಎಸ್, ಆಳ್ವಾಸ್ ಕಾಲೇಜು ಮೂಡಬಿದ್ರೆ
2. ಡಿಸ್ಕಸ್ ಥ್ರೋ:
ಪ್ರಥಮ: ನಿಧಿರಾಣಿ, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ಸೃಷ್ಟಿ, ಆಳ್ವಾಸ್ ಕಾಲೇಜು ಮೂಡಬಿದ್ರೆ
ತೃತೀಯ: ಸ್ನೇಹಾ, ಪೂರ್ಣಪ್ರಜ್ಞಾ ಕಾಲೇಜು ಉಡುಪಿ
3. 100ಮೀ ಹರ್ಡಲ್ಸ್:
ಪ್ರಥಮ: ಪ್ರಿಯಾಂಕಾ, ಆಳ್ವಾಸ್ ಕಾಲೇಜು
ದ್ವಿತೀಯ: ಸೌಮ್ಯಶ್ರೀ, ಆಳ್ವಾಸ್ ಕಾಲೇಜು
ತೃತೀಯ: ದೀಕ್ಷಿತಾ, ಎಸ್.ಎಮ್ ಎಸ್ ಕಾಲೇಜು, ಬ್ರಹ್ಮಾವರ
4. ಜಾವ್ಲಿನ್ ಥ್ರೋ:
ಪ್ರಥಮ: ಪಾರ್ವತಿ ಮಾಬಲೇಶ್ವರ್ ನಾಯಕ್, ಆಳ್ವಾಸ್ ಕಾಲೇಜು
ದ್ವಿತೀಯ: ದಿವ್ಯಜ್ಯೋತಿ, ಸೈಂಟ್ ಮೇರಿಸ್ ಕಾಲೇಜು, ಬ್ರಹ್ಮಾವರ
ತೃತೀಯ: ಜ್ಯೋತ್ಸ್ನಾ ಪಿ, ಕೆನರಾ ಕಾಲೇಜು ಮಂಗಳೂರು
5. ಟ್ರಿಪಲ್ ಜಂಪ್:
ಪ್ರಥಮ: ಆಷಾ, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ಅನುಷಾ, ಆಳ್ವಾಸ್ ಕಾಲೇಜು ಮೂಡಬಿದ್ರೆ
ತೃತೀಯ: ಪವಿತ್ರಾ, ಎಸ್.ಡಿ.ಎಮ್ ಕಾಲೇಜು
6. 100 ಮೀ ಓಟ:
ಪ್ರಥಮ: ಧನಲಕ್ಷ್ಮಿ, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ದೇಚಮ್ಮ, ಆಳ್ವಾಸ್ ಕಾಲೇಜು ಮೂಡಬಿದ್ರೆ
ತೃತೀಯ: ಪಲ್ಲವಿ, ಎಸ್.ಡಿ.ಎಮ್ ಕಾಲೇಜು, ಉಜಿರೆ
7. 1500ಮೀ ಓಟ:
ಪ್ರಥಮ: ದೀಕ್ಷಾ. ಬಿ, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ಅಮೃತಾ, ಆಳ್ವಾಸ್ ಕಾಲೇಜು ಮೂಡಬಿದ್ರೆ
ತೃತೀಯ: ಸುಮತಿರಾ, ಆಳ್ವಾಸ್ ಕಾಲೇಜು ಮೂಡಬಿದ್ರೆ
8. 400ಮೀ ಓಟ:
ಪ್ರಥಮ: ಸುನಿಲಾ ಕುಮಾರಿ, ಆಳ್ವಾಸ್ ಕಾಲೇಜು ಮೂಡಬಿದ್ರೆ
ದ್ವಿತೀಯ: ಹರ್ಷಿತಾ. ಕೆ, ಆಳ್ವಾಸ್ ಕಾಲೇಜು, ಮೂಡಬಿದ್ರೆ
ತೃತೀಯ: ಸುನಿಧಿ, ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು.

Highslide for Wordpress Plugin