News & Events
`ಔಷಧ ಪರಂಪರಾ’ ರಾಷ್ಟ್ರೀಯ ವಿಚಾರಸಂಕಿರಣ
ವಿದ್ಯಾಗಿರಿ: ಪ್ರತಿಯೊಂದು ಗಿಡ-ಮರದಲ್ಲೂ ಔಷಧೀಯ ಗುಣಗಳಿದ್ದು, ಇಂತಹ ಸಸ್ಯ ಸಂಪತ್ತಿನ ಆಹಾರ ಹಾಗೂ ಔಷಧೀಯ ಮೌಲ್ಯಗಳನ್ನು ಅರಿತುಕೊಂಡಿದ್ದರಿಂದ ಪರಂಪರಾ ಚಿಕಿತ್ಸಾ ಪದ್ದತಿ ಎಂಬುದು ಜನ್ಮತಳೆಯಿತು ಎಂದು ಹಿರಿಯ ವಿಜ್ಞಾನಿ ಡಾ. ಯು.ಎಮ್‍ಚಂದ್ರಶೇಖರ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜರುಗಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಟ್ರೆಡಿಷನಲ್ ಮೆಡಿಸಿನಲ್ ಅರ್ಕೈವ್ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಭಾರತ ಸರ್ಕಾರ ಆಯುಷ್ ಇಲಾಖೆಯ ಜಂಟಿ ಆಯೋಗದೊಂದಿಗೆ ನಡೆದ ಎರಡು ದಿನಗಳ ರಾಷ್ಟ್ರೀಯ
‘ಸಸ್ಯ ಸೌರಭ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಮೂಡುಬಿದಿರೆ: ಉಜಿರೆಯ ಎಸ್‍ಡಿಎಂ ಕಾಲೇಜಿನ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಜೈವಿಕ ಪರ್ವ ‘ಸಸ್ಯ ಸೌರಭ’ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಛಾಯಾಗ್ರಾಹಣದಲ್ಲಿ ಅಂಜನ್, ರಸಪ್ರಶ್ನೆಯಲ್ಲಿ ಅನ್ನಪೂರ್ಣ ಎಲ್ ಹಾಗೂ ಚೈತ್ರ ಪ್ರಥಮ ಸ್ಥಾನ, ಶ್ರೀಜಿತ್ ಜಸ್ಟ್ ಎ ಮಿನಿಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಜ್ಞಾನ ವಿಭಾಗದ ಡೀನ್
‘‘ತಾರೆ ಜಮೀನ್ ಪರ್’’ನಲ್ಲಿ ಸಮಗ್ರ ಚಾಂಪಿಯನ್
ಮೂಡಬಿದಿರೆ: ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಜರುಗಿದ ಅಂತರ್‍ಕಾಲೇಜು ಮಟ್ಟದ ಹಿಂದಿ ಸ್ಪರ್ಧೆ ‘‘ತಾರೆ ಜಮೀನ್ ಪರ್’’ ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಳ್ವಾಸ್ ಕಾಲೇಜು ರಸಪ್ರಶ್ನೆಯಲ್ಲಿ ಪ್ರಥಮ, ಡಿಬೇಟ್ ಹಾಗೂ ಡ್ರಾಮದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ , ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಕುರಿಯನ್, ಭಾಷಾ ವಿಭಾಗದ ಡೀನ್ ಡಾ ರಾಜೀವ್ ವಿದಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಸಂವಾದ ಕಾರ್ಯಕ್ರಮ
ಮೂಡುಬಿದಿರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದ ಪ್ರಸ್ತುತ ವಿದ್ಯಮಾನಗಳಿಗೆ ಹೆಚ್ಚು ಗಮನ ಹರಿಸಿ, ತಮ್ಮನ್ನು ತಾವು ತೊಡಗಿಸಿಕೊಂಡಾಗ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಕಲರ್ಸ್ ಕನ್ನಡದ ಧಾರವಾಹಿಯ ಕಾರ್ಯನಿರ್ವಾಹಕ ಸನಲ್ ನಾಯರ್ ಹೇಳಿದರು. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನೂ ತಾವು ತೊಡಗಿಸಿಕೊಂಡಾಗ ಮಾತ್ರ ಉನ್ನತವಾಗಿ ಬೆಳೆಯಲು ಸಾಧ್ಯ. ಅಲ್ಲದೇ ಪ್ರತಿಯೊಬ್ಬರು ವಿಭಿನ್ನವಾದ ಅಭಿರುಚಿ ಹೊಂದಿದಾಗ ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ತನವನ್ನು ರೂಪಿಸಿಕೊಳ್ಳಬಹುದು.
ಶ್ರುತಿ ಎಸ್.ಗೆ ಡಾಕ್ಟರೇಟ್
ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಎಸ್. ರವರು ಮಂಡಿಸಿದ ಫ್ರೌಡ ಪ್ರಬಂಧ ‘’ಸ್ಟಡೀಸ್ ಆನ್ ಜಿನೋಪ್ರೋಟೇಕ್ಟಿವ್ ಎಫೆಕ್ಟ್ ಆಫ್ ಸೆಪ್ಟಿಲಿನ್ ಆ್ಯಂಡ್ ಗಾಲಿಕ್ ಆ್ಯಸಿಡ್ ಆನ್ ಸ್ವಿಸ್ ಅಲ್‍ಬಿನೋ ಮೈಸ್ ಆ್ಯಂಡ್ ಇವ್ಯಾಲ್ಯುವೇಶನ್ ಆಫ್ ದೆಯರ್ ಸೈಟೋಟೊಕ್ಸಿಕ್ ಎಫೆಕ್ಟ್ಸ್ ಆನ್ ಎಂಸಿಎಫ್- 7 ಸೆಲ್ಸ್’’ ಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊಪೆಸರ್ ಕೆ. ಭಾಸ್ಕರ್ ಶೆಣೈ
“ಅಲೋಹ 2019”
ಮೂಡುಬಿದಿರೆ: ಪ್ರತಿಯೊಬ್ಬರು ತಮ್ಮ ತಾಯಿ ಮತ್ತು ತಾಯಿ ಭಾಷೆಯನ್ನು ಪ್ರೀತಿಸಲು ಕಲಿಯಬೇಕು ಎಂದು ಆಳ್ವಾಸ್ ಪದವಿ ಕಾಲೇಜಿನ ಆಡಳಿತ ಅಧಿಕಾರಿ ಪ್ರೋ ಬಾಲಕೃಷ್ಣ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಬಿಎಸ್ಸಿ ಮತ್ತು ಎಂಎಸ್ಸಿ ಕೊನೆಯ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ “ಅಲೋಹ 2019” ಸಮಾರಂಭದಲ್ಲಿ ಮಾತನಾಡಿದರು. ಪಾಶ್ಚಾತ್ಯ ಭಾಷೆ ಕೇವಲ ಅಧ್ಯಯನಕ್ಕೆ ಸೀಮಿತವಾಗಿದ್ದು ಅದರಲ್ಲಿ ನಮ್ಮತನವನ್ನು ಕಾಣಲು ಸಾಧ್ಯವಿಲ್ಲ. ಅಮ್ಮ ಎನ್ನುವ ಪದ ಮಾತೃ ಭಾಷೆಯಲ್ಲಿ ಉಚ್ಚರಿಸಿದಾಗ ಮಾತ್ರ ಆ ಪದಕ್ಕೆ ಅರ್ಥ ಸಿಗುವುದು ಆದೇ ಆಂಗ್ಲ
ಆಳ್ವಾಸ್ ಸಹಕಾರ ಸಂಘ ಮಹಾಸಭೆ – ನೆರೆ ಸಂತ್ರಸ್ತರಿಗೆ ಆಳ್ವಾಸ್ ಸಹಕಾರ ಸಂಘದಿಂದ 1 ಲಕ್ಷ ರೂ. ದೇಣಿಗೆ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಸಹಕಾರ ಸಂಘ ನಿಯಮಿತದ ಮೂರನೇ ವಾರ್ಷಿಕ ಮಹಾಸಭೆ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ 1 ಲಕ್ಷ ರೂ. ದೇಣಿಗೆಯನ್ನು ನೀಡಲಾಯಿತು. ಸಂಘದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಎಂ.ಶೆಟ್ಟಿ ಒಂದು ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಎಂ ಮೋಹನ ಆಳ್ವ, ಆಳ್ವಾಸ್ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 45 ಕೋಟಿ ರೂ.
ಆಳ್ವಾಸ್‍ನಲ್ಲಿ ಒಣಂ ಆಚರಣೆ
ಮೂಡುಬಿದಿರೆ: ಆಳ್ವಾಸ್‍ನಲ್ಲಿ ಆಚರಿಸುವ ಒಣಂ ದೇಶದ ಎಲ್ಲಾ ಧರ್ಮ ಜಾತಿಯವರು ಒಂದೆಡೆ ಸೇರಿ, ಸಮಾನರಾಗಿ ಆಚರಿಸಲು ಇರುವ ಭವ್ಯ ವೇದಿಕೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು. ಅವರು ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಒಣಂ ಹಬ್ಬದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ದೇಶದ ಏಕತೆಯನ್ನು ಎತ್ತಿಹಿಡಿಯುವಲ್ಲಿ ಓಣಂ ಅತ್ಯಂತ ಮಹತ್ತರವಾದ ಪಾತ್ರವಹಿಸುತ್ತದೆ. ಅನೇಕ ಸಂಧರ್ಭಗಳಲ್ಲಿ ಹಬ್ಬ ಹಾಗೂ ಧರ್ಮದ ವಿಷಯಗಳಲ್ಲಿ ನಮ್ಮ ನಡುವೆ ಸಂಘರ್ಷವನ್ನು ಕಾಣಬಹುದು. ಆದರೆ ಒಣಂ ಹಬ್ಬ ಪ್ರತಿಯೊಬ್ಬರನ್ನೂ
‘ವಿಶ್ವ ವಿಜೇತ’
ವಿದ್ಯಾಗಿರಿ: ಸ್ವಂತಿಕೆ ಇದ್ದರೆ ಜಗತ್ತಿನಲ್ಲಿ ಬದುಕುವ ದಾರಿಗಳು ಹಲವು. ಇನ್ನೊಬ್ಬರನ್ನು ಅನುಕರಣೆ ಮಾಡದೆ ಬದುಕುವುದು ಹೇಗೆ ಎಂಬುದನ್ನು ಜಗತ್ತಿಗೆ ಸಾರಿದ ಮಹಾನ್ ಪುರುಷ ಸ್ವಾಮಿ ವಿವೇಕಾನಂದರು ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ತಿಳಿಸಿದರು ಸ್ವಾಮಿ ವಿವೇಕಾನಂದರ ಚಿಕಾಗೋ ಸರ್ವಧರ್ಮ ಸಮ್ಮೇಳನದ ಭಾಷಣಕ್ಕೆ 125ನೇ ವರ್ಷದ ಪ್ರಯುಕ್ತ ರಾಮಕೃಷ್ಣ ಮಠದ ವತಿಯಿಂದ ‘ವಿಶ್ವ ವಿಜೇತ’ ಕಾರ್ಯಕ್ರಮವನ್ನು 125 ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲಿ ಸರಣಿ ಉಪನ್ಯಾಸದ 123ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ವಾಮಿ ವಿವೇಕಾನಂದರ ನೆನಪಿನ
ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಹ್ಯಾಂಡ್‍ಬಾಲ್ ಪಂದ್ಯಾಟ ಆಳ್ವಾಸ್‍ಗೆ ಅವಳಿ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಗುರುವಾರ ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಆಳ್ವಾಸ್ ತಂಡವು ಮಹೇಶ್ ಪ.ಪೂ. ಕಾಲೇಜನ್ನು 16-9 ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು ಸೈಂಟ್ ಆಗ್ನೆಸ್ ಪ.ಪೂ. ಕಾಲೇಜು, ಮಂಗಳೂರು ತಂಡವನ್ನು 8-4 ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.