News & Events
ಆಳ್ವಾಸ್‍ನಲ್ಲಿ ಸ್ತನಪಾನದ ಬಗ್ಗೆ ಜಾಗೃತಿ ಕಾರ್ಯಕ್ರಮ
ಮೂಡುಬಿದಿರೆ: ಸ್ತನಪಾನ ಮಾಡಿಸುವುದರಿಂದ ತಾಯಿಯು ತನ್ನ ಮಕ್ಕಳನ್ನು ರೋಗಗಳಿಂದ ದೂರವಿಡಬಹುದು ಎಂದು ಆಳ್ವಾಸ್‍ನ ಕಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ|| ರಮೇಶ ಹೇಳಿದರು. ಅವರು ಆಳ್ವಾಸ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ‘ಸ್ತನಪಾನ ಜಾಗೃತಿ ವಾರ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು. ಆಗ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಕಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ|| ರೇವತಿ ಭಟ್ ಮಾತನಾಡಿ, ತಾಯಿಯ ಹಾಲು
ಬ್ಲೆಡ್ ಗ್ರೂಪಿಂಗ್ ಕ್ಯಾಂಪ್
ವಿದ್ಯಾಗಿರಿ: ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಿ ಎಂದು ಆಳ್ವಾಸ್ ಆಯುರ್ವೇದ ಕಾಲೇಜಿನ ಶರೀರಕ್ರಿಯಾ ವಿಭಾಗದ ಮುಖ್ಯಸ್ಥ ಡಾ ಕೆ.ಎನ್ ರಾಜಶೇಖರ ಹೇಳಿದರು. ಆಳ್ವಾಸ್ ಕಾಲೇಜಿನ ಮೈಕ್ರೋ ಬಯಾಲಜಿ ವಿಭಾಗದಿಂದ ಆಯೋಜಿಸಲಾಗಿದ್ದ ಬ್ಲೆಡ್ ಗ್ರೂಪ್ ಕ್ಯಾಂಪ್ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪಿನ ಬಗ್ಗೆ ಅರಿತಿರಬೇಕು. ರಕ್ತದಾನ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ದಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸೈನ್ಸ್ ವಿಭಾಗದ ಡೀನ್
ಒರಿಯೆಂಟೇಷನ್ ಕಾರ್ಯಕ್ರಮ
ವಿದ್ಯಾಗಿರಿ: ನಕಾರಾತ್ಮಕ ವಿಷಯ ಹಾಗೂ ಒತ್ತಡಗಳ ನಡುವೆ ಸಕಾರಾತ್ಮಕ ವಿಚಾರಗಳನ್ನು ಅನ್ವೇಷಿಸಿ ಅವುಗಳ ಕುರಿತಾದ ಲೇಖನಗಳನ್ನು ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರಿಂದ ಪ್ರತಿಯೊಬ್ಬ ಪತ್ರಕರ್ತನೂ ತನ್ನ ಕ್ಷೇತ್ರದಲ್ಲಿ ಸಫಲನಾಗಲು ಸಾಧ್ಯ ಎಂದು ಮಂಗಳೂರಿನ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಮಹಮ್ಮದ್ ಆರಿಫ್ ಹೇಳಿದರು. ಅವರು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಸಕಾರಾತ್ಮಕ ಲೇಖನಗಳಿಗೆ ಮಾಧ್ಯಮಗಳಲ್ಲಿ ಅನೇಕ ಅವಕಾಶಗಳಿವೆ ಹಾಗೂ ಅಂತಹ ಲೇಖನಗಳನ್ನು ಪೆÇ್ರೀತ್ಸಹಿಸುವವರು ಅನೇಕರಿದ್ದಾರೆ. ಮಾಧ್ಯಮ
ನಾಯಕತ್ವ ಶಿಬಿರದ ಸಮಾರೋಪ ಸಮಾರಂಭ
ವಿದ್ಯಾಗಿರಿ: ನಾಯಕತ್ವ ಎಂಬುದು ಉತ್ತಮ ಕೌಶಲ್ಯವಾಗಿದ್ದು, ಸ್ವ-ಅಭಿವೃದ್ದಿಯ ಜೊತೆಗೆ, ಇತರರನ್ನು ಸಬಲೀಕರಣವನ್ನಾಗಿಸುವ ಶಕ್ತಿಯುತ ಸಾಧನವಾಗಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರೊ. ಕೃಷ್ಣಮೂರ್ತಿ ಹೇಳಿದರು. ಅವರು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಮೂರು ದಿನಗಳ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಉತ್ತಮ ನಾಯಕನಾಗುವುದು ಸುಲಭದ ಮಾತಲ್ಲ, ತನ್ನ ವಿಷಯದ ಕುರಿತಾದ ವಿಶೇಷ ಪ್ರೀತಿ, ತಾಳ್ಮೆ, ಹೊಂದಾಣಿಕೆಯ ಮನೋಭಾವ, ಆ ಕಾರ್ಯಕ್ಕೆ ಅಗತ್ಯವಾದ ಬದ್ದತೆ
ತುಳು ಭಾಷೆದ ಪೊರ್ಲು ತಿರಲ್ ಕಾರ್ಯಕ್ರಮ
ಮೂಡುಬಿದಿರೆ: “ಜಾಗತೀಕರಣ ಬಹುತ್ವದ ಶತ್ರು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ತುಳು ಪೀಠದ ಸಂಯೋಜಕ ಡಾ.ಬಿ.ಶಿವರಾಮ ಶೆಟ್ಟಿ ತಿಳಿಸಿದರು. ಅವರು ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ “ತುಳು ಭಾಷೆದ ಪೊರ್ಲು ತಿರಲ್” ಕಾರ್ಯಕ್ರಮದಲ್ಲಿ ಮಾತನಾಡಿದರು. “ಪ್ರದೇಶ, ಜನಾಂಗಕ್ಕೆ ತಕ್ಕಂತೆ ವೈವಿಧ್ಯ ಸಂಸ್ಕøತಿ ಮತ್ತು ಭಾಷೆ ಬೆಳೆದು ಬಂದಿದೆ. ಅವೆಲ್ಲವೂ ಉಳಿದರೆ ಮಾತ್ರ ಭಾರತದ ಸಮೃದ್ಧಿ. ಜಾಗತಿಕರಣ ಬಹುತ್ವವನ್ನು ನಾಶಮಾಡಿ ಏಕಭಾಷೆ ಮತ್ತು ಏಕ ಸಂಸ್ಕøತಿಯನ್ನು ಉಳಿಸಿ ಉಳಿದ ವೈವಿಧ್ಯಗಳನ್ನು ನಾಶಮಾಡುತ್ತದೆ. ಕುವೆಂಪು
‘ಅಚೀವರ್ಸ್ ಟಾಕ್ 2019’
ಮೂಡಬಿದಿರೆ: ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡುವಾಗ ಅಡೆತಡೆಗಳು ಸಹಜ. ಅಂತಹ ಅಡಚಣೆಗಳನ್ನು ಮೆಟ್ಟಿನಿಂತು ಜೀವನದಲ್ಲಿ ಯಶಸ್ಸನ್ನು ಹೊಂದಬೇಕು ಫೋರ್ತ್ ಫೋಕಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ವಿ ಗೌತಮ್ ನಾವಡ ತಿಳಿಸಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಅಚೀವರ್ಸ್ ಟಾಕ್ 2019’ ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ನಮ್ಮ ಬಗ್ಗೆ ಅತಿಯಾದ ಅಹಃ ಇರಬಾರದು. ಆದರೆ ಆತ್ಮಗೌರವನ್ನು ಬೆಳೆÀಸಿಕೊಂಡಿರಬೇಕು. ತಾಳ್ಮೆ, ಸಂಯಮ ನಮ್ಮ ಬಾಳಿಗೆ ಸದಾ ಸಹಕಾರಿ. ಇದೇ
ಯೋಗ ಸ್ಪರ್ಧೆ: ಆಳ್ವಾಸ್‍ನ ಶ್ವೇತಾ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮೂಡುಬಿದಿರೆ: ಗದಗದ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಟ್ಟದ ಯೋಗಾಸನ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಶ್ವೇತಾ ಭಟ್ ತೃತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ತಂಡವು ರನ್ನರ್‍ಅಪ್ ಹಾಗೂ ಪುರುಷರ ತಂಡವು ಸೆಕೆಂಡ್ ರನ್ನರ್‍ಅಪ್ ಪ್ರಶಸ್ತಿ ಪಡೆದಿವೆ. ಸ್ಪರ್ಧೆಯಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್‍ನ ಒಟ್ಟು 16 ಮಂದಿ ಭಾಗವಹಿಸಿದ್ದರು.
ಆಳ್ವಾಸ್‍ನಲ್ಲಿ ‘ಆಟಿ ಕಷಾಯ’ ವಿತರಣೆ
ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ‘’ಆಟಿ ಕಷಾಯ’’ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜ್ಯೋತಿಷಿ ಸುಧಾಕರ ತಂತ್ರಿ ಸಾಂಕೇತಿಕವಾಗಿ ಔಷಧಿಯನ್ನು ಒರ್ವ ವ್ಯಕ್ತಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಪ್ರತಿ ವರ್ಷದಂತೆ ಆಟಿ ಅಮವಾಸ್ಯೆಯ ವಿಶೇಷವಾದ, ಸರ್ವರೋಗ ನಿರೋಧಕ ಪಾರಂಪರಿಕ ದಿವ್ಯೌಷಧ, ಗುರುವಾರ ಬೆಳಿಗ್ಗೆ ಘಂಟೆ 08.30ರಿಂದ 11.00 ರತನಕ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಉಚಿತವಾಗಿ ವಿತರಿಸಲಾಯಿತು. ಆಟಿ ಕಷಾಯ ವಿತರಣೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು
ಒರಿಯೆಂಟೇಶನ್ ಕಾರ್ಯಕ್ರಮ
ಮಿಜಾರು: ಆಳ್ವಾಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಒರಿಯೆಂಟೇಶನ್ ಕಾರ್ಯಕ್ರಮವನ್ನು ಗುರುವಾರ ಎ.ಐ.ಇ.ಟಿ.ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾಂiÀರ್iಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಬಾಲವೀರರೆಡ್ಡಿ “ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಂಪೂರ್ಣ ಅವಕಾಶ ನೀಡುತ್ತಿದೆ. ಇಲ್ಲಿ ವಿದ್ಯಾರ್ಥಿಗಳ ಏಳಿಗೆಗೆ ಬೇಕಾದಂತಹ ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಸಂಶೋಧನಾಕೇಂದ್ರ, ಇಂಟರ್‍ನೆಟ್ ಸೌಲಭ್ಯ ಇದೆ. ಇದನ್ನು ಸದುಪಯೋಗಪಡಿಸಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ
ಆಳ್ವಾಸ್‍ನಲ್ಲಿ ’ಆಟಿ ಕಷಾಯ’’ ವಿತರಣೆ
ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಪ್ರತಿ ವರ್ಷದಂತೆ ಆಟಿ ಅಮವಾಸ್ಯೆಯ ವಿಶೇಷವಾದ, ಸರ್ವರೋಗ ನಿರೋಧಕ ಪಾರಂಪರಿಕ ದಿವ್ಯೌಷಧ ‘’ಆಟಿ ಕಷಾಯ’’ ವಿತರಣಾ ಕಾರ್ಯಕ್ರಮವನ್ನು ದಿನಾಂಕ 01-08-2018 ನೇ ಗುರುವಾರ ಬೆಳಿಗ್ಗೆ ಘಂಟೆ 08.30ರಿಂದ 11.00 ರತನಕ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಪಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಪ್ರಕಟಣೆಯಲ್ಲಿ