ಆಳ್ವಾಸ್ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಿಂದ ನಾಯಕತ್ವ ಶಿಬಿರ

ಮೂಡುಬಿದಿರೆ: ಒಬ್ಬ ವ್ಯಕ್ತಿ ಎಲ್ಲಾ ಭಯಗಳಿಂದ ಮುಕ್ತನಾಗಬೇಕು. ಭಯದಲ್ಲಿರುವ ವ್ಯಕ್ತಿ ಯಾವುದೇ ವಿಷಯವನ್ನು ಸರಿಯಾಗಿ ನೋಡಲಾರ; ಅದರ ಬಗ್ಗೆ ಕೂಲಂಕುಷವಾಗಿ ಯೋಚಿಸಲಾರ. ಈ ಭಯದಿಂದ ಬಿಡುಗಡೆಯಾದಾಗ ಮಾತ್ರ ವ್ಯಕ್ತಿಗೆ ನಿಜವಾದ ಸ್ವಾತಂತ್ರ್ಯ ದೊರಕಲು ಸಾಧ್ಯ.  ಹೀಗೆ ಸ್ವತಂತ್ರವಾಗಿ ಯೋಚಿಸುವ, ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ. ಅಂತಹ ನಾಯಕ ಯಾವುದೇ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ’ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಸಮೂಹ ಸಂವಹನ ಹಾಗೂ ಸ್ನಾತಕೋತ್ತರ

Read More

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಮಣಿಪುರ ರಾಜ್ಯಪಾಲರ ಭೇಟಿ

ಮೂಡುಬಿದಿರೆ: ಶಿಕ್ಷಣದಿಂದ ಜ್ಞಾನದ ವೃದ್ಧಿಯಾಗುತ್ತದೆ. ಸಾಮಾಜಿಕ ಶಕ್ತಿಯ ಬಲವರ್ಧನೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗದ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗಾಂಕ್ಷಿಗಳಾಗಬಾರದು. ಸರ್ವ ಧರ್ಮ ಸಮ ಭಾವನಾ ತತ್ವ ಮುಖೇನ ಒಗ್ಗಟ್ಟಿನಿಂದ ದೇಶದ ಸೇವೆ ಮಾಡಬೇಕು. ಶಿಕ್ಷಣ ಪಡೆಯುವುದರೊಂದಿಗೆ ಸಶಕ್ತ ಭಾರತದ ನಿರ್ಮಾಣವಾಗಬೇಕೆಂದು ಮಣಿಪುರದ ರಾಜ್ಯಪಾಲ ಡಾ. ಪಿ.ಬಿ ಆಚಾರ್ಯ ಹೇಳಿದರು ಮೂಡುಬಿದಿರೆಯ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

Read More

ಆಳ್ವಾಸ್‍ನಲ್ಲಿ ‘ಫ್ರೆಶರ್ಸ್ ಡೇ’ ಕಾರ್ಯಕ್ರಮ

ವಿದ್ಯಾಗಿರಿ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಒಂದೇ ವಿಷಯಕ್ಕೆ ಸೀಮಿತಗೊಂಡಿದ್ದು, ಅದು ಅವರಲ್ಲಿನ ಕೌಶಲ್ಯಗಳ ಅಭಿವೃದ್ದಿಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗಗೆ ಅವಶ್ಯಕವಾದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆದ ‘ಫ್ರೆಶರ್ಸ್ ಡೇ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. `ಜೀವನದಲ್ಲಿ ಜ್ಞಾನ ಸಂಪಾದನೆ ಮುಖ್ಯವೇ ಹೊರತು, ಯಾವುದೇ ಪ್ರಮಾಣ ಪತ್ರಗಳಲ್ಲ.

Read More

ಸಿ. ಎಸ್ ಫೌಂಡೇಶನ್ ಪರೀಕ್ಷೆ ಆಳ್ವಾಸ್ ಸಾಧನೆ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ 12 ವಿದ್ಯಾರ್ಥಿಗಳು ಕಳೆದ ಜೂನ್ ನಲ್ಲಿ ಸಿ. ಎಸ್ ಫೌಂಡೇಶನ್ ಪರೀಕ್ಷೆ ಬರೆದಿದ್ದು, ಅವರಲ್ಲಿ 9 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಯಿಂದ ನಿರಂತರ ತರಬೇತಿ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲೂ ಮೇಲುಗೈ ಸಾಧಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪದವಿ ಶಿಕ್ಷಣದ ಜೊತೆಗೆ ಸಿ. ಎಸ್ ಫೌಂಡೇಶನ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಈ ಕೋರ್ಸ್‍ನ ಮುಂದಿನ ಹಂತದ ಏಕ್ಸಿಕ್ಯೂಟಿವ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.

Read More

ಕಾರ್ಗಿಲ್ ವಿಜಯ ದಿವಸ

ವಿದ್ಯಾಗಿರಿ; ಒಂದು ಹನಿ ರಕ್ತ ನೋಡಿ ಅಯ್ಯೊ ಪಾಪ ಎನ್ನುವ ನಮ್ಮ ಭಾರತದ ಸಹೃದಯಿ ಸೈನಿಕರು ದೇಶಕ್ಕೆ ಅಪಾಯ ಬಂದಾಗ ಮಾತ್ರ ಶತ್ರುಗಳ ರಕ್ತ ಸುರಿಸಲು ಹೆದರುವುದಿಲ್ಲ ಎಂದು ಮುಕ್ತ ವಾಹಿನಿಯ ಆಡಳಿತ ನಿರ್ದೇಶಕ ಶ್ರೀಕಾಂತ್ ಶೆಟ್ಟಿ ಹೇಳಿದರು. ಆಳ್ವಾಸ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಅವರು 2ನೇ ಮಹಾಯುದ್ದದ ನಂತರ ಪ್ರಪಂಚದಲ್ಲಿ ನಡೆದ ಪ್ರಮುಖ ಯುದ್ದ ಎಂದರೆ ಅದು ಕಾರ್ಗಿಲ್ ಯುದ್ಧ. ಆ

Read More

‘ಬೂಟ್‍ಕ್ಯಾಂಪ್’ನ ಉಪನ್ಯಾಸ ಸರಣಿ

ವಿದ್ಯಾಗಿರಿ: ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಹೊರತು ಬೇರೆಯವರು ನಡೆದ ದಾರಿಯನ್ನು ಅನುಕರಣೆ ಮಾಡಬಾರದು ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಡಿಐಜಿ ಎಸ್. ಎಸ್ ದಾಸಿಲಾ ಹೇಳಿದರು. ಇವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ನಡೆಯುತ್ತಿರುವ ‘ಬೂಟ್‍ಕ್ಯಾಂಪ್’ನ ಉಪನ್ಯಾಸ ಸರಣಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯನ್ನು ಅಪೇಕ್ಷಿಸುತ್ತಾನೆ ಆದರೆ ಬದಲಾವಣೆಯ ಹಾದಿಯಲ್ಲಿ ಮುಂದುವರಿಯಲು ಎಡವುತ್ತಾನೆ. ಸುಂದರ ಬದುಕನ್ನು ರೂಪಿಸುವಲ್ಲಿ ಬದಲಾವಣೆ ಸಹಕಾರಿಯಾಗಿರುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳು ಸಫಲತೆಯ ಮೆಟ್ಟಿಲು. ಸವಾಲುಗಳ ಕುರಿತು ಚಿಂತಿಸದೇ

Read More

ಬರವಣಿಗೆಗಳು ಧನಾತ್ಮಕ ಪ್ರಭಾವ ಬೀರುವಂತಾಗಲಿ: ಪಾವ್ಲೋಸ್

ವಿದ್ಯಾಗಿರಿ: ಪತ್ರಕರ್ತರಾದವರಿಗೆ ವರದಿಗಾರಿಕೆ ಎನ್ನುವಂತದ್ದು ಕೇವಲ ವಿಷಯವನ್ನು ಪ್ರಸ್ತುತಪಡಿಸುವಿಕೆಯ ಮಾಧ್ಯಮವಾಗದೇ, ಓದುಗಾರರ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವಂತಹ ಸಾಧನವಾಗಬೇಕು ಎಂದು ಮಂಗಳೂರಿನ ಗ್ಲೋಬಲ್ ಟಿ.ವಿಯ ಸಂಸ್ಥಾಪಕ ಹಾಗೂ ನಿರ್ದೇಶಕರಾದ ಎನ್.ವಿ ಪಾವ್ಲೋಸ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ `ಪತ್ರಿಕೋದ್ಯಮ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಸಂಗ್ರಹಣೆಗೆ ಸಂವಹನದ ಅವಶ್ಯಕತೆಯಿದ್ದರೂ, ಸಂವಹನಕ್ಕೆ ಯಾವುದೇ ಭಾಷೆಯ ಅಗತ್ಯವಿಲ್ಲ, ಬದಲಾಗಿ ಹಾವ-ಭಾವಗಳ ಮುಖಾಂತರವೂ ವಿಷಯಗಳನ್ನು ಪ್ರಸ್ತುತಪಡಿಸಬಹುದು. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಜೀವನವನ್ನು

Read More

ನ.14ರಿಂದ 17ರವರೆಗೆ ಆಳ್ವಾಸ್ ನುಡಿಸಿರಿ ವಿರಾಸತ್ 2019

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು.

Read More

ಆಳ್ವಾಸ್‍ನಲ್ಲಿ ಗ್ರಾಹಕರ ಶಿಕ್ಷಣದಲ್ಲಿ ಸರ್ಟಿಫಿಕೇಟ್ ಕೋರ್ಸ್’ ಆರಂಭ

ವಿದ್ಯಾಗಿರಿ: ಜಗತ್ತಿನಲ್ಲಿ ಪ್ರತಿಯೊಬ್ಬರೂ ಹುಟ್ಟಿನಿಂದಲೇ ಗ್ರಾಹಕರು. ಆದ್ದರಿಂದ ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವ ಮುನ್ನ ಸೂಕ್ಮವಾಗಿ ಪರಿಶೀಲಿಸಬೇಕು. ಗ್ರಾಹಕರ ಹಕ್ಕು ಮತ್ತು ಬಾಧ್ಯತೆಗಳನ್ನು ಅರಿತುಕೊಂಡು ವ್ಯವಹರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಒಕ್ಕೂಟದ ಅಧ್ಯಕ್ಷರಾದ ಎಮ್.ಜೆ ಸಾಲಿಯಾನ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಪದವಿ ಅರ್ಥಶಾಸ್ತ್ರ ಹಾಗೂ ವಾಣಿಜ್ಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಗ್ರಾಹಕರ ಶಿಕ್ಷಣದಲ್ಲಿ ಸರ್ಟಿಫಿಕೇಟ್ ಕೋರ್ಸ್’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ

Read More

ಆಳ್ವಾಸ್‍ನ ಪುರುಷರ ಬಾಲ್ ಬ್ಯಾಡ್‍ಮಿಂಟನ್ ತಂಡ ಚಾಂಪಿಯನ್

ಮೂಡಬಿದಿರೆ: ಚೆನೈನಲ್ಲಿ ಜುಲೈ 20 ರಿಂದ 22ರವರಗೆ ನಡೆದಂತಹ ಹನ್ನೊಂದನೆಯ ಸೈಂಟ್ ಜೋಸೆಫ್ ಆಲ್ ಇಂಡಿಯ ಬಾಲ್ ಬ್ಯಾಟ್‍ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್‍ನ ಪುರುಷರ ಬಾಲ್ ಬ್ಯಾಡ್‍ಮಿಂಟನ್ ತಂಡವು ಜಂಟಿ ವಿಜೇತರಾಗಿ ಚಾಂಪಿಯನ್‍ಶಿಪ್ ಅನ್ನು ಆರು ತಂಡಗಳೊಂದಿಗೆ ಹಂಚಿಕೊಂಡಿತು. ಪಂದ್ಯಾವಳಿಯನ್ನು ಲೀಗ್ ಕಮ್ ಸೂಪರ್ ಲೀಗ್ ವಿಭಾಗದಲ್ಲಿ ಆಯೋಜಿಸಲಾಗಿದ್ದು, ಒಟ್ಟು ಇಪ್ಪತ್ತನಾಲ್ಕು ತಂಡಗಳು ಭಾಗವಹಿಸಿದ್ದವು. ಕೇರಳದ ಪಯೋನಿರ್ ಸ್ಪೋಟ್ರ್ಸಕ್ಲಬ್, ಟಿಂಡಿವನಮ್‍ನ ಟಿಬಿಸಿಸಿ, ಇರೋಡ್‍ನ ಎಸ್.ಬಿ.ಸಿ.ಸಿ, ಚೆಂಗಲ್‍ಪಟ್ಟುವಿನ ಜೆಜೆ ಬಾಯ್ಸ್, ಬೆಂಗಳೂರಿನ ಕೆನರಾ ಬ್ಯಾಂಕ್ ಹಾಗೂ ಚೆನ್ನೈನ ಸೈಂಟ್ ಜೋಸೆಫ್ಸ್

Read More

Highslide for Wordpress Plugin