News & Events
“ಪರಿಸರದ ನಿರ್ವಹಣೆ ನಮ್ಮ ಹೊಣೆ”: ಡಾ. ಟಿ.ವಿ. ರಾಮಚಂದ್ರ
ಮಿಜಾರು: ಮನುಷ್ಯನಿಗೆ ಪ್ರಮುಖವಾಗಿ ಬೇಕಾಗಿರುವುದು ತೃಪ್ತಿ ಹಾಗೂ ಮಾನವೀಯತೆ. ಯಾರು ಯಾಂತ್ರಿಕತೆಗೆ ಒಗ್ಗಿಕೊಂಡಿದ್ದಾರೋ, ಅವರು ಪರಿಸರದ ಕಡೆಗೆ ಗಮನಹರಿಸದೇ ಸ್ವಾರ್ಥಿಗಳಾಗಿ ಮಾನವೀಯತೆಯನ್ನು ಮರೆತು ಜೀವನವನ್ನು ನಡೆಸುತ್ತಿದ್ದಾರೆ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ… ಡಾ. ಟಿ. ವಿ. ರಾಮಚಂದ್ರ ಹೇಳಿದರು. ಅವರು ಆಳ್ವಾಸ್ ಇಂಜನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಜರುಗುತ್ತಿರುವ ಒಂದು ತಿಂಗಳ “ಬೂಟ್ ಕ್ಯಾಂಪ್”ನ ತೃತೀಯ ದಿನದ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು. ಪರಿಸರ ನಾಶಕ್ಕೆ ಪ್ರಮುಖ ಕಾರಣ ಮಾನವ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರದ
ಸಾಹಿತ್ಯ ಸಂಘ ಉದ್ಘಾಟನೆ
ವಿದ್ಯಾಗಿರಿ: ಸಾಹಿತ್ಯದ ಹಿನ್ನಲೆಯನ್ನು ಅರಿತುಕೊಂಡಾಗ ಭಾವಾನಾತ್ಮಕವಾದ ಆನಂದವನ್ನು ಸಂಪಾದಿಸಬಹುದು ಎಂದು ಖ್ಯಾತ ಚಿಂತಕ ಹಾಗೂ ವಾಗ್ಮಿ ಮುನಿರಾಜ್ ರೆಂಜಾಳ ಹೇಳಿದರು. ಅವರು ಶುಕ್ರವಾರ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಹೊಂದಬೇಕೆಂದರೆ ಕಲೆ, ಸಾಹಿತ್ಯ ಅತಿ ಪ್ರಮುಖವಾಗಿರುತ್ತದೆ. ಸಾಹಿತ್ಯವನ್ನು ರಚಿಸಲು ಅದರದ್ದೇ ಆದ ಕಾರಣ ಹಾಗೂ ಹಿನ್ನಲೆಯನ್ನರಿಯುವುದು ಮುಖ್ಯ. ಸಾಹಿತ್ಯ ಸಂಘವೆಂಬುದು ನಮ್ಮಲ್ಲಿರುವ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯಾಗಿದ್ದು, ಅಲ್ಲದೆ ಜೀವನದಲ್ಲಿ ಏನಾನ್ನಾದರೂ ಸಾಧಿಸಲು ಛಲ ಮೂಡಿಸುತ್ತದೆ. ಸಾಹಿತ್ಯದ ಅಭಿರುಚಿಯನ್ನು
“ಅಂಕಣ ಬರಹ ಮತ್ತು ಭಿತ್ತಿ ಪತ್ರಗಳ ಕಾರ್ಯಾಗಾರ”
ವಿದ್ಯಾಗಿರಿ: ಪ್ರತಿಯೊಂದು ಪತ್ರಿಕೆಗಳಲ್ಲಿಯೂ ಅಂಕಣ ಬರಹಗಳು ಪ್ರಮುಖವಾಗಿರುವುದರಿಂದ, ಅವುಗಳು ಮುಖ್ಯ ಪಾತ್ರವಹಿಸುತ್ತವೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಟಿ. ಎನ್. ಖಂಡಿಗೆ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ನಡೆದ “ಅಂಕಣ ಬರಹ ಮತ್ತು ಭಿತ್ತಿ ಪತ್ರಗಳ ಕಾರ್ಯಾಗಾರ”ದಲ್ಲಿ ಮಾತನಾಡಿದರು. ಸಂವೇದನಾಶೀಲತೆ, ಸೃಜನಶೀಲತೆ, ಚಿಂತನೆ, ದೃಷ್ಟಿಕೋನ, ಭಾಷೆ ಹಾಗೂ ಕಲಾತ್ಮಕತೆಗಳನ್ನು ಅಂಕಣ ಬರಹಗಳು ಒಳಗೊಂಡಿರುತ್ತವೆ. ಆಕರ್ಷಕ ಶೀರ್ಷಿಕೆ ಮತ್ತು ಓದಿಸಿಕೊಂಡು ಹೋಗುವ ಅಂಕಣಗಳು ಜನರ ಮೆಚ್ಚುಗೆಗಳಿಸುತ್ತವೆ. ಅಂಕಣಗಳು ಸ್ವಾನುಭವವನ್ನು ಒಳಗೊಂಡಿದ್ದು,
ವಿಟಿಯು ಫಲಿತಾಂಶ ಪ್ರಕಟ: ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಾಧನೆ
ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 8ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಿ.ಎಸ್.ಇ ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಾಗಿದೆ. 90 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಜಸ್ಮಿನೆ ಪ್ರಿನ್ಸಿ ಲೋಬೊ ಶೇ.88.71 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಐ.ಎಸ್.ಸಿ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. 29 ವಿಶಿಷ್ಟ ಶ್ರೇಣಿ ಪಡೆದುಕೊಂಡಿದ್ದಾರೆ. ಹರ್ಷಿತಾ ಶೇ.88.57 ಅಂಕ ಪಡೆದು ಪ್ರಥಮ ಸ್ಥಾನಿಯಾಗಿದ್ದಾರೆ. ಇ.ಸಿ.ಇ ವಿಭಾಗದಲ್ಲಿ
“ಬೂಟ್‍ಕ್ಯಾಂಪ್’’ನ ಪ್ರಥಮ ಸರಣಿ ಉಪನ್ಯಾಸ
ಮಿಜಾರು: ಯೋಚನೆಗಳು ಮತ್ತು ಮನೋಭಾವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದ್ದರಿಂದ ನಮ್ಮ ಯೋಚನೆಗಳ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ಎಜಿಮಲ್‍ನ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡರ್ ಬೆನ್ ಬೆರ್ಸನ್ ಹೇಳಿದರು. ಅವರು ಆಳ್ವಾಸ್ ಇಂಜನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಒಂದು ತಿಂಗಳ ಕಾಲ ಜರುಗುತ್ತಿರುವ “ಬೂಟ್‍ಕ್ಯಾಂಪ್”ನ ಪ್ರಥಮ ದಿನದ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು. ನಮ್ಮ ಮನೋಭಾವಗಳು ನಮ್ಮತನದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸಾಧನೆಯ ಹಾದಿಯಲ್ಲಿ ತರ್ಕಗಳು ಸಹಜ. ಅವುಗಳನ್ನು ನಿರ್ಲಕ್ಷಿಸಿ ಮುಂದುವರಿಯುವುದನ್ನು ರೂಢಿಸಿಕೊಂಡಾಗ ಗೆಲುವಿನ ಹಾದಿಯಲ್ಲಿ ಸಾಗಬಹುದು. ಗೆಲವಿನ ಮನೋಭಾವ ಬದುಕಿನ
ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ ಸಾಧನೆ
ಮೂಡುಬಿದಿರೆ: 2019-20ನೇ ಸಾಲಿನ ಸಿಎ-ಸಿಪಿಟಿ ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲಾ ಡಿ’ಸೋಜ 200 ಅಂಕಗಳಲ್ಲಿ 162 ಅಂಕಗಳನ್ನು ಪಡೆದು ರಾಜ್ಯ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯಲ್ಲಿ ಟಾಪರ್ ಆಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪ್ರಕಟಗೊಂಡಿರುವ ಪಿಯುಸಿ ಫಲಿತಾಂಶದ ವಾಣಿಜ್ಯ ವಿಭಾಗದಲ್ಲಿ ಓಲಿಟ್ವಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಪರೀಕ್ಷೆಗೆ ಅಳ್ವಾಸ್ ಪಿಯು ಕಾಲೇಜಿನ 157 ಮಂದಿ ಹಾಜರಾಗಿದ್ದು, 85 ಮಂದಿ ಉತ್ತೀರ್ಣರಾಗಿದ್ದಾರೆ. 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಒಟ್ಟು ಶೇ. 54.14
ಉಪನ್ಯಾಸ ಕಾರ್ಯಕ್ರಮ
ವಿದ್ಯಾಗಿರಿ: ಉದ್ಯೋಗ ಪಡೆದುಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಗೂ ತಾಳ್ಮೆ, ಹೊಂದಣಿಕೆ ಮತ್ತು ಸಂವಹನ ಅಗತ್ಯವೆಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪನ್ಯಾಸಕ ಧನಂಜಯ್ ಭಟ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮತ್ತು ಪದವಿ ವಿಭಾಗದ ಸಹಯೋಗದೊಂದಿಗೆ ನಡೆದ “ಸರಕಾರಿ ಉದ್ಯೋಗ ಮತ್ತು ಸ್ಟೆನೊಗ್ರಾಫಿ ಹುದ್ದೆüಯಲ್ಲಿರುವ ವಿಪುಲವಾದ ಅವಕಾಶಗಳು” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರಿ ಉದ್ಯೋಗದಲ್ಲಿ ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಅದರ ಕುರಿತ ಮಾಹಿತಿಯನ್ನು ಪಡೆಯಬೇಕು. ಇಂತಹ ಉದ್ಯೋಗಗಳನ್ನು ಪಡೆಯಲು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಹಾಗೂ
ಆಳ್ವಾಸ್‍ಗೆ ಗ್ರೀನ್ ಕ್ಯಾಂಪಸ್ ಪ್ರಶಸ್ತಿ
ಮೂಡುಬಿದಿರೆ: ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಾನಗರಪಾಲಿಕೆ, ಅರಣ್ಯ ಇಲಾಖೆ , ಮಂಗಳೂರು ಸ್ಮಾಟ್ ಸಿಟಿ ಲಿ.. ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ಭಾರತ್ ಸ್ಕೌಟ್ಸ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ 2019 ಪರಿಸರ ಜಾಥಾ ಹಾಗೂ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೋಭಾವನಕ್ಕೆ ಆಳ್ವಾಸ್‍ಗೆ ಗ್ರೀನ್ ಕ್ಯಾಂಪಸ್ ಪ್ರಶಸ್ತಿ ನೀಡಿ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿಎನ್‍ಸಿ ಕಾರ್ಯಾಗಾರ ಸಂಪನ್ನ
ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇಲ್ಲಿ ಪಡೆದತಂಹ ಮಾಹಿತಿಯನ್ನು ಮುಂದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಯಶಸ್ವಿ ಜೀವನವನ್ನು ನಡೆಸಲು ಸಾದ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 7 ದಿನಗಳು ನಡೆದ ಸಿ.ಎನ್.ಸಿ (ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್) ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಐ.ಐ.ಟಿ ಮತ್ತು ಡಿಪೆÇ್ಲಮ ಮಾಡಿದವರಿಗೆ ಅತಿ ಹೆಚ್ಚು ಬೇಡಿಕೆ ಇದೆ.
ಆಳ್ವಾಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಮೂಡಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸೈನಿಕ ದಳ (ಆರ್ಮಿ ವಿಂಗ್) ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವೆನ್‍ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಬೆಳಿಗ್ಗೆ ಕಾಲೇಜಿನ ಕಾಮರ್ಸ್ ಹಾಲ್‍ನಲ್ಲಿ ಪ್ರಾರಂಭವಾದ ರಕ್ತದಾನ ಶಿಬಿರದಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ರಾಷ್ಟ್ರೀಯ ಯುವ ಸೈನಿಕ ದಳ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರು ಸೇರಿದಂತೆ ಸುಮಾರು 198 ಮಂದಿ ರಕ್ತದಾನ ಮಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವೆನ್‍ಲಾಕ್ ಆಸ್ಪತ್ರೆಯ ಲ್ಯಾಬ್ ಮೇಲ್ವಿಚಾರಕ ಆ್ಯಂಟನಿ,