ಬೆಳಗಾವಿ ವಿಶ್ವವಿದ್ಯಾನಿಲಯ ಮಟ್ಟದ ಏಪ್ರಿಲ್‍ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್‍ನ ರಿನು ಥೋಮಸ್‍ಗೆ ಎಂ.ಬಿ.ಎ ವಿಭಾದಲ್ಲಿ ಸಿ.ಜಿ.ಪಿ.ಎ 8.67 ಗ್ರೇಡ್ ನೊಂದಿಗೆ 2ನೇ ರಾಂಕ್ ಪಡೆದಿರುತ್ತರೆ. ಬೆಳಗಾವಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸುಮಾರು 150 ಕಾಲೇಜ್‍ಗಳಲ್ಲಿ 6021 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು ಅದರಲ್ಲಿ 2ನೇ ರಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ.
ರಿನು ಥೋಮಸ್ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನುರಿನ ನಿವಾಸಿಯಾಗಿದ್ದು, ತಂದೆ ಶಾಜಿ ಥೋಮಸ್ ಮತ್ತು ತಾಯಿ ರಮಣಿ ಥೋಮಸ್. ಪ್ರಸ್ತುತ ರಿನು ಥೋಮಸ್ ಇ.ವೈ ಕಂಪನಿ ಬೆಂಗಳೂರಿನಲ್ಲಿ ಕಾರ್ಯ ನೀರ್ವಹಿಸಿರುತ್ತಾರೆ. ರಾಂಕ್ ವಿಜೇತೆಯನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ್ ಆಳ್ವ ,ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅಭಿನಂದಿಸಿದರು.