ಆಳ್ವಾಸ್‍ನಲ್ಲಿ ನೆಪಮ್ ಪ್ರೆಶರ್ಸ್ ಮೀಟ್ 2019

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೆಪಮ್ ( ನಾರ್ತ್ ಈಸ್ಟ್ ಪೀಪಲ್ ಅಸೋಸಿಯೇಶನ್ ಮಂಗಳೂರು) ವತಿಯಿಂದ 7ನೇ ವಾರ್ಷಿಕ ಪ್ರೆಶರ್ಸ್ ಮೀಟ್ 2019 ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಭೂತಾನ್‍ನ ಮಾಜಿ ಸಂಸದ ಶೇರಿಂಗ್ ದೋರ್ಜಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದ ಸಂಸ್ಕೃತಿ, ಅಚಾರ-ವಿಚಾರ, ಭಾಷೆ, ಜಾತಿ ಮತ್ತು ಧರ್ಮಗಳಿದ್ದರೂ ಏಕತೆಯನ್ನು ಸಾಧಿಸಿದ ಜಗತ್ತಿನ ಪ್ರಮುಖ ರಾಷ್ಟ್ರ. ನೆಪಮ್ ಸಂಘಟನೆಯು ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಅಭಿವೃದ್ದಿಗೆ ಶ್ರಮಿಸುತ್ತಿರುವುದು ನೀಜಾವಾಗಲೂ ಗಮನಾರ್ಹ ಎಂದರು.
ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಈಶಾನ್ಯ, ಕರ್ನಾಟಕ, ಎಂಬ ಭೇದಲಿಲ್ಲದೆ ಒಟ್ಟಾಗಿ ಸಹಜೀವನವನ್ನು ಮಾಡಬೇಕು. ಸಾಧನೆ ಹಾಗೂ ಒಳಿತಿಗಾಗಿ ನಾವು ಶ್ರಮಿಸಬೇಕು. ಈಶಾನ್ಯ ರಾಜ್ಯವನ್ನು ಪ್ರತಿಬಿಂಬಿಸುವ ಉಡುಗೆತೊಡುಗೆ ಅತ್ಯಂತ ಸಮೃದ್ದವಾದ ಸಂಸ್ಕೃತಿ ಮತ್ತು ಅಚಾರ ವಿಚಾರದ ಪ್ರತೀಕ. ನೆಪಮ್ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ನೆಪಮ್ ಅಧ್ಯಕ್ಷ ಏನೀದ್, ಮುಖ್ಯ ಸಲಹೆಗಾರ್ತಿ ಡಾ.ಅಝೋನಿ, ಉಪಾಧ್ಯಕ್ಷ ವಿವಿಯನ್, ಮಲ್ಟಿಪಲ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಅಶ್ವಿನ್ ನಾೈಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Highslide for Wordpress Plugin