ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಸಾಧನೆ – ಆಳ್ವಾಸ್‍ನ ರಾಘುವೇಂದ್ರ ಪ್ರಸಾದ್‍ಗೆ 34ನೇ RANK

ಒಟ್ಟು 9 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಮೂಡುಬಿದಿರೆ: ಮೇ 2019 ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಪ್ರಸಾದ್ ಕೆ. ಜಿ. ದೇಶದಲ್ಲಿಯೇ 34 ನೇ ರ್ಯಾಂಕ್ ಗಳಿಸಿದ್ದಾರೆ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ರಾಘುವೇಂದ್ರ ಸಹಿತ ಒಟ್ಟು 9 ಮಂದಿ ವಿದ್ಯಾರ್ಥಿಗಳು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ವಾಣಿಶ್ರೀ, ನಿಖಿತಾ ಗೌಡ, ಮಹಮ್ಮದ್ ನೌಫಲ್, ಸಾಹುಲ್ ಹಮೀದ್, ಕೀರ್ತನಾ ಎಮ್. ಕೆ., ಅಮಲ್ ಮ್ಯಾಥಿವ್,

Read More

ಸಿ. ಎಸ್ ಫೌಂಡೇಶನ್ ಪರೀಕ್ಷೆ ಆಳ್ವಾಸ್ ಸಾಧನೆ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ 12 ವಿದ್ಯಾರ್ಥಿಗಳು ಕಳೆದ ಜೂನ್ ನಲ್ಲಿ ಸಿ. ಎಸ್ ಫೌಂಡೇಶನ್ ಪರೀಕ್ಷೆ ಬರೆದಿದ್ದು, ಅವರಲ್ಲಿ 9 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಯಿಂದ ನಿರಂತರ ತರಬೇತಿ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲೂ ಮೇಲುಗೈ ಸಾಧಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪದವಿ ಶಿಕ್ಷಣದ ಜೊತೆಗೆ ಸಿ. ಎಸ್ ಫೌಂಡೇಶನ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಈ ಕೋರ್ಸ್‍ನ ಮುಂದಿನ ಹಂತದ ಏಕ್ಸಿಕ್ಯೂಟಿವ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.

Read More

ವಿಟಿಯು ಫಲಿತಾಂಶ ಪ್ರಕಟ: ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 8ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಿ.ಎಸ್.ಇ ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಾಗಿದೆ. 90 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಜಸ್ಮಿನೆ ಪ್ರಿನ್ಸಿ ಲೋಬೊ ಶೇ.88.71 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಐ.ಎಸ್.ಸಿ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. 29 ವಿಶಿಷ್ಟ ಶ್ರೇಣಿ ಪಡೆದುಕೊಂಡಿದ್ದಾರೆ. ಹರ್ಷಿತಾ ಶೇ.88.57 ಅಂಕ ಪಡೆದು ಪ್ರಥಮ ಸ್ಥಾನಿಯಾಗಿದ್ದಾರೆ. ಇ.ಸಿ.ಇ ವಿಭಾಗದಲ್ಲಿ

Read More

ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ ಸಾಧನೆ

ಮೂಡುಬಿದಿರೆ: 2019-20ನೇ ಸಾಲಿನ ಸಿಎ-ಸಿಪಿಟಿ ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲಾ ಡಿ’ಸೋಜ 200 ಅಂಕಗಳಲ್ಲಿ 162 ಅಂಕಗಳನ್ನು ಪಡೆದು ರಾಜ್ಯ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯಲ್ಲಿ ಟಾಪರ್ ಆಗಿದ್ದಾರೆ.  ಪ್ರಸಕ್ತ ವರ್ಷದಲ್ಲಿ ಪ್ರಕಟಗೊಂಡಿರುವ ಪಿಯುಸಿ ಫಲಿತಾಂಶದ ವಾಣಿಜ್ಯ ವಿಭಾಗದಲ್ಲಿ ಓಲಿಟ್ವಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಪರೀಕ್ಷೆಗೆ ಅಳ್ವಾಸ್ ಪಿಯು ಕಾಲೇಜಿನ 157 ಮಂದಿ ಹಾಜರಾಗಿದ್ದು, 85 ಮಂದಿ ಉತ್ತೀರ್ಣರಾಗಿದ್ದಾರೆ. 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಒಟ್ಟು ಶೇ. 54.14

Read More

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್‍ನ ಚೈತ್ರಾ ಶೆಟ್ಟಿ ಪ್ರಥಮ

ಮೂಡುಬಿದಿರೆ: ಯೋಗ ದಿನಾಚರಣೆಯ ಅಂಗವಾಗಿ ಯೋಗ ಗಂಗೋತ್ರಿ ಟ್ರಸ್ಟ್, ಬೆಂಗಳೂರಿನ ಬಸವನಗುಡಿ ಬಿ.ಎಂ.ಎಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಚೈತ್ರಾ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.

Read More

ಅಂತರಾಷ್ಟ್ರೀಯ ಜೀನಿಯಸ್ ಒಲಿಂಪಿಯಾಡ್‍ನಲ್ಲಿ ಆಳ್ವಾಸ್ ವಿದ್ಯಾರ್ಥಿಯ ಸಾಧನೆ

ಮೂಡಬಿದಿರೆ: ನ್ಯೂಯಾರ್ಕನ ಓಸ್ವೇಗೋ ವಿಶ್ವವಿದ್ಯಾಲಯದಲ್ಲಿ ಜೂನ್ 19 ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‍ನಲ್ಲಿ ಆಳ್ವಾಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಅಮೋಘ ನಾರಾಯಣ ಸೆಕೆಂಡ್ ಗ್ರ್ಯಾಂಡ್ ಪ್ರಶಸ್ತಿಯೊಂದಿಗೆ ರಜತ ಪದಕ ವನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆಗೆ 79 ದೇಶಗಳಿಂದ 1269 ಸ್ಪರ್ಧಾಳುಗಳು ಭಾಗವಹಿಸಿದ್ದು, ಇವರ ಅನ್ವೇಷಣೆಯಾದ ‘’ಎವಾಲ್ಯೂವೆಷನ್ ಆಫ್ ನಾವೆಲ್ ಇಕೋ ಫ್ರೆಂಡ್ಲಿ ವೀಡಿಸೈಡ್ ಫ್ರಮ್ ಕೋಕಮ್ ಫ್ರೂಟ್ ಎಕ್ಸ್ಟ್ರಾಕ್ಟ್ ಸೋಪ್ ನಟ್” ದ್ವಿತೀಯ ಸ್ಥಾನವನ್ನು

Read More

ಸಿಇಟಿ ಫಲಿತಾಂಶ : ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮೂಡುಬಿದಿರೆ: 2019ರಲ್ಲಿ ಸಿಇಟಿ ಪರೀಕ್ಷೆಗೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಜರಾಗಿದ್ದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಆಳ್ವಾಸ್ ದರ್ಶನ್ ಸಮರ್ಥ ಬಿ.ಎಸ್ ಅಗ್ರಿಕಲ್ಚರ್‍ನಲ್ಲಿ 10ನೇ ರ್ಯಾಂಕ್ ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಒಂದು ಸಾವಿರ ರ್ಯಾಂಕ್ ಒಳಗಡೆ 678 ರ್ಯಾಂಕ್ ಆಳ್ವಾಸ್ ಪಡೆದುಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಿಇಟಿ ಪರೀಕ್ಷೆಯ ಒಂದರಿಂದ ಐವತ್ತು ರ್ಯಾಂಕ್ ಒಳಗಡೆ 20 ರ್ಯಾಂಕ್‍ಗಳನ್ನು ಆಳ್ವಾಸ್‍ನ ವಿದ್ಯಾರ್ಥಿಗಳು ಪಡೆದಿದ್ದಾರೆ. ನೂರರ ಒಳಗಡೆ

Read More

ಸಿಇಟಿ: ಆಳ್ವಾಸ್‍ನ ದರ್ಶನ್‍ಗೆ 10ನೇ RANK

ಮೂಡುಬಿದಿರೆ: ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್. ದರ್ಶನ್ ಸಮರ್ಥ ಅವರು ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 10ನೇ ರ್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಮೂಲತಃ ಮೈಸೂರಿನ ಹೂಟಗಳ್ಳಿಯವರಾದ ದರ್ಶನ್ ಬಿ.ಎನ್.ವೈಎಸ್. ವಿಭಾಗದಲ್ಲಿ 43ನೇ ರ್ಯಾಂಕ್ ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ 71 ನೇ ರ್ಯಾಂಕ್, ಎಂಜಿನಿಯರಿಂಗ್ ವಿಭಾಗದಲ್ಲಿ 119ನೇ ರ್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾ ವಿಭಾಗದಲ್ಲಿ 134ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಪ್ರೌಢಶಾಲಾ ಶಿಕ್ಷಕ ಎಸ್.ಡಿ.ಶಿವಣ್ಣ ,ಗೃಹಿಣಿ ಜಲಜಾಕ್ಷಿಯವರ ಪುತ್ರ. ಕಳೆದ ಪಿಯುಸಿ

Read More

ಮರು ಮೌಲ್ಯಮಾಪನ: ಆಳ್ವಾಸ್‍ನ ಸುಜ್ಞಾನ್ ಆರ್. ಶೆಟ್ಟಿ ರಾಜ್ಯಕ್ಕೆ ಪ್ರಥಮ

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಮರು ಮೌಲ್ಯಮಾಪನದಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಅವರು 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅದರಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಕನ್ನಡ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ತಲಾ ಒಂದೊಂದು ಅಂಕ ಕಡಿಮೆ ಬಂದಿತ್ತು. ಒಟ್ಟು 623 ಅಂಕಗಳನ್ನು ಗಳಿಸಿ 2ನೇ ರ್ಯಾಂಕನ್ನು ಪಡೆದುಕೊಂಡಿದ್ದರು. ತಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನು ನೀಡಿದ್ದೇನೆ ತನಗೆ

Read More

ಎಸ್‍ಎಸ್‍ಎಲ್‍ಸಿ: ಆಳ್ವಾಸ್ ಶಾಲೆಗಳ ಸಾಧನೆ

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶೇ.100 ಹಾಗೂ ಆಂಗ್ಲ ಮಾಧ್ಯಮ ಶಾಲೆ ಶೇ.98.43 ಫಲಿತಾಂಶ ದಾಖಲಿಸಿದೆ. ಆಳ್ವಾಸ್‍ನ ಮೂವರು ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದ ರಾಜ್ಯದಲ್ಲಿ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯ ಟಾಪ್ 10ರಲ್ಲಿ ನಾಲ್ವರು ಸ್ಥಾನವನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಳ್ವಾಸ್

Read More

Highslide for Wordpress Plugin