News & Events
“ವಿದ್ಯಾರ್ಥಿಗಳಿಗೆ ಉತ್ತಮ ಗುರಿ ಅತ್ಯಗತ್ಯ”: ಡಾ.ಎಮ್ ಮೋಹನ್ ಆಳ್ವಾ
ವಿದ್ಯಾಗಿರಿ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ ಭವಿಷ್ಯವನ್ನು ಸಂತೋಷದಿಂದ ಕಳೆಯಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ತಿಳಿಸಿದರು. ಅವರು ಆಳ್ವಾಸ್ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಿಎ ಫೌಂಡೆಶನ್ ಮತ್ತು ಐಪಿಸಿಯ ಒರಿಯೆಂಟೆಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸದಲ್ಲಿ ಲಾಭ ನಷ್ಟವನ್ನು ನೋಡದೆ ಫಲಿತಾಂಶದ ಕಡೆಗೆ ಗಮನವಿರಬೇಕು. ಅಲ್ಲದೆ ನಮಗೆ ಅಗತ್ಯ ಇರುವ ವಿಷಯಗಳನ್ನು ಅಧ್ಯಯನ ಮಾಡುವುದು ತುಂಬಾ ಫಲಪ್ರದವಾಗುತ್ತದೆ. ಪ್ರತಿಯೊಬ್ಬರು ಬದುಕುವ ರೀತಿ ವಿಭಿನ್ನ,
‘ಡಿಜಿಟಲ್ ಮಾರ್ಕೆಟಿಂಗ್’ ಉಪನ್ಯಾಸ
ವಿದ್ಯಾಗಿರಿ:ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಜಾಲತಾಣಗಳನ್ನು ಅವಿರತವಾಗಿ ಬಳಸುತ್ತಿದ್ದಾನೆ. ಪ್ರತಿಯೊಂದು ಆ್ಯಪ್‍ಗಳಿಗೆ ಅದರದೇ ಆದ ಬಳಕೆದಾರರಿರುತ್ತಾರೆ. ಒಟ್ಟಾರೆಯಾಗಿ ವಿಶ್ವದಲ್ಲಿ 2.8 ಮಿಲಿಯನ್ ಆ್ಯಪ್‍ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ ಎಂದು ‘ಡಿಜಿಟಲ್ ತೆನಾಲಿ’ ವೆಬ್‍ಸೈಟ್‍ನ ಸ್ಥಾಪಕ ಮತ್ತು ಸಿ.ಇ.ಓ… ಪೂಜೇಶ್. ಜಿ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಡೆದ ‘ಡಿಜಿಟಲ್ ಮಾರ್ಕೆಟಿಂಗ್’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಆ್ಯಪ್‍ಗಳನ್ನು ಬಳಸುವ ವಿಧಾನಗಳು ವಿಭಿನ್ನವಾಗಿರುತ್ತದೆ. ಅವುಗಳನ್ನು ಅರಿತು ಬಳಸುವುದು ಒಳಿತು ಇಲ್ಲದಿದ್ದಲಿ ತನ್ನನ್ನು
ಮಂಗಳೂರು ಗ್ರಾಮಾಂತರ ತಾಲೂಕು ಖೋ ಖೋ ಪಂದ್ಯಾಟ ಆಳ್ವಾಸ್ ಪಿಯು ಕಾಲೇಜಿಗೆ ಅವಳಿ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ವಿದ್ಯಾಗಿರಿಯ ಪ್ಯಾಲೇಸ್ ಮೈದಾನದಲ್ಲಿ ನಡೆದ ಮಂಗಳೂರು ಗ್ರಾಮಾಂತರ ತಾಲೂಕು ಖೋ ಖೋ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಪಿಯು ಕಾಲೇಜು ಪ್ರಶಸ್ತಿ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಸೋಮೇಶ್ವರದ ಪರಿಜ್ಞಾನ ಪಿಯು ಪದವಿಪೂರ್ವ ಕಾಲೇಜು ತಂಡವನ್ನು ಸೋಲಿಸಿ ಹಾಗೂ ಬಾಲಕರ ವಿಭಾಗದಲ್ಲಿ ಕಟೀಲು ಕಾಲೇಜು ತಂಡವನ್ನು ಸೋಲಿಸಿ ಆಳ್ವಾಸ್ ಪ್ರಶಸ್ತಿ ಪಡೆಯಿತು. ತಾಲೂಕು ಕ್ರೀಡಾ ಸಂಯೋಜಕ ವಿಜಯ ಕುಮಾರ್ ಶೆಟ್ಟಿ, ದೈಹಿಕ
ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಪುರುಷರ ವಿಭಾಗದಲ್ಲಿ 17ನೇ ಬಾರಿಮಹಿಳಾ ವಿಭಾಗದಲ್ಲಿ 16ನೇ ಬಾರಿ ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ಮಂಗಳೂರು ವಿ.ವಿ ಹಾಗೂ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ವರ್ಧೆಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ 23 ಪದವಿ ಕಾಲೇಜುಗಳ 194 ಪುರುಷ ಮತ್ತು 116 ಮಹಿಳಾ ಕ್ರೀಡಾಳುಗಳು ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ವಿಭಾಗದಲ್ಲಿ 9 ಹಾಗೂ ಮಹಿಳೆಯರ ವಿಭಾಗದಲ್ಲಿ
ವಿದ್ಯಾರ್ಥಿನಿಯರಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ
ಮೂಡಬಿದಿರೆ: ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗಾಗಿ ಮೂರು ಸಾವಿರಕ್ಕೂ ಅಧಿಕ ಕಾನೂನುಗಳಿದ್ದು, ಇದರ ಸದುಪಯೋಗವನ್ನು ಮಹಿಳೆಯರು ಹಾಗೂ ಮಕ್ಕಳು ಪಡೆಯಬೇಕು ಎಂದು ವಕೀಲೆ ಹಾಗೂ ನೋಟರಿ ಶ್ವೇತಾ ಕೆ ತಿಳಿಸಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಯರಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ ಬಡವರಿಗೆ ಉಚಿತ ಕಾನೂನಿನ ವ್ಯವಸ್ಥೆಯಿದ್ದು, ಇದರ ಪ್ರಯೋಜನವನ್ನು ಅಗತ್ಯವಿದ್ದವರು ಪಡೆಯಬಹುದು ಎಂದು ತಿಳಿಸಿದರು. ಬಾಲ್ಯ ವಿವಾಹ ತಡೆ ಕಾನೂನು, ಪೋಕ್ಸೋ ಕಾನೂನು, ವರದಕ್ಷಿಣೆ
‘ಪ್ರಭಾವಶಾಲಿ ಸಂವಹನ ಇಲ್ಲದೆ ಮಾರುಕಟ್ಟೆ ಕ್ಷೇತ್ರದ ಕಾರ್ಯ ತಟಸ್ಥ : ಚಂಗಪ್ಪ ಎ.ಡಿ
ವಿದ್ಯಾಗಿರಿ: ಸಂವಹನ ಎಂಬುದು ವ್ಯಕ್ತಿ ಸಮೂಹಗಳ ನಡುವಿನ ಭಾಂದವ್ಯ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಅಂಶವು ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಬೆಂಗಳೂರಿನ ಆದ್ಯ ಕಮ್ಯೂನಿಕೇಶನ ಬಿಸಿನೆಸ್ ಹೆಡ್ ಚಂಗಪ್ಪ ಎ.ಡಿ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದವತಿಯಿಂದ ಆಯೋಜಿಸಲಾಗಿದ್ದ ‘ಪ್ರಭಾವಶಾಲಿ ಮಾರುಕಟ್ಟೆ ಸಂವಹನ ಮತ್ತು ಕಲಿಕೆ’’ ಎಂಬ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಂವಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿ, ‘ಪ್ರಭಾವಶಾಲಿ ಸಂವಹನ ಇಲ್ಲದೆ ಮಾರುಕಟ್ಟೆ ಕ್ಷೇತ್ರದ ಕಾರ್ಯ ತಟಸ್ಥ ಎಂದು
ವಿದ್ಯಾರ್ಥಿಗಳು ವಿಭಿನ್ನ ಕೌಶಲ್ಯವನ್ನು ಹೊಂದಿರಬೇಕು: ಟಿ ವಿ ರಾಮಚಂದ್ರ
ಮಿಜಾರು: ಪ್ರಸ್ತುತ ವಿದ್ಯಮಾನದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ವಿಮರ್ಶಿಸಲು ಕಲಿಯಬೇಕು ಎಂದು ಐಐಎಸ್‍ಸಿಯ ವಿಜ್ಞಾನಿ ಮತ್ತು ಮ್ಯಾನ್ ಆಫ್ ಬೆಂಗಳೂರು 2018 ಪ್ರಶಸ್ತಿ ಪಡೆದ ಡಾ. ಟಿ ವಿ ರಾಮಚಂದ್ರ ಅವರು ಹೇಳಿದರು. ಆಳ್ವಾಸ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಗಷ್ಟ್ 22 ರಿಂದ 25 ರವರೆ ಆಯೋಜಿಸಲಾಗಿದ್ದ ಫ್ರೀ ಆ್ಯಂಡ್ ಓಪನ್ ಸೋರ್ಸ್ ಜೀಯೊಸ್ಪೇಷಿಯಲ್ ಟೆಕ್ನಾಲಜೀಸ್ ಫಾರ್ ನ್ಯಾಚುರಲ್ ರಿಸೋರ್ಸ್‍ಸ್ ಮ್ಯಾನೇಜೆಮೆಂಟ್ ತರಬೆತಿ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು. ಆಧುನಿಕಯುಗದಲ್ಲಿ ಪ್ರತಿಯೊಬ್ಬ ಯುವಜನತೆಯು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದು
ರಂಗಕಲಾ ಸ್ಪರ್ಧೆ-ರಂಗೋತ್ಸವ 2019
ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಕುಂದಾಪುರ ಭಂಡಾರ್‍ಕರ್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ `ರಂಗಕಲಾ ಸ್ಪರ್ಧೆ-ರಂಗೋತ್ಸವ 2019’ಯಲ್ಲಿ ಆಳ್ವಾಸ್ ಕಾಲೇಜು ಸತತವಾಗಿ 12ನೇ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ವಿದ್ಯಾರ್ಥಿಗಳಿಗಾಗಿ ಅನೇಕ ರಂಗ ಕಲಾ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಮೈಮ್ ಪ್ರದರ್ಶನದಲ್ಲಿ ಪ್ರಥಮ, ಮಿಮಿಕ್ರಿಯಲ್ಲಿ ದ್ವಿತೀಯ ಬಹುಮಾನ, ಕಿರು ಪ್ರಹಸನದಲ್ಲಿ ದ್ವಿತೀಯ ಹಾಗೂ ನಾಟಕಕ್ಕೆ ತೃತೀಯ ಬಹುಮಾನವನ್ನು ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‍ರಾಮ್
ಆಳ್ವಾಸ್ ಲಲಿತಾ ಕಲಾ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್
ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಕೆನರಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಲಲಿತಾ ಕಲಾ ಸ್ಪರ್ಧೆ ‘ಚಿತ್ತಾರ 2019’ ರಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಫರ್ಧೆ, ಕೊಲಾಜ್, ಭಿತ್ತಿ ಪತ್ರರಚನೆ, ಆವೆ ಮಣ್ಣಿನ ಕಲಾಕೃತಿ ರಚನೆ, ವ್ಯಂಗ್ಯ ಚಿತ್ರರಚನೆ, ರಂಗೋಲಿ, ಸ್ಥಳದಲ್ಲಿ ಛಾಯಾ ಚಿತ್ರತೆಗೆಯುವ ಸ್ಪರ್ಧೆಗಳು ಒಳಗೊಂಡಿದ್ದವು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಆವೆ ಮಣ್ಣಿನ ಕಲಾಕೃತಿ ರಚನೆಯಲ್ಲಿ ಪ್ರಥಮ, ರಂಗೋಲಿ
ರಾಷ್ಟ್ರಮಟ್ಟದ ಅಥ್ಲೇಟಿಕ್ ಯೋಗಾಸನದಲ್ಲಿ ಪ್ರಥಮ
ಮೂಡಬಿದಿರೆ: ಎಸ್.ಜಿ.ಎಸ್ ಅಂತರಾಷ್ಟ್ರೀಯ ಯೋಗ ಫೌಂಡೇಷನ್ ವತಿಯಿಂದ ಅಗಸ್ಟ್ 18ರಂದು ಬೇಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾದ 5ನೇ ರಾಷ್ಟ್ರಮಟ್ಟದ ಅಥ್ಲೇಟಿಕ್ ಯೋಗಾಸನ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿ ಪ್ರಶಾಂತ್ ಬಿ ಪ್ರಥಮ ಸ್ಥಾನವನ್ನು ಗಳಿಸಿ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೂ ಮಲೇಷ್ಯಾದ ಕೌಲಾಲಾಂಪುರ್‍ನಲ್ಲಿ ಅಕ್ಟೋಬರ್ 13-15ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಚ್ಯಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಅಳ್ವ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಇವರ ಸಾಧನೆಗೆ