ಮೂಡುಬಿದಿರೆ: ಬೆಂಗಳೂರು ರಾಜೀವ್ಗಾಂಧಿ ಆರೋಗ್ಯ ವಿವಿ ಮತ್ತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿಮಂಗಳವಾರ ಪ್ರಾರಂಭಗೊಂಡಿರುವ 20ನೇ ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ನ ಮೊದಲ ದಿನ ಆಳ್ವಾಸ್ ಹಾಸ್ಪಿಟಲ್ ಅಡ್ಮಿಮಿನಿಷ್ಟ್ರಶನ್ ಕಾಲೇಜು 71 ಅಂಕಗಳನ್ನು ಗಳಿಸಿ ಮುನ್ನಡೆ ಸಾಧಿಸಿದೆ. ಸುಳ್ಯ ಕೆ.ವಿ.ಜಿ ಡೆಂಟಲ್ ಕಾಲೇಜು 21 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಮೊದಲ ದಿನ ಒಟ್ಟು ನಾಲ್ಕು ಹೊಸ ಕೂಟ ದಾಖಲೆಗಳಾಗಿವೆ. ಮಹಿಳಾ ವಿಭಾಗದ ಡಿಸ್ಕಸ್ ತ್ರೋನಲ್ಲಿ ಆಳ್ವಾಸ್ ಹಾಸ್ಪಿಟಲ್ ಅಡ್ಮಿಮಿನಿಷ್ಟ್ರೇಶನ್ ಕಾಲೇಜಿನ ಅನಿಶಾ ದಹಿಯಾ 36.89 ಮೀಟರ್ ಎಸೆದು ಕೂಟ ದಾಖಲೆ ಮಾಡಿದ್ದಾರೆ. ಶಾಟ್ಪುಟ್ ಮಹಿಳಾ ವಿಭಾಗದಲ್ಲಿ ಆಳ್ವಾಸ್ನ ಅನಿಶಾ ದಹಿಯಾ 10.60 ಮೀಟರ್ ಎಸೆದು ಇನ್ನೊಂದು ಕೂಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಪುರುಷರ ಡಿಸ್ಕಸ್ ತ್ರೋನಲ್ಲಿ . ಸುಳ್ಯ ಕೆ.ವಿ.ಜಿ ಡೆಂಟಲ್ ಕಾಲೇಜಿನ ನೋಯಲ್ ಥೋಮಸ್ ಅಬ್ರಹಾಂ 35.04 ಮೀಟರ್ ಎಸೆದು ಕೂಟ ದಾಖಲೆಯನ್ನು ಮಾಡಿದ್ದಾರೆ. ಕೆವಿಜಿ ಕಾಲೇಜಿನ ನೋಯಲ್ ನೋಯಲ್ ಥೋಮಸ್ ಶಾಟ್ಪುಟ್ ಪುರುಷರ ವಿಭಾಗದಲ್ಲಿ 12.34 ಮೀಟರ್ ಮತ್ತೊಂದು ಕೂಟ ದಾಖಲೆಯನ್ನು ಮಾಡಿದ್ದಾರೆ.