News & Events
ಆಳ್ವಾಸ್‍ನಲ್ಲಿ ಬೂಟ್ ಕ್ಯಾಂಪ್-ಉಪನ್ಯಾಸ ಸರಣಿ
ಮೂಡುಬಿದಿರೆ: ಅಕ್ಕಿ ಹಾಗೂ ಗೋಧಿ ದೇಶದ ಪ್ರಮುಖ ಬೆಳೆಯಾಗಿದ್ದು, ಬೇಳೆ ಕಾಳುಗಳು ಉತ್ಪಾದನೆ ಅತ್ಯಧಿಕ ಪ್ರಮಾಣದಲ್ಲಿದೆ. ನಮ್ಮ ದೇಶದಲ್ಲಿ ಖನಿಜ ಹಾಗೂ ಪೋಷಕಾಂಶಗಳ ಕೊರತೆಯಿಂದಾಗಿ ಅತ್ಯಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಅಂಶಗಳು ತರಕಾರಿಗಳು ಹಾಗೂ ಹಣ್ಣುಗಳಲ್ಲಿ ಒಳಗೊಂಡಿರುವುದರಿಂದ ದಿನಕ್ಕೆ 300ಗ್ರಾಂ ತರಕಾರಿ ಹಾಗೂ 150 ಗ್ರಾಂ ಹಣ್ಣನ್ನು ಸೇವಿಸುವುದು ಮಾನವನ ದೈನಂದಿನ ಚಟುವಟಿಕೆಗೆ ಉಪಯುಕ್ತ. ಆಗಲೇ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಹೇಳಿದರು.
ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಆಳ್ವಾಸ್ ಪಿಯು ಕಾಲೇಜಿಗೆ ಅವಳಿ ಪ್ರಶಸ್ತಿ
ಮೂಡುಬಿದಿರೆ: ಇಲ್ಲಿನ ಹೋಲಿ ರೋಜಾರಿ ಪದವಿಪೂರ್ವ ಕಾಲೇಜು ಶುಕ್ರವಾರ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಆಳ್ವಾಸ್ ಬಾಲಕರ ತಂಡ ಪರಿಜ್ಞಾನ ಪಿ.ಯು. ಕಾಲೇಜು, ಸೋಮೇಶ್ವರ ತಂಡವನ್ನು. 26-05 ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಆಳ್ವಾಸ್ ಬಾಲಕಿಯರ ತಂಡ, ಪರಿಜ್ಞಾನ ಪದವಿಪೂರ್ವ ಕಾಲೇಜನ್ನು 18-02 ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಖೋ-ಖೋ ಪಂದ್ಯಾಟ ಆಳ್ವಾಸ್‍ಗೆ 12 ಬಾರಿ ಅವಳಿ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಶುಕ್ರವಾರ ವಿದ್ಯಾಗಿರಿಯ ಪ್ಯಾಲೇಸ್ ಮೈದಾನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಮಂಗಳೂರು ನಗರವನ್ನು ಪ್ರತಿನಿಧಿಸಿದ ಕಪಿತಾನಿಯೋ ಪ.ಪೂ. ಕಾಲೇಜನ್ನು 1 ಇನ್ನಿಂಗ್ಸ್ ಹಾಗೂ 12 ಅಂಕಗಳಿಂದ ಸೋಲಿಸಿ 12ನೇ ಬಾರಿಗೆ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಪುತ್ತೂರನ್ನು ಪ್ರತಿನಿಧಿಸಿದ ವಿವೇಕಾನಂದ ಪ.ಪೂ. ಕಾಲೇಜು
“ಸಮಾಜದ ಬೆಳವಣಿಗೆಯಲ್ಲಿ ಯುವಜನತೆಯ ಪಾತ್ರ ಬಹುಮುಖ್ಯ”: ಅಕ್ಷಯ್ ಕೆ ಜೈನ್
ವಿದ್ಯಾಗಿರಿ: ಯುವಜನತೆ ಸಮಾಜೋಪಯೋಗಿ ಕೆಲಸವನ್ನು ಮಾಡುತ್ತೇನೆ ಎಂಬ ಗುರಿಯನ್ನಿಟ್ಟುಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬೆಳವಣಿಗೆ ಸಾಧ್ಯ ಎಂದು ಉದ್ಯಮಿ ಅಕ್ಷಯ್ ಕೆ ಜೈನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಶ್ರಮವಹಿಸಿವುದು, ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಯುವಜನತೆ ಮನಸ್ಸು ಮಾಡಿದರೆ ಜಾತಿ ಭೇದವೆಂಬ ಚೌಕಟ್ಟಿನಿಂದ ಹೊರಬಂದು ಮಾನವೀಯತೆಯ ಹಾದಿಯಲ್ಲಿ ನಡೆಯಬಹುದು. ನಾವು ಕಟ್ಟುವ ತೆರಿಗೆ ಸಮಾಜಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳವುದು ನಮ್ಮ ಕರ್ತವ್ಯ. ಅಲ್ಲದೆ ಮೂಡುಬಿದಿರೆ ನಗರದಲ್ಲಿ
ಆಳ್ವಾಸ್‍ನಲ್ಲಿ ‘ತುಳು ರಂಗ್’ ಸಂಭ್ರಮ
ವಿದ್ಯಾಗಿರಿ: ಎಲ್ಲಿ ತುಳುವರು ಇದ್ದಾರೋ ಅಲ್ಲಿ ತುಳು ಸಂಸ್ಕøತಿ ಆಚರಣೆಯಲ್ಲಿದೆ ಎಂದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಅಧ್ಯಯನ ಕೇಂದ್ರ ಆಯೋಜಿಸಲಾಗಿದ್ದ “ಸಂಸ್ಕøತಿದ ಒರಿಪು ಬುಳೆಚ್ಚಿಲ್ ಗಾದ್” ಎಂಬ ಉದ್ದೇಶವನ್ನು ಇಟ್ಟುಕೊಂಡು ನಡೆದ ತುಳು ರಂಗ್ 2019 ಕಾರ್ಯಕ್ರಮವನ್ನು ಮೊಸರು ಕಡಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ನಾಡಿನಲ್ಲಿ ಬೇರೆ ಬೇರೆ ಬಾಷೆಯ ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ತುಳು ಸಾಹಿತ್ಯ ಅಕಾಡೆಮಿ
ಪ್ರೊ. ಹರೀಶ್ ಟಿ. ಜಿ. ಬರೆದ ಹುಲಿಕಡ್ಜಿಳ ಕಥಾ ಸಂಕಲನ ಲೋಕಾರ್ಪಣೆ
ಮೂಡುಬಿದಿರೆ: “ಕಥೆ ಓದುಗರನ್ನು ಒಳಗೊಳ್ಳಬೇಕಾದರೆ, ಬರಹಗಾರ ಧ್ಯಾನ ಮಾಡಬೇಕಾಗುತ್ತದೆ” ಎಂದು ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಗಣಪತಿ ಹೇಳಿದರು. ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಪ್ರೊ. ಹರೀಶ ಟಿ. ಜಿ. ಯವರ ‘ಹುಲಿಕಡ್ಜಿಳ’ ಕಥಾ ಸಂಕಲನವನ್ನು ಲೋಕಾರ್ಪಣೆಮಾಡಿ ಮಾತನಾಡಿದ ಅವರು, “ತೀರ್ಥಹಳ್ಳಿ ಸಾಹಿತ್ಯಕ್ಕೆ ಹೆಸರುವಾಸಿಯಾದ ತಾಣ. ಒಂದು ಬಗೆಗಿನ ಶಕ್ತಿ ಅಲ್ಲಿ ಇದೆ. ತೀರ್ಥಹಳ್ಳಿಯಲ್ಲಿ ಹುಟ್ಟಿಬೆಳೆದ ಹರೀಶ್ ಅಲ್ಲಿಯ ಸಮಾಜವನ್ನು ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ತೇಜಸ್ವಿಯವರ ಬರವಣಿಗೆಯ ಛಾಪು ಇವರಲ್ಲಿದೆ. ಆಧುನಿಕ
‘ರಾಷ್ಟ್ರೀಯ ಕ್ರೀಡಾ ದಿನ’ದ ಆಚರಣೆ
ವಿದ್ಯಾಗಿರಿ: ಕ್ರೀಡೆಯಲ್ಲಿ ಶ್ರದ್ಧೆಯಿಂದ ಮುಂದುವರೆದಾಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ದರ್ಜೆಗೆ ಏರಲು ಸಾಧ್ಯ. ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಕೆ.ವಿ ಶೆಣೈ ತಿಳಿಸಿದರು. ಆಳ್ವಾಸ್ ಕಾಲೇಜಿನ ಪುಟ್ಟಣ್ಣ ಕಣಗಾಲ್ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಕ್ರೀಡಾ ದಿನ’ದ ವಿಶÉೀಷವಾಗಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ದುಡಿಮೆ, ವೇತನ ಇವೆಲ್ಲದರ ಜೊತೆಗೆ ಪ್ರಮಾಣ ಪತ್ರವು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಪುಸ್ತಕ
ಜಿಲ್ಲಾಮಟ್ಟದ ಯೋಗಾಸನ ಸ್ವರ್ಧೆ
* ಮೂಡುಬಿದಿರೆ ತಾಲೂಕಿಗೆ ಸಮಗ್ರ ಪ್ರಶಸ್ತಿ * ಆಳ್ವಾಸ್ ಯೋಗಪಟುಗಳ ಸಾಧನೆ ಮೂಡುಬಿದಿರೆ: ಬೆಳುವಾಯಿ ಮೈನ್ ಕೆಸರುಗದ್ದೆ ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಯೋಗಾಸನ ಸ್ವರ್ಧೆಯಲ್ಲಿ 17 ವರ್ಷದ ಬಾಲಕ, ಬಾಲಕಿಯರ ವಯೋಮಿತಿಯಲ್ಲಿ ಮೂಡಬಿದಿರೆ ತಾಲೂಕು ಸಮಗ್ರ ತಂಡ ಪ್ರಶ್ತಸಿಯನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಆಳ್ವಾಸ್ ಸಾಧನೆ ಹಾಸನದಲ್ಲಿ ನಡೆಯುವ ವಿಭಾಗಮಟ್ಟದ ಯೋಗಾಸನ ಸ್ವರ್ಧೆಗೆ ಆಳ್ವಾಸ್
ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ 12ನೇ ಬಾರಿ ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ಮಂಗಳೂರು ವಿ.ವಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಸ್ಟ್ರೀಟ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನ್ ಪ್ರಶಸ್ತಿ ಪಡೆದಿದೆ. ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ 33 ಪದವಿ ಕಾಲೇಜುಗಳ 150 ಪುರುಷ ಮತ್ತು 78 ಮಹಿಳಾ ಕುಸ್ತಿಪಟುಗಳು ಈ ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ವಿಭಾಗದಲ್ಲಿ 5 ಚಿನ್ನ,
ಆಳ್ವಾಸ್ ನುಡಿಸಿರಿ ವಿರಾಸತ್ ಮುಂದೂಡಿಕೆ: ಡಾ.ಎಂ ಮೋಹನ ಆಳ್ವ
ಮೂಡುಬಿದಿರೆ: ರಾಜ್ಯದಲ್ಲಿ ಉಂಟಾಗಿರುವ ನೆರೆಹಾವಳಿ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 15ರಿಂದ 17ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದ್ದ `ಆಳ್ವಾಸ್ ನುಡಿಸಿರಿ-ವಿರಾಸತ್’ ಸಮ್ಮೇಳನಗಳನ್ನು ಮುಂದೂಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.