News & Events
ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಬಾಲ್ ಬ್ಯಾಡ್‍ಮಿಂಟನ್ ಪಂದ್ಯಾಟ ಆಳ್ವಾಸ್‍ಗೆ ಅವಳಿ ಪ್ರಶಸ್ತಿ
ಮೂಡಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಸೇಕ್ರೆಟ್ ಹಾರ್ಟ್ ಪದವಿಪೂರ್ವ ಕಾಲೇಜ್ ಮಡಂತ್ಯಾರು ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‍ಮಿಂಟನ್ ಪಂದ್ಯಾಟದ ಹುಡುಗರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ಸೇಕ್ರೆಟ್ ಹಾರ್ಟ್ ಪ.ಪೂ. ಕಾಲೇಜ ಅನ್ನು 35-28, 35-18, ನೇರ ಸೇಟ್‍ನಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ಸೇಕ್ರೆಟ್ ಹ್ಯಾರ್ಟ್ ಪ.ಪೂ.
ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹಳ ಮುಖ್ಯ
ಮಿಜಾರು: ಪ್ರತಿಯೊಬ್ಬರು ತಮ್ಮ ಜೀವನವನ್ನು ತಾವೇ ಕಟ್ಟಿಕೊಂಡಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್ ಹೇಳಿದರು. ಆಳ್ವಾಸ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗವು ಆಯೋಜಿಸಿದ್ದ “ಟೆಕ್‍ಕ್ರಂಚ್” 2019 ಇಂಟರ್ ಕಾಲೇಜು ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆ ಜೀವನದುದ್ದಕ್ಕೂ ಮುಂದುವರಿಯುವ ಪ್ರಕ್ರಿಯೆ. ಆ ಪ್ರಕಿಯೆಯಲ್ಲಿ ಸಮರ್ಪಕವಾಗಿ ತೊಡಗಿಕೊಂಡು, ಉತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಲಕ್ಷಣ. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತೀ ದಿನ ಯಾವ ರೀತಿಯಾಗಿ ತನ್ನನ್ನು ತಾನು ಕೆಲಸಗಳಲ್ಲಿ
ರಾಷ್ಟ್ರೀಯ ಪೌಷ್ಠಿಕಾಂಶ ವಾರದ ಆಚರಣೆ
ಮೂಡುಬಿದಿರೆ: ಮಾನವನ ದೇಹದಲ್ಲಿ ಮೆದುಳು ಬಹು ಮುಖ್ಯವಾದ ಪಾತ್ರವನ್ನು ವಹಿಸುವುದರಿಂದ ಆತ ಸತ್ವಯುತವಾದ ಆಹಾರವನ್ನು ಸೇವಿಸುವುದು ಅಗತ್ಯವಾಗುತ್ತದೆ ಎಂದು ಖ್ಯಾತ ಮಕ್ಕಳ ತಜ್ಞೆ ಡಾ. ಆಶಾ ಹೆಗ್ಡೆ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ವಿಭಾಗದಿಂದ ಆಯೋಜಿಸಲಾದ ರಾಷ್ಟ್ರೀಯ ಪೌಷ್ಠಿಕಾಂಶ ವಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಗುವಿಗೆ ಭ್ರೂಣಾವಸ್ಥೆಯಿಂದಲೇ ಪೌಷ್ಟಿಕಾಂಶಯುತ ಆಹಾರ ಅಗತ್ಯವಾಗಿರುತ್ತದೆ. ತಾಯಿಯು ಇದರ ಬಗ್ಗೆ ಗಮನಹರಿಸಬೇಕು. ಮಗು ಹುಟ್ಟಿದ ನಂತರ 6 ತಿಂಗಳವರೆಗೆ ದನದ ಹಾಲನ್ನು ಕೊಡುವುದು ಸೂಕ್ತವಲ್ಲ. ಈ
ʻಮೈಕ್ರೊಸ್ಪಾರ್ಕ್’ ಮಾಹಿತಿ ಕಾರ್ಯಗಾರ
ವಿದ್ಯಾಗಿರಿ: ಪ್ರಸ್ತುತ ದಿನಗಳಲ್ಲಿ ಸೂಕ್ಷ್ಮಜೀವಶಾಸ್ತ್ರವೆಂಬುದು ಅತೀ ಪ್ರಾಮುಖ್ಯತೆಯನ್ನು ಹೊಂದಿರುವ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಲಭ್ಯವಿರುವ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಡಾ. ಭಾರತಿ ಪ್ರಕಾಶ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನಲ್ಲಿ ಸೂಕ್ಷ್ಮಜೀವವಿಜ್ಞಾನ ವಿಭಾಗದ ವತಿಯಿಂದ ನಡೆದ ಒಂದು ದಿನದ ಮಾಹಿತಿ ಕಾರ್ಯಗಾರ ʻಮೈಕ್ರೊಸ್ಪಾರ್ಕ್ʻನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಶೋಧನಾ ಮನೋಭಾವವೆಂಬುದು ವಿಜ್ಞಾನಿಯಾಗಬಯಸುವವನಿಗೆ ಅತೀಮುಖ್ಯ ಅಂಶ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಆಕ್ತಿದಾಯಕ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿನ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ
ಆಳ್ವಾಸ್ ನರ್ಸಿಂಗ್ ಒರಿಯೆಂಟೇಶನ್ ಕಾರ್ಯಕ್ರಮ
ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ದೂರದೃಷ್ಟಿಯ ಗುರಿಗಳನ್ನು ಇಟ್ಟುಕೊಳ್ಳುವುದು ಅತ್ಯಗತ್ಯ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಆಳ್ವಾಸ್ ನರ್ಸಿಂಗ್ ಕಾಲೇಜಿನ 24 ನೇ ಬ್ಯಾಚ್‍ನ ಬಿಎಸ್ಸಿ ನರ್ಸಿಂಗ್, 18ನೆ ಬ್ಯಾಚ್‍ನ ಎಂಎಸ್ಸಿ ನರ್ಸಿಂಗ್ ಮತ್ತು 25ನೆ ಬ್ಯಾಚ್‍ನ ಜನರಲ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಒರಿಯೆಂಟೆಶನ್ ಕಾಂiÀರ್iಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನರ್ಸಿಂಗ್ ಹುದ್ದೆಯು ಅದರದೇ ಆದ ಮಹತ್ವ ಹೊಂದಿದ್ದು, ಅನ್ಯ ಹುದ್ದೆಗಳಿಗಿಂತ ವಿಭಿನ್ನವಾಗಿದೆ. ಅಲ್ಲದೇ ಸೇವಾ ಆಧಾರಿತ ಗುರಿಗಳ ಮೂಲಕ
ಸ್ಟೂಡೆಂಟ್ ವೆಲ್ಫೆರ್ ಕೌನ್ಸಿಲ್ ‘’ತನುಮನ’’ದ ಉದ್ಘಾಟನೆ
ವಿದ್ಯಾಗಿರಿ: ಭಾವನೆ ಎಂಬುವುದು ವಿವಿಧ ಬಗೆಯ ರುಚಿಯಿದ್ದಂತೆ. ಅಡುಗೆಯೊಂದರಲ್ಲಿ ಉಪ್ಪು, ಹುಳಿ, ಖಾರಗಳು ಎಷ್ಟು ಪ್ರಮುಖವೋ ಹಾಗೆಯೇ ಜೀವನದಲ್ಲಿ ಸಂತೋಷ, ಸಿಟ್ಟು, ಬೇಜಾರುಗಳಂತಹ ಭಾವನೆಗಳು ಮುಖ್ಯವಾಗುತ್ತದೆ ಎಂದು ಮನಶಾಸ್ತ್ರಜ್ಞೆ ಲೆವಿನಾ ನರೋನಾ ತಿಳಿಸಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಾವುದೇ ಒಂದು ಭಾವನೆಯನ್ನು ತಮ್ಮಲ್ಲಿಯೇ ಅನುಭವಿಸುವುದಕ್ಕಿಂತಲೂ ಇನ್ನೊಬ್ಬರಲ್ಲಿ ಹಂಚಿಕೊಳ್ಳುವುದು ಸೂಕ್ತ. ಮನುಷ್ಯ ಸಿಟ್ಟಾದಾಗ ತನ್ನ ಕೋಪವನ್ನು ತೋರಿಸಿಕೊಳ್ಳತೊಡಗುತ್ತಾನೆ. ವಸ್ತುಗಳನ್ನು ಎಸೆಯುವುದು, ಕಾರಣವಾದ ವ್ಯಕ್ತಿಗೆ ದೈಹಿಕವಾಗಿ ನೋವು ನೀಡುವುದು
ಸಿ.ಎ. – ಇಂಟರ್ ಮೀಡಿಯಟ್ ಪರೀಕ್ಷಾ ಫಲಿತಾಂಶ
ಮೇ 2019 ರಲ್ಲಿ ನಡೆದ ‘ಸಿ.ಎ. – ಇಂಟರ್ ಮೀಡಿಯಟ್’ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಗ್ರೂಪ್-1 ವಿಭಾಗದಲ್ಲಿ 34.78% ಫಲಿತಾಂಶವನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಾದ ಸುಷ್ಮಾ ಎನ್, ಅನುಷಾ ಐತಾಳ್, ಭರತ್ ಹೆಗ್ಡೆ, ಚೇತನ್ ಸಿ. ರಾವ್, ರಮ್ಯಾ ಟಿ, ಧೀರಜ್, ತಾರಾ, ಪವಿತ್ರ ವಿ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಗ್ರೂಪ್-2 ವಿಭಾಗದಲ್ಲಿ 68.42% ಫಲಿತಾಂಶವನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳಾದ ನಿಶ್ಚಿತಾ ಜಿ. ಕೆ, ಸಂಗೀತಾ, ದರ್ಶನ್, ಸೌಂದರ್ಯ ಮಟ್ಟೂರ್, ಸುಷ್ಮಾ ಎನ್, ತೇಜಸ್, ಪ್ರಸಾದ್, ದೀಕ್ಷಾ, ಅನಿತಾ, ರಮ್ಯಾ,
ಮೂಡುಬಿದಿರೆ: ಔಷಧಿ ಉದ್ಯಾನವನ ನಿರ್ಮಾಣ
ಮೂಡುಬಿದಿರೆ: ಪೇಟೆಯ ಜ್ಯೋತಿನಗರ ಸಮೀಪ ಕೈಕಂಬದ ರೋಟರಿ ಮುನ್ಸಿಪಾಲ್ ಪಾರ್ಕ್‍ನಲ್ಲಿ ಮೂಡುಬಿದಿರೆ ಪುರಸಭೆ, ರೋಟರಿ ಕ್ಲಬ್ ಮೂಡುಬಿದಿರೆ, ಆಳ್ವಾಸ್ ಕಾಲೇಜಿನ ಎನ್‍ಸಿಸಿ ವಿಭಾಗದ ವತಿಯಿಂದ ಔಷಧೀ ಸಸಿಗಳನ್ನು ನೆಡುವ ಮೂಲಕ ಔಷಧಿ ಉದ್ಯಾನವನ ಶನಿವಾರ ನಿರ್ಮಾಣ ಮಾಡಲಾಯಿತು. 67 ಔಷಧಿ ತಳಿಯ 200 ಅಧಿಕ ಸಸಿಗಳನ್ನು ನೆಡಲಾಯಿತು. ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಎಸ್. ಮಾತನಾಡಿ, ಜನರಿಗೆ ಶುದ್ಧ ಗಾಳಿ ಹಾಗೂ ಔಷಧೀಯ ತಳಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದೇವೆ. ಆಳ್ವಾಸ್ ಶಿಕ್ಷಣ
ಆಳ್ವಾಸ್ ಪಿಯು ಕಾಲೇಜಿನಲ್ಲಿ ಸ್ಕೌಟ್ಸ್, ಗೈಡ್ಸ್ ಉದ್ಘಾಟನೆ
ಮೂಡುಬಿದಿರೆ: ಜಗತ್ತಿನ 216ಕ್ಕೂ ಅಧಿಕ ದೇಶಗಳಲ್ಲಿ ಸೇವಾ ಚಟುವಟಿಕೆಯಿಂದ ಗುರುತಿಸಿಕೊಂಡಿರುವ ಸ್ಕೌಟ್ಸ್ ಹಾಗೂ ಗೈಡ್ಸ್ ಸೇವಾ ಮನೋಭಾವ ಹಾಗೂ ಉತ್ತಮ ವ್ಯಕ್ತಿತ್ವವನ್ನು ತಮ್ಮ ಸದಸ್ಯರಲ್ಲಿ ಮೂಡಿಸುತ್ತಿದೆ. ಜೀವನದ ಶಿಕ್ಷಣ, ಜೀವನದ ಕೌಶಲವನ್ನು ಈ ಸಂಸ್ಥೆಯಿಂದ ಸಿಗುತ್ತಿದೆ ಎಂದು ಸ್ಕೌಟ್ ಹಾಗೂ ಗೈಡ್ಸ್ ಮೂಡುಬಿದಿರೆ ವಲಯ ಕಾರ್ಯದರ್ಶಿ ವಸಂತ ದೇವಾಡಿಗ ಹೇಳಿದರು. ಆಳ್ವಾಸ್ ಪಿಯು ಕಾಲೇಜಿನಲ್ಲಿ ಸ್ಕೌಟ್ಸ್ ಹಾಗೂ ಗೈಡ್ಸ್ ಘಟಕವನ್ನು ಶನಿವಾರ ವಿದ್ಯಾಗಿರಿಯ ಶಿವರಾಮ ಕಾರಂತ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ
ಸಂಸ್ಕೃತಿಯ ಪ್ರತಿಬಿಂಬ ಸಂಸ್ಕೃತ
ವಿದ್ಯಾಗಿರಿ: ಸಂಸ್ಕೃತ ಬಾಷೆಯು ಎಲ್ಲಾ ಭಾಷೆಗಳಿಗೆ ಮಾತೃ ಸ್ಥಾನದಲ್ಲಿ ನಿಲ್ಲಬಲ್ಲ ಶ್ರೇಷ್ಠತೆಯನ್ನು ಹೊಂದಿರುವ ಭಾಷೆಯಾಗಿದೆ ಎಂದು ಕಟೀಲ್ ಅನುವಂಶಿಕ ಅರ್ಚಕರಾದ ಕಮಾಲದೇವಿ ಅಸ್ರಣ್ಣರು ಹೇಳಿದರು. ಆಳ್ವಾಸ್ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಅಧ್ಯಯನ ಕೇಂದ್ರ ಆಯೋಜಿಸಲಾಗಿದ್ದ ‘ಸಂಸ್ಕೃತ’ ಪರ್ವ 2019- ಅಸ್ಮಾಕಮ್ ಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಭಾಷೆಯನ್ನು ಸಂಸ್ಕೃತದೊಂದಿಗೆ ತುಲಾನಾತ್ಮಕವಾಗಿ ಅದ್ಯಯನ ಮಾಡಿದರೆ ಪ್ರತಿ ಭಾಷೆಯ ಮೂಲ ಸಂಸ್ಕೃತವೆಂದು ತಿಳಿಯುತ್ತದೆ. ಸಂಸ್ಕೃತ ಎಂಬ ಪದ ಸಂಮ್ಯಕ್ ಹಾಗೂ ಕೃತಂ ಎಂಬ ಎರಡು ಪದಗಳಿಂದ ಬಂದಿದ್ದು, ಸರಿಯಾಗಿ