News & Events
ಆಳ್ವಾಸ್ ನ್ಯೂಸ್ ಟೈಮ್‍ನ ಶತಕದ ಸಂಭ್ರಮ
ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು ಎಂದೂ ಪ್ರವೇಶಿಸಬಾರದು ಎಂದು ರಾಜ್ ನ್ಯೂಸ್‍ನ ಮುಖ್ಯ ಸಂಪಾದಕ ಹಮೀದ್ ಪಾಳ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ನ್ಯೂಸ್ ಟೈಮ್‍ನ ಶತಕದ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಂದು ಪತ್ರಿಕೋದ್ಯಮದ ಮೇಲೆ ರಾಜಕೀಯ ಹೆಚ್ಚು ಪ್ರಭಾವ ಬೀರುತ್ತಿದೆ. ಆದ್ದರಿಂದ ಪತ್ರಕರ್ತ ಯಾವುದೇ ರಾಜಕೀಯ ಸಿದ್ಧಾಂತಗಳಿಗೆ
ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ
ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಓಂಖಿಂ-2019) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಪಿ.ಯುಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏ.14ರಂದು ನಡೆದ ನಾಟಾ ಪರೀಕ್ಷೆಯಲ್ಲಿ ಆಕಾಂಕ್ಷಾ ವಿ ಎ (160), ರೋಹಿತ್ ಆರ್ (154), ರಕ್ಷಿತ್ ಆರ್. (150), ಕೇಶವಮೂರ್ತಿ (142), ಲಿಖಿತ್ ಕೆ (142), ಶ್ರೀನಿಧಿ (142), ಚಂದನ ಎ.ಎಂ (141), ಮೆಲ್ಬಿನ್ ಅಲೆಕ್ಸ್ (140), ಮೈತ್ರಿ (139),
“ಆಳ್ವಾಸ್ ನ್ಯೂಸ್‍ಟೈಮ್”ಗೆ ಶತಕದ ಸಂಭ್ರಮ
ವಿದ್ಯಾಗಿರಿ: ಆಳ್ವಾಸ್ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ “ಆಳ್ವಾಸ್ ನ್ಯೂಸ್‍ಟೈಮ್” ಎಂಬ ನ್ಯೂಸ್ ಬುಲೆಟಿನ್‍ನ್ನು ಮೂರುಜನ ವಿದ್ಯಾರ್ಥಿಗಳ ತಂಡವು ಆರಂಭಿಸಿತ್ತು. ಅಲ್ಲಿಂದ ಆರಂಭಗೊಂಡ ಈ ಪಯಣ ಸ್ನಾತಕೋತ್ತರ ವಿಭಾಗಕ್ಕೆ ವರ್ಗಾವಣೆಗೊಂಡು ಇಂದಿಗೆ ನೂರು ಸಂಚಿಕೆಯನ್ನು ಪೂರೈಸಿದ ಸಂಭ್ರಮದಲ್ಲಿದೆ. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗವು “ಆಳ್ವಾಸ್ ನ್ಯೂಸ್‍ಟೈಮ್” ಶತಕದ ಸಂಭ್ರಮವನ್ನು ಆಚರಿಸುತ್ತಿದೆ. `ರಾಜ್ ನ್ಯೂಸ್’ನ ಮುಖ್ಯ ಸಂಪಾದಕ ಹಮೀದ್ ಪಾಳ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ
ಎಸ್‍ಎಸ್‍ಎಲ್‍ಸಿ: ಆಳ್ವಾಸ್ ಶಾಲೆಗಳ ಸಾಧನೆ
ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶೇ.100 ಹಾಗೂ ಆಂಗ್ಲ ಮಾಧ್ಯಮ ಶಾಲೆ ಶೇ.98.43 ಫಲಿತಾಂಶ ದಾಖಲಿಸಿದೆ. ಆಳ್ವಾಸ್‍ನ ಮೂವರು ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದ ರಾಜ್ಯದಲ್ಲಿ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯ ಟಾಪ್ 10ರಲ್ಲಿ ನಾಲ್ವರು ಸ್ಥಾನವನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಳ್ವಾಸ್
ಆಳ್ವಾಸ್ ಇಂಜಿನಿಯರಿಂಗ್ ವಿಶುವಲ್ ಆರ್ಟ್ ಕಾರ್ಯಾಗಾರ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲಢಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಡಿಪ್ಲೋಮ ಇನ್ ಅರ್ಚಿಟೆಕ್ಚರ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಮೂರು ದಿನಗಳು ನಡೆಯಲಿರುವ ವಿಶುವಲ್ ಅರ್ಟ್ ತರಬೇತಿ ಕಾರ್ಯಾಗಾರಕ್ಕೆ ಎಂ.ಬಿ.ಎ ಸೆಮಿನಾರ್ ಹಾಲ್‍ನಲ್ಲಿ ಚಾಲನೆ ನೀಡಲಾಯಿತು. ಉದ್ಯಮಿ ಅಬ್ದುಲ್ ರವೂಫ್ ಪುತ್ತಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ, ಮನುಷ್ಯನಿಗೆ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಶಿಸ್ತು ಮತ್ತು ಸಂಯಮ ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತದೆ. ಜಗತ್ತಿನ ಶ್ರೇಷ್ಠ ಕಟ್ಟಡಗಳಲ್ಲಿ ಒಂದಾದ ಬುರ್ಜಾ ಖಲೀಫ್ ಮತ್ತು ಏಫೇಲ್ ಟವರ್‍ನ ನೀರ್ಮಾಣದ ಹಿಂದೆ ಅವಿರತ
ಬಾಲ್ ಬ್ಯಾಡ್ಮಿಂಟನ್ : ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಹ್ಯಾಟ್ರಿಕ್ ಪ್ರಶಸ್ತಿಯ ಗರಿ
ಮೂಡುಬಿದಿರೆ: ಅರ್.ಎಲ್ ಜಾಲಪ್ಪ ಇನ್ಸ್‍ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ದೊಡ್ಡಬಳ್ಳಾಪುರದಲ್ಲಿ ನಡೆದ ವಿಟಿಯು ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಚಾಂಪಿಯನ್‍ಶಿಪ್ ಮುಡಿಗೆರಿಸಿಕೊಳ್ಳುವ ಮೂಲಕ ಆಳ್ವಾಸ್ ಇನ್ಸ್‍ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹ್ಯಾಟ್ರಿಕ್ ಪ್ರಶಸ್ತಿಯನ್ನು ಪಡೆಯಿತು. ಫೈನಲ್‍ನಲ್ಲಿ ಮಹಿಳಾ ವಿಭಾಗದಲ್ಲಿ ಮಲ್ನಾಡ್ ಕಾಲೇಜ್ ಅಫ್ ಇಂಜಿನಿಯರಿಂಗ್, ಹಾಸನವನ್ನು 35-15, 35-12 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಗಿಸಿಕೊಂಡಿತು, ಪುರುಷರ ವಿಭಾಗದಲ್ಲಿ ಫೈನಲ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದ್ದು , ಅತಿಥೇಯ ಅರ್.ಎಲ್ ಜಾಲಪ್ಪ ಇನ್ಸ್‍ಸ್ಟಿಟ್ಯೂಟ್
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದವತಿಯಿಂದ ಪೋಸ್ಟರ್ ನಿರ್ಮಾಣ
ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದವತಿಯಿಂದ ಪೋಸ್ಟರ್ ನಿರ್ಮಾಣ, ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಒಟ್ಟು 28 ವಿಷಯಗಳಿಗೆ ಸಂಬಂದಪಟ್ಟ ಪೋಸ್ಟರ್‍ಗಳನ್ನು ನಿರ್ಮಾಣ ಮಾಡಿದ್ದರು. ಮುಖ್ಯವಾಗಿ ಸೆಲ್ಪ ಹೆಲ್ಪ ಗ್ರೂಪ್ಸ್, ಐಡಿಬಿಐ, ಸಿಡೋ, ಕೆಎಸ್‍ಎಫ್‍ಸಿ, ಎಂಎಫ್‍ಐ, ಎಸ್‍ಐಡಿಬಿಐ, ಮುದ್ರಾ, ಐಐಈ, ನಾಬಾರ್ಡ ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳು ತಾವು ನಿರ್ಮಿಸಿದ ಪೋಸ್ಟರ್‍ಗಳ ಬಗ್ಗೆ ವಿವರಣೆಯನ್ನು ತೀರ್ಪುಗಾರರ ಮುಂದೆ ನೀಡಿದರು. ತೀರ್ಪುಗಾರರಾಗಿ ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಡಾ ಶೇರ್ಲಿ ಟಿ.
ಆಳ್ವಾಸ್ ಚಿಣ್ಣರಮೇಳ: ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ
ಮೂಡುಬಿದಿರೆ: ಮಕ್ಕಳ ಜೀವನ ಯಾಂತ್ರೀಕೃತವಾಗಬಾರದು. ಬದುಕು ಎಂದರೆ ಅವರಿಗೆ ಕೇವಲ ಕಾಂಕ್ರೀಟು ಕಾಡು ಆಗಬಾರದು. ಅದರ ಬದಲು ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಮಕ್ಕಳಿಗೆ ಜಲ, ಪರಿಸರದ ಬಗ್ಗೆ ಶಿಕ್ಷಣದಲ್ಲಿ ಮಾತ್ರವಲ್ಲ, ಮನೆಯಲ್ಲಿ ಕೂಡ ಪೋಷಕರು ತಿಳಿ ಹೇಳಬೇಕು. ಬೇಸಿಗೆ ಶಿಬಿರಗಳಿಂದ ಪ್ರಕೃತಿ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕೆಂದು ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಹತ್ತು ದಿನಗಳು ನಡೆಯುವ ಚಿಣ್ಣರಮೇಳ ಮಕ್ಕಳ
ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ
ಮೂಡುಬಿದಿರೆ: ತುಳು ಸಂಸ್ಕøತಿ, ಭಾಷೆ, ಆಚಾರ-ವಿಚಾರ, ಊಟೋಪಾಚಾರ, ಉಡುಗೆ-ತೊಡುಗೆ, ಆಟೋಟಗಳು ಇದರಲ್ಲಿ ಭಾಷೆ ಅಡಗಿದೆ ಅದ್ದರಿಂದ ಈ ಭಾಷೆಯ ಸಂಸ್ಕೃತಿಯನ್ನು ಉಳಿಸಿ ಮುಂದೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗಣೇಶ್ ಅಮೀನ್ ಸಂಕಮಾರು ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘದ ವತಿಯಿಂದ ಎಂ.ಬಿ.ಎ ಸೆಮಿನಾರ್ ಹಾಲ್‍ನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರಾವಳಿ ಭಾಗದ ತಿಂಡಿ-ತಿನಸುಗಳು ವಿದೇಶದಲ್ಲಿ ಪ್ರಾಮುಖ್ಯತೆಯನ್ನು ಪಡೆಯಲು
ಹಿರಿಯ ಪತ್ರಕರ್ತ, ಅಂಕೋಲೆಯ ದಿನಕರ ದೇಸಾಯಿ ಸಂಪಾದಕತ್ವದ `ಜನಸೇವಕ’ ವಾರಪತ್ರಿಕೆಯ ಅಮ್ಮೆಂಬಳ ಆನಂದ
ಹಿರಿಯ ಪತ್ರಕರ್ತ, ಅಂಕೋಲೆಯ ದಿನಕರ ದೇಸಾಯಿ ಸಂಪಾದಕತ್ವದ `ಜನಸೇವಕ’ ವಾರಪತ್ರಿಕೆಯ ಅಮ್ಮೆಂಬಳ ಆನಂದರವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಳ್ವಾಸ್ ನ್ಯೂಸಿಯಮ್ಮಿನ ಸಂಯೋಜಕ ಶ್ರೀಕರ ಎಲ್. ಭಂಡಾರಕರ್‍ರಿಗೆ ಆ ಪತ್ರಿಕೆಯ ಸಂಚಿಕೆಗಳ ಏಳನೇ ಸಂಪುಟ ಮತ್ತು ಎರಡು ಪುಸ್ತಕಗಳನ್ನು ಅರ್ಪಿಸಿದರು.