ಮೂಡುಬಿದಿರೆ: ಇಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಳ್ವಾಸ್ನ ವಿದ್ಯಾರ್ಥಿಗಳಿಗಾಗಿ ಕಾವೇರಿ ಕೂಗು ಕಾರ್ಯಕ್ರಮವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಇಶಾ ಫೌಂಡೇಶನ್ನ ಸ್ವಯಂಸೇವಕ ಸತೀಶ್ ಎಸ್. ಮಾತನಾಡಿ, ಕೃಷಿ ಅರಣ್ಯ (ಆಗ್ರೋಫಾರೆಸ್ಟ್ರಿ) ವಿಧಾನವನ್ನು ಅಳವಡಿಸಿಕೊಂಡು ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ತಿರುವಾರೂರುವರೆಗಿನ ಕಾವೇರಿಯ ಜಲಾನಯನ ಪ್ರದೇಶದಲ್ಲಿ ಸರಿಸುಮಾರು 242 ಕೋಟಿ ಸಸಿಗಳನ್ನು ನೆಡಲು ಇಶಾ ಫೌಂಡೇಶನ್ ರೈತರಿಗೆ ಸಹಾಯಹಸ್ತವನ್ನು ನೀಡಲು ಮುಂದಾಗಿದೆ. ದೇಶದ ನದಿಗಳನ್ನು, ಜೀವಸೆಲೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಅತಿದೊಡ್ಡ ಅಭಿಯಾನದಲ್ಲಿ ಆಳ್ವಾಸ್ನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
ಇಶಾ ಫೌಂಡೇಶನ್ನ ಸ್ವಯಂಸೇವಕಿ ದೀಪಾ ಸತೀಶ್, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಯೋಜನಾಧಿನಾಧಿಕಾರಿ ಸುರೇಶ್ ಪಿ.ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಶ್ರುತಿ ಶೆಟ್ಟಿ ಉಪಸ್ಥಿತರಿದ್ದರು.
ಭೂಮಿಕಾ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಸಂದೀಪ್ ಕುಮಾರ್ ಡಿ. ಎಸ್. ವಂದಿಸಿದರು.