News & Events
ಮಾಹಿತಿ ಕಾರ್ಯಗಾರ
ವಿದ್ಯಾಗಿರಿ: ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಅನೇಕ ಬದಲಾವಣೆ ಆಗುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಪರ್ಧಾತ್ಮಕವಾಗಲಿದೆ. ಹಾಗಾಗಿ ಪ್ರತಿಯೊಬ್ಬರು ಎಲ್ಲಾ ವಿಷಯದಲ್ಲಿ ಪರಿಣಿತರಾಗಿರಬೇಕು ಎಂದು ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಕೆ.ಎಲ್.ಇ ಯ ಎಸ್.ನಿಜಲಿಂಗಪ್ಪ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಸಾತ್ವಿಕ್ ಹೇಳಿದರು. ಆಳ್ವಾಸ್ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಸಂಶೋಧನೆಯ ಕುರಿತು ನಡೆಸಲಾದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಸಂಶೋಧನೆಗೆ ಬೇಕಾದ ಪ್ರಶ್ನಾವಳಿಯನ್ನು ಯಾವ ರೀತಿಯಾಗಿ ತಯಾರಿಸುವುದು ಮತ್ತು ಅದನ್ನು ಪರಿಹರಿಸುವ ಮಾರ್ಗಗಳನ್ನು ತಿಳಿದುಕೊಂಡಿರಬೇಕು. ಆಗ
ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಪಾಲಕರ ಸಭೆ
ಮೂಡುಬಿದಿರೆ: ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ತ್ವದ್ದು. ಹೊರಗಿನ ಆಕರ್ಷಣೆಗೆ ಮತ್ತು ಒತ್ತಡಗಳಿಗೆ ಒಳಗಾಗುತ್ತಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಶಿಸ್ತಿನಡಿ ತರಬೇಕಾದರೆ ಕಾಲೇಜು ಮತ್ತು ಮನೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಯ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಶೈಕ್ಷಣಿಕಾವಧಿಯಲ್ಲಿಯೇ ಪ್ರಮುಖವಾದ ಘಟ್ಟ. ಈ
ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಸಾಧನೆ – ಆಳ್ವಾಸ್‍ನ ರಾಘುವೇಂದ್ರ ಪ್ರಸಾದ್‍ಗೆ 34ನೇ RANK
ಒಟ್ಟು 9 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಮೂಡುಬಿದಿರೆ: ಮೇ 2019 ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಪ್ರಸಾದ್ ಕೆ. ಜಿ. ದೇಶದಲ್ಲಿಯೇ 34 ನೇ ರ್ಯಾಂಕ್ ಗಳಿಸಿದ್ದಾರೆ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ರಾಘುವೇಂದ್ರ ಸಹಿತ ಒಟ್ಟು 9 ಮಂದಿ ವಿದ್ಯಾರ್ಥಿಗಳು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ವಾಣಿಶ್ರೀ, ನಿಖಿತಾ ಗೌಡ, ಮಹಮ್ಮದ್ ನೌಫಲ್, ಸಾಹುಲ್ ಹಮೀದ್, ಕೀರ್ತನಾ ಎಮ್. ಕೆ., ಅಮಲ್ ಮ್ಯಾಥಿವ್,
ಆಳ್ವಾಸ್ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗಾಗಿ ಕೆಸರಾಟದ ಪಾಠ
ಮೂಡಬಿದಿರೆ: ಕಾರ್ಕಳದ ನಿಟ್ಟೆ ಸಮೀಪದ ಕಂಬಳಕೋಡಿ, ಪದವು ಎಂಬಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 200 ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ಶ್ಯಾಮ ಶೆಟ್ಟಿಯವರ ಗದ್ದೆಯಲ್ಲಿ ಕೆಸರಾಟದ ಪಾಠ ಇತ್ತೀಚೆಗೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಕೃಷಿ ಕೆಲಸಗಳ ಹಾಗೂ ಗ್ರಾಮೀಣ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕಾರ್ಕಳದ ಪೋಲೀಸ್ ಠಾಣಾಧಿಕಾರಿ ನಂಜ ನಾಯಕ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಜಾಲತಾಣಗಳಿಂದ ಹೊರಬಂದು ಜೀವಿಸುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ಕೆಸರುಗದ್ದೆ ಓಟ, ರಿಲೇ, ಮಾನವ ಪಿರಮಿಡ್
‘’ಅಭಿವಂದನಾ ಸಮಾರಂಭ’’
ಮೂಡಬಿದಿರೆ: ಪ್ರತಿಯೊಬ್ಬರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರಿಂದ ಆಳ್ವಾಸ್ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯಿಂದ ಉತ್ತಮ ದರ್ಜೆಯ ಫಲಿತಾಂಶ ಲಭಿಸಿತು ಎಂದು ಆಳ್ವಾಸ್ ಕಾಲೇಜಿನ ಮಾಜಿ ನ್ಯಾಕ್ ಸಂಯೋಜಕಿ ಹಾಗೂ ಜೈಪುರ ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯೂನಿಕೇಷನ್‍ನ ಹಿರಿಯ ಸಹಾಯಕ ಪ್ರಾಧ್ಯಾಪಕಿ ಡಾ ಮೌಲ್ಯ ತಿಳಿಸಿದರು. ಅವರು ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ‘’ಅಭಿವಂದನಾ ಸಮಾರಂಭ’’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಳ್ವಾಸ್ ಕಾಲೇಜು ರಾಷ್ಟ್ರೀಯ ಮೌಲ್ಯಮಾಪನ ಹಾಗೂ
ಆಳ್ವಾಸ್‍ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಡೆಪ್ಯೂಟಿ ಕಮಾಂಡೆಂಟ್ & ಚೀಫ್ ಇನ್‍ಸ್ಟ್ರಕ್ಟರ್, ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈನ ಮೇಜರ್ ಜನರಲ್ ಎ. ಅರುಣ್, ‘200 ವರ್ಷಗಳ ಕಾಲ ಬ್ರಿಟಿಷರ ಆಡಳಿತದಲ್ಲಿದ್ದ ಭಾರತವನ್ನು ತ್ಯಾಗ ಬಲಿದಾನಗಳ ಮೂಲಕ ಸ್ವತಂತ್ರಗೊಳಿಸಲಾಯಿತು. ಈ ಸಂದರ್ಭವನ್ನು ನಾವು ಸಂತೋಷದಿಂದ ಹಾಗೂ ಸಮಾಜದಲ್ಲಿನ ನಮ್ಮ ಜವಬ್ದಾರಿಯೇನೆಂದು ಅರಿತು ಆಚರಿಸಬೇಕು. ಕೇವಲ ಸೇನೆಯಲ್ಲಿದ್ದವರು ಮಾತ್ರ ದೇಶಕ್ಕೆ ಕೊಡುಗೆ ನೀಡುತ್ತಾರೆಂದಲ್ಲ. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಶಿಕ್ಷಕನಾಗಿ, ರೋಗ ಪರಿಹಾರಕ
ಪರಿಸರ ನೂತನ ತಂತ್ರಜ್ಞಾನಗಳಿಗೆ ಪ್ರೇರಕ
ಮಿಜಾರು:ತಂತ್ರಜ್ಞಾನಗಳು ಆಧುನಿಕ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಅವುಗಳನ್ನು ಅರಿತು ಉತ್ತಮ ರೀತಿಯಲ್ಲಿ ಉಪಯೋಗಿಸುವುದು ಅಗತ್ಯ ಎಂದು ಬೆಂಗಳೂರು ಜವಹಾರ್‍ಲಾಲ್ ನೆಹರು ತಾರಲಯದ ಸಹನಿರ್ದೇಶಕ ಎಚ್. ಆರ್ ಮಧುಸೂದನ್ ಹೇಳಿದರು. ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ‘ಆಳ್ವಾಸ್ ಬೂಟ್ ಕ್ಯಾಂಪ್-2019’ ಇದರ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಕೃತಿಯಲ್ಲಿನ ಜೈವಿಕ ಅಂಶಗಳಿಂದ ಸ್ಫೂರ್ತಿಗೊಂಡು ತಂತ್ರಜ್ಞಾನಗಳು ಹಾಗೂ ವಸ್ತುಗಳು ರೂಪುಗೊಂಡಿವೆ ಎಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು. ಜೀವಶಾಸ್ತ್ರದಲ್ಲಿ ನ್ಯಾನೋ ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಜೀವಶಾಸ್ತ್ರದಲ್ಲಿನ
ಆಳ್ವಾಸ್‍ನಲ್ಲಿ ಅಂತರಾಷ್ಟ್ರೀಯ ಕಾರ್ಯಾಗಾರ
ವಿದ್ಯಾಗಿರಿ: ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು. ಸಮಾಜದಲ್ಲಿ ತರಬೇತುದಾರರಾಗಿ, ಪ್ರೇರೇಪಕರಾಗಿ, ಪ್ರೋತ್ಸಾಹಕರಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ದುಬೈ ದಿ ಇಂಡಿಯನ್ ಹೈಸ್ಕೂಲ್ ಕೌನ್ಸಿಲರ್‍ನ ಮುಖ್ಯಸ್ಥರಾದ ಹೆಲ್ವಿನ್ ಬರ್ಬೋಜಾ ಹೇಳಿದರು. ಅವರು ಆಳ್ವಾಸ್ ಸಮಾಜಕಾರ್ಯ ವಿಭಾಗದ ವತಿಯಿಂದ ನಡೆದ ಒಂದು ದಿನದ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ `ಸ್ಕೂಲ್ ಸೋಶಿಯಲ್ ವರ್ಕ್’ ನ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಕಲಿಕೆಗೆ ಮಿತಿ ಇಲ್ಲ. ಅನುಭವಗಳ ಮೂಲಕ ಅನೇಕ ವಿಷಯಗಳನ್ನು ಕಲಿಯಬೇಕು ಆಗಲೇ ಜೀವನದ ಗುರಿಯನ್ನು
`ಆನಿಮೇಶನ್ ವಿಭಾಗದ ಅವಕಾಶಗಳು ಹಾಗೂ ಸವಾಲುಗಳು ಉಪನ್ಯಾಸ’
ವಿದ್ಯಾಗಿರಿ: ಬದಲಾವಣೆ ಜಗದ ಸಹಜ ನಿಯಮ, ಆ ಬದಲಾವಣೆಯನ್ನು ಒಪ್ಪಿಕೊಳ್ಳದೇ ಇದ್ದರೆ ನಾವು ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಜಗತ್ತಿನ ತಂತ್ರಜ್ಞಾನಗಳಲ್ಲಿ ಆಗುತ್ತಿರುವ ಬದಲಾವಣೆಗೆ ಒಗ್ಗಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ದುಬೈ ಹೈಯರ್ ಕಾಲೇಜಸ್ ಆಫ್ ಟೆಕ್ನಾಲಜಿಯ ಉಪನ್ಯಾಸಕರಾದ ಡಾ. ಶ್ರೀಶಾ ಎಂ. ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ `ಆನಿಮೇಶನ್ ವಿಭಾಗದ ಅವಕಾಶಗಳು ಹಾಗೂ ಸವಾಲುಗಳು` ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಮಾಹಿತಿ ಕಾರ್ಯಗಾರ
ವಿದ್ಯಾಗಿರಿ: ಸಿನಿಮಾ ನಿರ್ಮಾಣ ಎಂಬುದು ಒಂದು ವ್ಯವಸ್ಥಿತ ಕಾರ್ಯವಾಗಿದ್ದು, ನಿರ್ದೇಶಕನಿಂದ ಹಿಡಿದು ತಾಂತ್ರಿಕ ವರ್ಗದ ಕಟ್ಟಕಡೆಯ ವ್ಯಕ್ತಿಯ ಪಾತ್ರವೂ ಮುಖ್ಯ ವಾಗಿರುತ್ತದೆ ಎಂದು ಚೆನ್ನೈ ಎಲ್.ವಿ ಪ್ರಸಾದ್ ಅಕಾಡೆಮಿಯ ಕಾರ್ಪೋರೇಟ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಮೋಹನ್‍ಕೃಷ್ಣನ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಚಿತ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಕಾರ್ಯವು ಮುಖ್ಯವಾಗಿರುತ್ತದೆ . ಆದರೆ ಸಂಕಲನಕಾರನ ಸೃಜನಶೀಲತೆಯ ಸಿನಿಮಾದ ಅಳಿವು ಉಳಿವನ್ನು ನಿರ್ಧರಿಸುತ್ತದೆ. ಸಿನಿಮಾದ ವಸ್ತು ವಿಷಯವು ಅದ್ಬುತವಾಗಿದ್ದರೆ,