News & Events
ಆಳ್ವಾಸ್ ಪಿಯು ಕಾಲೇಜು ವಾಣಿಜ್ಯ, ಕಲಾ ಸಂಘ ಉದ್ಘಾಟನೆ
ಮೂಡುಬಿದಿರೆ: ಕಲಿಯುವಂತಹ ಶಿಕ್ಷಣ ಜೀವನಕ್ಕೆ ಪಾಠ ಆಗಬೇಕು. ಕಲಿತ ವಿಷಯಗಳು ಭವಿಷ್ಯವನ್ನು ನಿರ್ಧರಿಸಲು ಅವಕಾಶ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಸಮರ್ಪಕವಾದ ಗುರಿಯೊಂದಿಗೆ ಸಾಧಿಸಬೇಕು ಎಂದು ಮಾಜಿ ವಿಧಾನಸಭಾ ಸದಸ್ಯಕ್ಯಾ.ಗಣೇಶ್‍ಕಾರ್ಣಿಕ್ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಶನಿವಾರ ಪದವಿ ಪೂರ್ವ ವಿಭಾಗದ ವಾಣಿಜ್ಯ ಹಾಗೂ ಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಪರಂಪರೆ ಜೀವನ ಮೌಲ್ಯಗಳನ್ನು ಕೊಡುತ್ತದೆ. ಆದರೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕ ಪ್ರಜ್ಞೆಯ ಕೊರತೆಯಿದೆ. ಹೊರಜಗತ್ತಿನ ವೈಭವಗಳು ಅಂತರಂಗದ ಸೌಂದರ್ಯವನ್ನು ನೀಡದು. ಆದ್ದರಿಂದ ಮೌಲ್ಯಧಾರಿತ
ಆಳ್ವಾಸ್‍ನಲ್ಲಿ ‘ಅಡ್ವಾನ್ಸ್‍ಸ್ ಇನ್ ರಿಸರ್ಚ ಆ್ಯಂಡ್ ಡೆವಲಪ್ಮೆಂಟ್-2019’ ವಿಚಾರ ಸಂಕಿರಣ
ಮೂಡುಬಿದಿರೆ, ಜೂ 11: ‘ಆಯುರ್ವೇದದಲ್ಲಿ ಸಂಶೋಧನೆಯ ಕಲ್ಪನೆಯೇ ಒಂದು ಸಂತಸದ ವಿಷಯ. ಆಧುನಿಕ ವಿಜ್ಞಾನಕ್ಕೆ ಹೋಲಿಸಿದಾಗ, ಆಯುರ್ವೇದದಲ್ಲಿನ ಸಂಶೋಧನೆ ಬಹಳ ಕಷ್ಟದ ಸಂಗತಿ. ಆದರೂ ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಗಳು ಏರ್ಪಟ್ಟು ಮನುಕುಲಕ್ಕೆ ಅನುಕೂಲವಾಗುವಂತಾಗಬೇಕು ಎಂದು ಕರ್ನಾಟಕ ಸರ್ಕಾರದ ಆಯುಷ್ ವೈದ್ಯಕೀಯ ವಿಜ್ಞಾನದ ಸಹ ನಿರ್ದೇಶಕರಾದ ಡಾ. ಬಿ ಎಸ್ ಶ್ರೀಧರ ತಿಳಿಸಿದರು. ಅವರು ಗುರುವಾರ ವಿದ್ಯಾಗಿರಿಯ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ವತಿಯಿಂದ ನಡೆದ ‘ಅಡ್ವಾನ್ಸ್‍ಸ್ ಇನ್ ರಿಸರ್ಚ ಆ್ಯಂಡ್ ಡೆವಲಪ್ಮೆಂಟ್-2019’
ಸಾಮಾನ್ಯ ವರ್ಗಕ್ಕೂ ಎಟುಕುವಂತಹ “ವೃತ್ತಿಪರ ಕೋರ್ಸ್‍ಗಳು” ಆಳ್ವಾಸ್‍ನಲ್ಲಿ ಆರಂಭ
ಮೂಡಬಿದಿರೆ: ವೃತ್ತಿಪರ ಕೋರ್ಸುಗಳಾದ ಎ.ಸಿ.ಸಿ.ಎ. (ಯು.ಕೆ.) ಮತ್ತು ಸಿ.ಎಮ್.ಎ. (ಯು.ಎಸ್.) ಮುಖ್ಯಸ್ಥರು ಹಾಗೂ ಆಳ್ವಾಸ್ ಕಾಲೇಜಿನ ನಡುವೆ ಇತ್ತೀಚೆಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ” ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ಪ್ರತಿಭಾನ್ವಿತ ಬಡ ವಿದ್ಯಾರ್ಥಿ ಉಚಿತವಾಗಿ ಶಿಕ್ಷಣವನ್ನು ಪಡೆದು ತಮ್ಮ ಪದವಿಯನ್ನು ಗಳಿಸುತ್ತಿದ್ದಾರೆ. ಆ ಹಿನ್ನಲೆಯಲ್ಲಿ ಇಂತಹ ವೃತ್ತಿಪರ ಕೋರ್ಸ್‍ಗಳಾದ ಸಿ.ಎ., ಸಿ.ಎಸ್, ಜೊತೆಗೆ ಈ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಎ.ಸಿ.ಸಿ.ಎ.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ
ಮೂಡಬಿದಿರೆ: ಗ್ರಾಮೀಣ ಪ್ರದೇಶದ ಜೀವನ ಕ್ರಮ, ಸಂಸ್ಕ್ರತಿ, ಆಚಾರ-ವಿಚಾರ, ಪದ್ದತಿಗಳನ್ನು ಪ್ರಾಯೋಗಿಕವಾಗಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯು ಪಾಠಶಾಲೆಯಿದ್ದಂತೆ. ಆದ್ದರಿಂದ ಪ್ರತಿಯೊಬ್ಬರು ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜೆನೆಯ ಭಾಗವಾಗಿ ಜೀವನದ ನಿಜವಾದ ಸವಿಯನ್ನು ಸವಿಯಬೇಕು ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ತಿಳಿಸಿದರು. ಅವರು ಶನಿವಾರ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ-2019-20ರ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಳ್ವಾಸ್ನಲ್ಲಿ ಜರುಗುವ ರಾಷ್ಟ್ರೀಯ
ಆಳ್ವಾಸ್: ಪೈಥಾನ್ ಪ್ರೋಗ್ರಾಮಿಂಗ್ ರಾಷ್ಟ್ರೀಯ ಮಟ್ಟದ ಕಾರ್ಯಗಾರ
ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾದ ತರಬೇತಿ ನೀಡುವ ಉದ್ದೇಶದಿಂದ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಭಾಗಿತ್ವದಲ್ಲಿ `ಆಪ್ಲಿಕೇಶನ್ಸ್‍ಆಫ್ ಪೈಥಾನ್ ಪ್ರೋಗ್ರಾಮಿಂಗ್‍ಇನ್‍ಡೇಟಾಅನಾಲಿಟಿಕ್ಸ್‍ಆ್ಯಂಡ್ ಮಷಿನ್ ಲರ್ನಿಂಗ್ಸ್-ರಿಸರ್ಚ್ ಪರ್ಸ್ಪೆಕಟಿವ್’ ಎರಡು ದಿನದ ರಾಷ್ಟ್ರೀಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಲಾಯಿತು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕಲಿಯುವಿಕೆಯು ನಿರಂತರವಾಗಿದೆ ವಿದ್ಯಾರ್ಥಿಗಳು ಸಿಗುವ ಸಮಯವನ್ನು ಹೊಸತನ್ನು ಕಲಿಯಲು ಮೀಸಲಿಡಬೇಕು. ಪೈಥಾನ್ ಪ್ರೋಗ್ರಾಮಿಂಗ್ ಕಾರ್ಯಗಾರವು ಉನ್ನತ
ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್‍ನ ಚೈತ್ರಾ ಶೆಟ್ಟಿ ಪ್ರಥಮ
ಮೂಡುಬಿದಿರೆ: ಯೋಗ ದಿನಾಚರಣೆಯ ಅಂಗವಾಗಿ ಯೋಗ ಗಂಗೋತ್ರಿ ಟ್ರಸ್ಟ್, ಬೆಂಗಳೂರಿನ ಬಸವನಗುಡಿ ಬಿ.ಎಂ.ಎಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಚೈತ್ರಾ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ವಿಶ್ವ ವಿವಿಗಳ ಕ್ರೀಡಾಕೂಟಕ್ಕೆ ಆಳ್ವಾಸ್‍ನ 10 ಮಂದಿ ಆಯ್ಕೆ
ಮೂಡುಬಿದಿರೆ: ಇಟೆಲಿಯ ನೆಪೋಲಿಯದಲ್ಲಿ ಜುಲೈ.3ರಿಂದ 14ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ವಿವಿಗಳ ಕ್ರೀಡಾಕೂಟಕ್ಕೆ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್‍ನ 10 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಲಾಕ್ಯ ದಾಸನ್ (400*100ರಿಲೇ), ಪ್ರವೀಣ್ ಸಿ(ತ್ರಿಪಲ್ ಜಂಪ್), ಅಭನಯ ಎಸ್.ಶೆಟ್ಟಿ (ಹೈಜಂಪ್), ಸುಪ್ರಿಯ ಎಸ್.( ಹೈಜಂಪ್), ಅಜೇಯ್ ಕುಮಾರ್ (5,000ಮೀಟರ್), ಕುಶ್‍ಮೇಶ್ ಕುಮಾರ್ (ಆಫ್ ಮ್ಯಾರಾಥಾನ್), ಅಭಿಷೇಕ್ ಡಿ (ಜಾವೆಲಿನ್ ತ್ರೋ), ನವಮಿ(4*100 ರಿಲೇ), ಚೌಹಾನ್ ಜ್ಯೋತಿ(3000ಮೀ ಸ್ಟಿಪಲ್ ಚೆಸ್), ಪುಷ್ಪಾಂಜಲಿ
ಅಂತರಾಷ್ಟ್ರೀಯ ಜೀನಿಯಸ್ ಒಲಿಂಪಿಯಾಡ್‍ನಲ್ಲಿ ಆಳ್ವಾಸ್ ವಿದ್ಯಾರ್ಥಿಯ ಸಾಧನೆ
ಮೂಡಬಿದಿರೆ: ನ್ಯೂಯಾರ್ಕನ ಓಸ್ವೇಗೋ ವಿಶ್ವವಿದ್ಯಾಲಯದಲ್ಲಿ ಜೂನ್ 19 ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‍ನಲ್ಲಿ ಆಳ್ವಾಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಅಮೋಘ ನಾರಾಯಣ ಸೆಕೆಂಡ್ ಗ್ರ್ಯಾಂಡ್ ಪ್ರಶಸ್ತಿಯೊಂದಿಗೆ ರಜತ ಪದಕ ವನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆಗೆ 79 ದೇಶಗಳಿಂದ 1269 ಸ್ಪರ್ಧಾಳುಗಳು ಭಾಗವಹಿಸಿದ್ದು, ಇವರ ಅನ್ವೇಷಣೆಯಾದ ‘’ಎವಾಲ್ಯೂವೆಷನ್ ಆಫ್ ನಾವೆಲ್ ಇಕೋ ಫ್ರೆಂಡ್ಲಿ ವೀಡಿಸೈಡ್ ಫ್ರಮ್ ಕೋಕಮ್ ಫ್ರೂಟ್ ಎಕ್ಸ್ಟ್ರಾಕ್ಟ್ ಸೋಪ್ ನಟ್” ದ್ವಿತೀಯ ಸ್ಥಾನವನ್ನು
ಆಳ್ವಾಸ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜು, ಆಳ್ವಾಸ್ ರಾಷ್ಟ್ರೀಯ ಯುವ ಸೈನಿಕ ದಳ (ಆರ್ಮಿ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇದರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಸಭಾಂಚಿಗಣದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಆಳ್ವಾಸ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ವಿನಯ್ ಆಳ್ವ ಉದ್ಘಾಟಿಸಿದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ. ಸ್ಮಿತಾ ಭಟ್ ಮಾತನಾಡಿ ಯೋಗದ ಉಗಮ, ಬೆಳವಣಿಗೆ ಹಾಗೂ ಅಗತ್ಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತದನಂತರ ಸುಮಾರು 90 ವಿದ್ಯಾರ್ಥಿಗಳಿಂದ 60 ನಿಮಿಷದ ಕಾಲ
ಆಳ್ವಾಸ್‍ನ 33 ವಿದ್ಯಾರ್ಥಿಗಳು NDAಗೆ ಆಯ್ಕೆ
ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ NDA ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‍ನ 33 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪುಣೆಯ ಕಡಕ್‍ವಾಸ್ಲದಲ್ಲಿರುವ NDA ತರಬೇತಿ ಸಂಸ್ಥೆಯಲ್ಲಿ B.Tech ಅಥವಾ B.Sc. ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ NDA ಪರೀಕ್ಷೆಗೆ ದೇಶಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 7,904 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶ್ರೀನಿವಾಸ್ ಎನ್., ನಿರಂಜನ್ ಎಸ್. ಪಟ್ಟನ್‍ಶೆಟ್ಟಿ, ಲೋಹಿತ್ ಎಂ. ಎಸ್., ಮೊಹಮ್ಮದ್ ಅರ್ಶ್ ವೈ, ನಂದೀಶ ಕೆ., ಪಿ. ಎಸ್. ರವೀಂದ್ರ , ವರುಣ್ ತೇಜ್